ಮಂಗಳವಾರ, ಜನವರಿ 18, 2022
27 °C

ಹೇಮಗಿರಿ ಮಲ್ಲಿಕಾರ್ಜುನ ರಥೋತ್ಸವ ಸಂಪನ್ನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಡೂರು: ತಾಲ್ಲೂಕಿನ ಹೇಮಗಿರಿ ಮಲ್ಲಿಕಾರ್ಜುನ ಸ್ವಾಮಿ ರಥೋತ್ಸವ ಭಾನುವಾರ ಸಾವಿರಾರು ಭಕ್ತರ ನಡುವೆ ಸಂಭ್ರಮದಿಂದ ನಡೆಯಿತು.

ಬೆಳಿಗ್ಗೆ ಹೇಮಗಿರಿಯ ಮೇಲಿ ರುವ ಮಲ್ಲಿಕಾರ್ಜುನ ಸ್ವಾಮಿಯ ಮೂಲಸ್ಥಾನ ದಲ್ಲಿ ವಿಶೇಷ ರುದ್ರಾಭಿಷೇಕ ಪೂಜೆಗಳು ನಡೆದವು. ನಂತರ ಸರ್ವಾಲಂಕೃತ ಸ್ವಾಮಿಯ ಉತ್ಸವ ಮೂರ್ತಿಯನ್ನು ಸಕಲ ಮರ್ಯಾದೆಯೊಂದಿಗೆ ಗಿರಿಯ ಮೇಲಿಂದ ಕೆಳಗೆ ಕರೆತರಲಾಯಿತು.

ಸಾಂಪ್ರದಾಯಿಕ ವಿಧಿವಿಧಾನ ಗಳೊಂದಿಗೆ ಮೂಲಾ ನಕ್ಷತ್ರದ ಸಮಯ ದಲ್ಲಿ ರಥದಲ್ಲಿ ಸ್ವಾಮಿಯ ಉತ್ಸವ ಮೂರ್ತಿಯನ್ನು ಪ್ರತಿಷ್ಠಾಪಿಸಲಾಯಿತು. ಆಗಮಿಕರಾದ ತಿಪಟೂರಿನ ಕಾಡಶೆಟ್ಟಿ ಹಳ್ಳಿಯ ವೇದಮೂರ್ತಿ ಮಹೇಶ್ವರಯ್ಯ ಶಾಸ್ತ್ರಿ ಮತ್ತು ಬಾಗಿಲಘಟ್ಟದ ಜಗದೀಶ್‌ಶಾಸ್ತ್ರಿ ನೇತೃತ್ವದಲ್ಲಿ ಧಾರ್ಮಿಕ ಪೂಜಾ ವಿಧಿವಿಧಾನಗಳು ಜರುಗಿದವು.

ದೇಗುಲದ ಸಮಿತಿಯ ವತಿಯಿಂದ ದಾಸೋಹದ ವ್ಯವಸ್ಥೆ ಕಲ್ಪಿಸಲಾಗಿತ್ತು. ಈ ಸಂದರ್ಭದಲ್ಲಿ ಸುತ್ತಮುತ್ತಲಿನ ಗ್ರಾಮಸ್ಥರು ರಥದ ಸುತ್ತ ಪಾನಕದ ಎತ್ತಿನಗಾಡಿ ಓಡಿಸಿ ಸಂಭ್ರಮಪಟ್ಟರು.

ದೇಗುಲ ವ್ಯವಸ್ಥಾಪನಾ ಸಮಿತಿ ಗೌರವಾಧ್ಯಕ್ಷ ಮಾಜಿ ಶಾಸಕ ಕೆ.ಬಿ.ಮಲ್ಲಿಕಾರ್ಜುನ್, ಅಧ್ಯಕ್ಷ ಕಪನೇಗೌಡ, ಧರ್ಮದರ್ಶಿಗಳಾದ ಮಂಜಣ್ಣ, ಎಲ್.ಎಂ. ಪರಮೇಶ್, ಯೋಗೀಶಪ್ಪ, ವೀರೂಪಾಕ್ಷಪ್ಪ, ರಾಜಪ್ಪ, ಗಿರೀಶ್, ನಂದೀಶ್‌ಬಾಬು, ಜಗಯ್ಯಶಾಸ್ತ್ರಿ ಇದ್ದರು. ಅಂಚೆಚೋಮನಹಳ್ಳಿಯ ಧರ್ಮಸ್ಥಳ ಪಾದಯಾತ್ರೆ ಸೇವಾ ಸಮಿತಿಯ ವತಿಯಿಂದ ರಕ್ತದಾನ ಶಿಬಿರವನ್ನು ನಡೆಸಲಾಯಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.