ಶನಿವಾರ, 13 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕಳಸ ರೋಟರಿ ಸಂಸ್ಥೆ ಅಧ್ಯಕ್ಷರಾಗಿ ಕೆ.ಆರ್.ಪ್ರಭಾಕರ್ ಪದಗ್ರಹಣ

Published 7 ಜುಲೈ 2024, 14:15 IST
Last Updated 7 ಜುಲೈ 2024, 14:15 IST
ಅಕ್ಷರ ಗಾತ್ರ

ಕಳಸ: ಇಲ್ಲಿನ ರೋಟರಿ ಸಂಸ್ಥೆಯ ಅಧ್ಯಕ್ಷರಾಗಿ ಕೆಪಿಸಿಸಿ ಸದಸ್ಯ ಕೆ.ಆರ್.ಪ್ರಭಾಕರ್ ಶನಿವಾರ ಅಧಿಕಾರ ಸ್ವೀಕರಿಸಿದರು.

ರೋಟರಿ ಸಹಾಯಕ ಗವರ್ನರ್ ಎಚ್.ಎಸ್.ನಟೇಶ್ ಪದಗ್ರಹಣ ನೆರವೇರಿಸಿ ಮಾತನಾಡಿ, ಕಳೆದ ಸಾಲಿನ ಅಧ್ಯಕ್ಷೆ ಸಾವಿತ್ರಿ ಜೋಷಿ ಮತ್ತು ತಂಡ ಅತ್ಯಂತ ವೈವಿಧ್ಯಮಯ ಸಾಮಾಜಿಕ ಚಟುವಟಿಕೆ ಮೂಲಕ ಸಮಾಜಕ್ಕೆ ಕೊಡುಗೆ ಕೊಟ್ಟಿದ್ದಾರೆ ಎಂದು ಹೇಳಿದರು. 

ಕೆ.ಆರ್.ಪ್ರಭಾಕರ್ ಮಾತನಾಡಿ, ‘ಆರೋಗ್ಯ, ಶಿಕ್ಷಣ ಮತ್ತಿತರ ಸಾಮಾಜಿಕ ಕ್ಷೇತ್ರದಲ್ಲಿ ಬಹಳಷ್ಟು ಕೆಲಸ ಮಾಡುವ ಉತ್ಸಾಹ ಹೊಂದಿದ್ದೇನೆ. ಈ ಸಾಲಿನಲ್ಲಿ ಸದಸ್ಯರ ಸಹಕಾರದೊಂದಿಗೆ ಮಹತ್ವದ ಚಟುವಟಿಕೆಗಳನ್ನು ಕೈಗೊಳ್ಳುವ ಉದ್ದೇಶ ಇದೆ’ ಎಂದರು.

ಕಾರ್ಯದರ್ಶಿಯಾಗಿ ಪಿ.ಎ.ಕುಮಾರಸ್ವಾಮಿ, ಖಜಾಂಚಿಯಾಗಿ ಪಣೀಶ್, ತರಬೇತುದಾರರಾಗಿ ಗಿರಿಜಾಶಂಕರ್ ಜೋಷಿ, ಸಾರ್ಜೆಂಟ್ ಆಗಿ ಅಭಿನಂದನ್ ಬಲ್ಲಾಳ್, ಮುಂದಿನ ಸಾಲಿನ ಅಧ್ಯಕ್ಷರಾಗಿ ಎಚ್.ಜಿ.ಮಹೇಂದ್ರ ಆಯ್ಕೆಯಾದರು.

ರೋಟರಿ ನಿರ್ದೇಶಕರಾಗಿ ರಾಘವ, ಬ್ರಹ್ಮದೇವ, ರಿತೇಶ್, ಸಂದೀಪ್, ಸುಗಮ್, ಕಿರಣ್ ಶೆಟ್ಟಿ, ಕೆ.ಕೆ.ಬಾಲಕೃಷ್ಣ ಭಟ್, ವಿಕ್ರಮ್ ಪ್ರಭು, ಸಂತೋಷ್ ಪೂಜಾರಿ, ರಾಜಗೋಪಾಲ ಜೋಷಿ, ಕೆ.ಆರ್.ಭಾಸ್ಕರ್ ಅಧಿಕಾರ ಸ್ವೀಕರಿಸಿದರು.

ಇದಕ್ಕೂ ಮುನ್ನ ಇನ್ನರ್‌ವೀಲ್‌ನ ಅಧ್ಯಕ್ಷರಾಗಿ ನಳಿನಾಕ್ಷಿ ಪ್ರಸನ್ನ ಅಧಿಕಾರ ಸ್ವೀಕರಿಸಿದರು. ಕಾರ್ಯದರ್ಶಿಯಾಗಿ ಡಾ.ಮಾಳವಿಕಾ, ಖಜಾಂಚಿಯಾಗಿ ವೈಶಾಲಿ ಜೋಷಿ, ಪದಾಧಿಕಾರಿಗಳಾಗಿ ಶಮಿತಾ ಕಿರಣ್ ಶೆಟ್ಟಿ ಮತ್ತು ಶ್ರೀವಾಣಿ, ನಿರ್ದೇಶಕರಾಗಿ ಉಷಾ ಕುಮಾರ್, ನಿತ್ಯಾ ಸಂದೀಪ್, ಲೀಲಾ ಶ್ರೀಕಾಂತ್, ಕವಿತಾ ಪ್ರಕಾಶ್ ಅಧಿಕಾರ ಸ್ವೀಕರಿಸಿದರು.

ಹೊರನಾಡಿನ ಭೀಮೇಶ್ವರ ಜೋಷಿ ಮಾತನಾಡಿ, ‘ರೋಟರಿ ಮತ್ತು ಇನ್ನರ್‌ವೀಲ್ ಸಂಸ್ಥೆಗಳು ಎಲ್ಲ ವರ್ಗದ ಜನರ ಪರವಾಗಿ ಕೆಲಸ ಮಾಡುತ್ತಿವೆ. ಮಾದರಿ ಸಂಸ್ಥೆಗಳೆಂಬ ಹೆಗ್ಗಳಿಕೆಗೆ ಪ್ರಾತ್ರವಾಗಿವೆ’ ಎಂದರು. ರಾಜಲಕ್ಷ್ಮಿ ಜೋಷಿ, ರಾಜಗೋಪಾಲ ಜೋಷಿ, ನವೀನ್ ಲಾಯ್ಡ್ ಮಿಸ್ಕಿತ್ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT