ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಮಗಳೂರು ಜಿಲ್ಲೆಯಿಂದ ಆಯ್ಕೆಯಾದ ಏಕೈಕ ಪಂಚಾಯಿತಿ

ಮಿಷನ್ ಅಂತ್ಯೋದಯ: ಬಂದಾರು ಗ್ರಾಮ ಪಂಚಾಯಿತಿ ಆಯ್ಕೆ
Last Updated 13 ಮಾರ್ಚ್ 2021, 4:33 IST
ಅಕ್ಷರ ಗಾತ್ರ

ಬೆಳ್ತಂಗಡಿ: ತಾಲ್ಲೂಕಿನ ಬಂದಾರು ಗ್ರಾಮ ಪಂಚಾಯಿತಿ ‘ಮಿಷನ್ ಅಂತ್ಯೋ ದಯ’ದಡಿ 2015ರಿಂದ 2020ರವರೆಗೆ ಮಾಡಿದ ಅಭಿವೃದ್ಧಿ ಕಾರ್ಯಗಳನ್ನು ಗುರುತಿಸಿ, ದೇಶದಲ್ಲಿಯೇ ಅತಿ ಹೆಚ್ಚು ಅಭಿವೃದ್ಧಿ ಹೊಂದಿದ 75 ಗ್ರಾಮ ಪಂಚಾಯಿತಿಗಳ ಪೈಕಿ ಒಂದು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಮಿಷನ್ ಅಂತ್ಯೋದಯದಡಿ ಜಿಲ್ಲೆಯಿಂದ ಆಯ್ಕೆಯಾದ ಏಕೈಕ ಗ್ರಾಮ ಪಂಚಾಯಿತಿ ಇದಾಗಿದೆ. ಭಾರತ ಸರ್ಕಾರದ ಪಂಚಾಯತ್ ರಾಜ್ ಮಂತ್ರಾಲಯದ ಕಾರ್ಯ ದರ್ಶಿ ಶುಕ್ರವಾರ ವೆಬಿನಾರ್ ಮುಖಾಂತರ ನಡೆಸಿದ ಕಾರ್ಯಕ್ರಮ ದಲ್ಲಿ, ಗ್ರಾಮ ಪಂಚಾಯಿತಿಯ ಆಡಳಿತ ಸಮಿತಿಯನ್ನು ಅಭಿನಂದಿಸಿದರು.

75ನೇ ಸ್ವಾತಂತ್ರೋತ್ಸವ ಸಂದರ್ಭ ದಲ್ಲಿ ಕೇಂದ್ರ ಸರ್ಕಾರವು ಬಂದರು ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಕಾರ್ಯಗಳನ್ನು ಗುರುತಿಸಿದ್ದು, ಅಖಿಲ ಭಾರತ ಮಟ್ಟದಲ್ಲಿ 75 ಗ್ರಾಮ ಪಂಚಾಯಿತಿಗಳ ಪೈಕಿ ಇದು ಒಂದಾಗಿದೆ. ರಾಜ್ಯದಲ್ಲಿ ಕೇವಲ 5 ಪಂಚಾಯಿತಿಗಳು ಈ ಪಟ್ಟಿಯಲ್ಲಿವೆ.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪರಮೇಶ್ವರಿ ಕೆ.ಗೌಡ , ಉಪಾಧ್ಯಕ್ಷ ಗಂಗಾಧರ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮೋಹನ್ ಬಂಗೇರ, ಗ್ರಾಮ ಪಂಚಾಯಿತಿ ಸದಸ್ಯರು, ಅಧಿಕಾರಿಗಳು ಹಾಗೂ ಸಿಬ್ಬಂದಿ ವೆಬಿನಾರ್‌ನಲ್ಲಿ ಭಾಗವಹಿಸಿದ್ದರು.

‘ಪಂಚಾಯಿತಿಯಿಂದ ನಡೆದ ಪ್ರತಿಯೊಂದು ಅಭಿವೃದ್ಧಿ ಕಾರ್ಯಗಳನ್ನು ಈ ನೆಲೆಯಿಂದ ಪರಿಗಣಿಸಲಾಗಿದೆ. ನರೇಗಾ ಯೋಜನೆ, ಸ್ವಚ್ಛತೆ, ಜಾಗೃತಿ, ಆರೋಗ್ಯ ಮಾಹಿತಿ, ರಕ್ತದಾನ ಶಿಬಿರ, ಸರ್ಕಾರಿ ಯೋಜನೆಗಳು ಸಾರ್ವಜನಿಕರಿಗೆ ತಲುಪಿಸುವುದು ಹೀಗೆ ಪ್ರತಿ ವಿಭಾಗಗಳಲ್ಲಿ ಹೆಚ್ಚು ಅಂಕಗಳನ್ನು ಪಡೆದದ್ದನ್ನು ಗಮನಿಸಿ ಪಂಚಾಯಿತಿ ಈ ಗೌರವಕ್ಕೆ ಪಾತ್ರವಾಗಿದೆ’ ಎಂದು ಮೋಹನ್ ಬಂಗೇರ ಹೇಳುತ್ತಾರೆ.

‘ನನ್ನ ಅವಧಿಯಲ್ಲಿ ಸರ್ಕಾರದ ಯೋಜನೆ ಪ್ರಾಮಾಣಿಕವಾಗಿ ಜನ ಸಾಮಾನ್ಯರಿಗೆ ತಲುಪಿಸಿದ್ದೇವೆ. ಮಾಡಿದ ಕೆಲಸಗಳನ್ನು ಗುರುತಿಸಿದ್ದು ಅತೀವ ಖುಷಿ ನೀಡಿದೆ’ ಎಂದು ನಿಕಟಪೂರ್ವ ಅಧ್ಯಕ್ಷ ಉದಯ ಬಿ.ಕೆ. ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT