ವ್ಯಕ್ತಿತ್ವ ವಿಕಸನಕ್ಕೆ ಭಾಷಾ ಸಂಪತ್ತು ಸಹಕಾರಿ: ಬೆಳವಾಡಿ ಮಂಜುನಾಥ್

7

ವ್ಯಕ್ತಿತ್ವ ವಿಕಸನಕ್ಕೆ ಭಾಷಾ ಸಂಪತ್ತು ಸಹಕಾರಿ: ಬೆಳವಾಡಿ ಮಂಜುನಾಥ್

Published:
Updated:
Deccan Herald

ಚಿಕ್ಕಮಗಳೂರು: ಭಾಷಾ ಸಂಪತ್ತು ವ್ಯಕ್ತಿತ್ವ ವಿಕಸನಕ್ಕೆ ಪೂರಕವಾಗಿದೆ ಎಂದು ಸಾಹಿತಿ ಬೆಳವಾಡಿ ಮಂಜುನಾಥ್ ಅಭಿಪ್ರಾಯಪಟ್ಟರು.

ಜಿಲ್ಲಾ ನೆಹರು ಯುವ ಕೇಂದ್ರದ ವತಿಯಿಂದ ತಾಲ್ಲೂಕಿನ ಮೂಗ್ತಿಹಳ್ಳಿ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಶುಕ್ರವಾರ ಆಯೋಜಿಸಿದ್ದ ‘ಹಿಂದಿ ದಿವಸ್’ ಪಾಕ್ಷಿಕ ಆಚರಣೆ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಬಾಷೆಗಳು ಬಾಂಧವ್ಯ ಬೆಸೆಯುವ ಕೊಂಡಿಯಾಗಿವೆ. ದೇಶದ ಬಹುತೇಕ ರಾಜ್ಯದಲ್ಲಿ ಹಿಂದಿ ಪ್ರಚಲಿತದಲ್ಲಿದೆ. ಹಿಂದಿ ಕೇವಲ ಪಠ್ಯದಲ್ಲಿನ ವಿಷಯವಾಗಬಾರದು. ಅದನ್ನು ಯುವಪೀಳಿಗೆ ಸಂಪರ್ಕ ಭಾಷೆಯಾಗಿ ಬಳಸಿಕೊಳ್ಳಬೇಕು ಎಂದರು.

ಉಪನ್ಯಾಸಕ ರಮೇಶ್ ಬೋಂಗಳೆ ಮಾತನಾಡಿ, ‘ಪ್ರಾದೇಶಿಕ ಅಸಮಾನತೆ ನಿವಾರಿಸಲು, ಭಾವೈಕ್ಯ ಮೂಡಿಸಲು ಹಿಂದಿ ಸಹಕಾರಿಯಾಗಿದೆ. ಸಾಹಿತ್ಯಿಕವಾಗಿ ಹಿಂದಿ ಸಮೃದ್ಧಿಯಾಗಿದೆ. ಆ ಭಾಷೆಯನ್ನು ಬೇಗನೆ ಕಲಿಯಬಹುದು’ ಎಂದರು.

ಪ್ರಾಚಾರ್ಯ ಶಿವಣ್ಣ ಮಾತನಾಡಿ, ‘ಪ್ರಾಥಮಿಕ ಹಂತದಲ್ಲಿಯೇ ಮಕ್ಕಳಿಗೆ ಹಿಂದಿ ಭಾಷೆ ಕಲಿಯಲು ಮಕ್ಕಳಿಗೆ ಪೋಷಕರು ಪೂರಕವಾದ ವಾತಾವರಣ ನಿರ್ಮಿಸಿಕೊಡಬೇಕು’ ಎಂದರು.

ಶಿಕ್ಷಕ ಪ್ರಭಾಕರ್, ನೆಹರು ಯುವ ಕೇಂದ್ರದ ರಾಷ್ಟ್ರೀಯ ಯುವದಳ ಕಾರ್ಯಕರ್ತರಾದ ರವಿಚಂದ್ರ, ಎಚ್.ಕೆ.ವಿದ್ಯಾಶ್ರೀ ಇದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !