ಚಿಕ್ಕಮಗಳೂರು: ಗ್ರಾಮ ಪಂಚಾಯಿತಿ ಚುನಾವಣೆಗೆ ನಾಮಪತ್ರ ಸಲ್ಲಿಕೆ ಮುಗಿದಿದೆ. 35 ಪಂಚಾಯಿತಿಗಳ 274 ಸ್ಥಾನಗಳಿಗೆ 889 ನಾಮಪತ್ರ ಸಲ್ಲಿಕೆಯಾಗಿವೆ. ಚಿಕ್ಕಮಗಳೂರು ತಾಲ್ಲೂಕಿನ ಮೇಲಿನಹುಲುವತ್ತಿ ಹಾಗೂ ತರೀಕೆರೆ ತಾಲ್ಲೂಕಿನ ಕೆಂಚಿಕೊಪ್ಪ ಪಂಚಾಯಿತಿಗಳಿಗೆ ಒಂದೂ ನಾಮಪತ್ರ ಸಲ್ಲಿಕೆಯಾಗಿಲ್ಲ.

ಚಿಕ್ಕಮಗಳೂರು ತಾಲ್ಲೂಕಿನ ಮೇಲಿನ ಹುಲುವತ್ತಿಯ 5, ಐ.ಡಿ.ಪೀಠದ 1 ಹಾಗೂ ಕೆಂಚಿಕೊಪ್ಪದ 9ಒಟ್ಟು 15 ಸ್ಥಾನಗಳಿಗೆ ನಾಮಪತ್ರ ಸಲ್ಲಿಕೆಯಾಗಿಲ್ಲ.

ಮೇಗೆ ಅವಧಿ ಮುಕ್ತಾಯವಾಗುವ ಪಂಚಾಯಿತಿಗಳ ತಾಲ್ಲೂಕುವಾರು ನಾಮಪತ್ರ ಸಲ್ಲಿಕೆ ಅಂಕಿಅಂಶ: ಚಿಕ್ಕಮಗಳೂರು –6 ಪಂಚಾಯಿತಿಗಳ 59 ಸ್ಥಾನಗಳಿಗೆ 190, ಕಡೂರು– 5 ಪಂಚಾಯಿತಿಗಳ 61 ಸ್ಥಾನಗಳಿಗೆ 200, ಕೊಪ್ಪ– 1 ಪಂಚಾಯಿತಿಯ 17 ಸ್ಥಾನಗಳಿಗೆ 66 ಹಾಗೂ ಮೂಡಿಗೆರೆ– 1 ಪಂಚಾಯಿತಿಯ 5 ಸ್ಥಾನಗಳಿಗೆ 18 ನಾಮಪತ್ರಗಳು ಸಲ್ಲಿಕೆಯಾಗಿವೆ. ಒಟ್ಟು 13 ಪಂಚಾಯಿತಿಗಳ 142 ಸ್ಥಾನಗಳಿಗೆ 474 ನಾಮಪತ್ರಗಳು ಸಲ್ಲಿಕೆಯಾಗಿವೆ.

ವಿವಿಧ ಕಾರಣದಿಂದ ಉಪಚುನಾವಣೆ ನಡೆಯಲಿರುವ ಪಂಚಾಯಿತಿಗಳ ತಾಲ್ಲೂಕುವಾರು ನಾಮಪತ್ರ ಸಲ್ಲಿಕೆ ಅಂಕಿಅಂಶ: ಚಿಕ್ಕಮಗಳೂರು–8 ಪಂಚಾಯಿತಿಗಳ 64 ಸ್ಥಾನಗಳಿಗೆ 221, ಕಡೂರು– 4 ಪಂಚಾಯಿತಿಗಳ 5 ಸ್ಥಾನಗಳಿಗೆ 11, ಕೊಪ್ಪ– 1 ಪಂಚಾಯಿತಿಯ 2 ಸ್ಥಾನಗಳಿಗೆ 4, ಮೂಡಿಗೆರೆ– 5 ಪಂಚಾಯಿತಿಗಳ 33 ಸ್ಥಾನಗಳಿಗೆ 94, ಎನ್.ಆರ್.ಪುರ– 4 ಪಂಚಾಯಿತಿಗಳ 28 ಸ್ಥಾನಗಳಿಗೆ 85 ನಾಮಪತ್ರಗಳು ಸಲ್ಲಿಕೆಯಾಗಿವೆ. ಒಟ್ಟು 22 ಪಂಚಾಯಿತಿಗಳ 132 ಸ್ಥಾನಗಳಿಗೆ 415 ನಾಮಪತ್ರಗಳು ಸಲ್ಲಿಕೆಯಾಗಿವೆ.

ಚಿಕ್ಕಮಗಳೂರು ತಾಲ್ಲೂಕು ಪಂಚಾಯಿತಿವಾರು ಅಂಕಿಅಂಶ

ಅವಧಿ ಮುಗಿಯವ ಪಂಚಾಯಿತಿಗಳು: ಕಳಸಾಪುರ–14 ಸ್ಥಾನಗಳಿಗೆ 42, ಈಶ್ವರಹಳ್ಳಿ– 10 ಸ್ಥಾನಗಳಿಗೆ 34, ಬೆಳವಾಡಿ– 13 ಸ್ಥಾನಗಳಿಗೆ 36, ಮಾಚೇನಹಳ್ಳಿ– 7 ಸ್ಥಾನಗಳಿಗೆ 21, ಕುರುಬರ ಬೂದಿಹಾಳ್– 6 ಸ್ಥಾನಗಳಿಗೆ 34 ಹಾಗೂ ಸಿಂಧಿಗೆರೆ– 9 ಸ್ಥಾನಗಳಿಗೆ 23 ನಾಮಪತ್ರ ಸಲ್ಲಿಕೆಯಾಗಿವೆ. ಒಟ್ಟು 6 ಪಂಚಾಯಿತಿಗಳ 59 ಸ್ಥಾನಗಳಿಗೆ 190 ನಾಮಪತ್ರ ಸಲ್ಲಿಕೆಯಾಗಿವೆ.

ಉಪಚುನಾವಣೆ ಪಂಚಾಯಿತಿಗಳು: ಐ.ಡಿ ಪೀಠ– 4 ಸ್ಥಾನಗಳಿಗೆ 15, ಶಿರವಾಸೆ– 11 ಸ್ಥಾನಗಳಿಗೆ 42, ಬಿದರೆ– 7 ಸ್ಥಾನಗಳಿಗೆ 29, ಕಡವಂತಿ 7 ಸ್ಥಾನಗಳಿಗೆ 15, ದೇವದಾನ–17 ಸ್ಥಾನಗಳಿಗೆ 67, ಹುಯಿಗೆರೆ– 9 ಸ್ಥಾನಗಳಿಗೆ 23, ಬಸರವಳ್ಳಿ– 8ಸ್ಥಾನಗಳಿಗೆ 28, ಕೆ.ಆರ್.ಪೇಟೆ–1 ಸ್ಥಾನಕ್ಕೆ 2 ನಾಮಪತ್ರಗಳು ಸಲ್ಲಿಕೆಯಾಗಿವೆ.

ಒಟ್ಟು 8 ಪಂಚಾಯಿತಿಗಳ 64 ಸ್ಥಾನಗಳಿಗೆ 221ನಾಮಪತ್ರ ಸಲ್ಲಿಕೆಯಾಗಿವೆ.

ಚುನಾವಣೆಯಿಂದ ಹೊರಗುಳಿಯುವ ನಿರ್ಧಾರದ ಸುತ್ತ...

ಮುಳ್ಳಯ್ಯನಗಿರಿ ಮೀಸಲು ಸಂರಕ್ಷಿತ ಪ್ರದೇಶ ಪ್ರಸ್ತಾವ ವಿರೋಧಿಸಿ ಮೇಲಿನಹುಲುವತ್ತಿ ಪಂಚಾಯಿತಿಯವರು, ಪಕ್ಕಾಪೋಡಿ ಇತರ ಬೇಡಿಕೆ ಮುಂದಿಟ್ಟುಕೊಂಡು ತರೀಕೆರೆ ತಾಲ್ಲೂಕಿನ ಕೆಂಚಿಕೊಪ್ಪ ಪಂಚಾಯಿತಿಯವರು ಚುನಾವಣೆಯಿಂದ ಹೊರಗುಳಿಯುವ ಹೆಜ್ಜೆ ಇಟ್ಟಿದ್ದಾರೆ.

ಮೇಲಿನಹುಲುವತ್ತಿಯವರು ಡಿಸೆಂಬರ್ನಲ್ಲಿ ನಡೆದ ಚುನಾವಣೆಯಿಂದಲೂ ಹೊರಗುಳಿದಿದ್ದರು. ಹೀಗಾಗಿ ಈ ಪಂಚಾಯಿತಿಗೂ ಈಗ ಉಪಚುನಾವಣೆ ಘೋಷಣೆಯಾಗಿತ್ತು. ಈ ಬಾರಿಯೂ ಮತ್ತೆ ಹೊರಗುಳಿದಿದೆ.

ಚುನಾವಣೆ ಕಾವು...

ಗ್ರಾಮ ಪಂಚಾಯಿತಿ ಚುನಾವಣೆ ಕಾವು ಏರುತ್ತಿದೆ. ಗ್ರಾಮಗಳಲ್ಲಿ ಪ್ರಚಾರದ ಭರಾಟೆ ಜೋರಾಗಿದೆ. ಮತದಾರರ ಒಲೈಕೆಗೆ ಕಸರತ್ತುಗಳು, ಲೆಕ್ಕಚಾರಗಳು ಶುರುವಾಗಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.