ಕೊಪ್ಪ: ‘ಯಡಿಯೂರಪ್ಪ ಅವರ ನೇತೃತ್ವದ ರಾಜ್ಯ ಬಿಜೆಪಿ ಸರ್ಕಾರ ರೈತ ಪರವಾದ ಆಡಳಿತ ನಡೆಸುತ್ತಿದ್ದು, ಶೃಂಗೇರಿ ಕ್ಷೇತ್ರಕ್ಕೆ ಅನೇಕ ರೈತ ಪರವಾದ ಅನುದಾನ ನೀಡಿದ ಹೆಗ್ಗಳಿಕೆಯಿದೆ’ ಎಂದು ತಾಲ್ಲೂಕು ಬಿಜೆಪಿ ಅಧ್ಯಕ್ಷ ಅದ್ದಡ ಸತೀಶ್ ಹೇಳಿದ್ದಾರೆ.

‘ಕಳೆದ ಬಾರಿ ಅತಿವೃಷ್ಟಿಯಲ್ಲಿ ಎಲ್ಲಾ ರೈತರಿಗೂ ಬೆಳೆ ಪರಿಹಾರವಾಗಿ ಎಕರೆಗೆ ₹ 12 ಸಾವಿರದಂತೆ 5 ಎಕರೆಗೆ ₹ 60 ಸಾವಿರ ಪರಿಹಾರ ನೀಡಿದ್ದಾರೆ. ಹಿಂದೆ ಯಾವ ಸರ್ಕಾರವು ಇಷ್ಟು ದೊಡ್ಡಮಟ್ಟದ ಪರಿಹಾರ ನೀಡಿದ ಉದಾಹರಣೆ ಇಲ್ಲ. ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಆಡಳಿತದಲ್ಲಿದ್ದಾಗ ಯಾವ ಪರಿಹಾರ ನೀಡಿತ್ತು ಎಂಬುದನ್ನು ಇಲ್ಲಿನ ಕಾಂಗ್ರೆಸ್ ಮುಖಂಡರು ತಿಳಿಸಲಿ’ ಎಂದು ಸವಾಲು ಹಾಕಿದ್ದಾರೆ.

‘ರೈತರ ಹತ್ತಿರ ಬೆಳೆ ಪರಿಹಾರದ ಅರ್ಜಿ ಹಾಗೂ ಮೈಲುತುತ್ತಾ ಸಹಾಯಧನಕ್ಕೆ ಅರ್ಜಿ ಸ್ವೀಕರಿಸಲಾಗುತ್ತಿದೆ. ಜತೆಗೆ ಬೆಳೆ ಸಮೀಕ್ಷೆ ಕಾರ್ಯ ಕೂಡ ನಡೆಯುತ್ತಿದೆ. ಇನ್ನು ಅರ್ಜಿ ಸ್ವೀಕಾರವೇ ಮುಗಿದಿಲ್ಲ. ಇಂತಹ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರು ಪರಿಹಾರ ಕೊಡಿ ಎಂದು ನಾಟಕೀಯವಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ಅತಿವೃಷ್ಟಿ ಸ್ಥಳಕ್ಕೆ ಭೇಟಿ ನೀಡಿ ಸರ್ಕಾರಕ್ಕೆ ವರದಿ ನೀಡುವ ಕೆಲಸ ಕ್ಷೇತ್ರದ ಶಾಸಕರು ಮಾಡಬೇಕು’ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.