ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಪ್ಪ | ಸುಸಜ್ಜಿತ ಸೌಲಭ್ಯದ ಸರ್ಕಾರಿ ಕಾಲೇಜು

ಕೊಪ್ಪ: ಕಲಿಕೆಗೆ ಪೂರಕ ವಾತಾವರಣ; ಭವಿಷ್ಯ ರೂಪಿಸಿಕೊಳ್ಳಲು ಹಲವು ಅವಕಾಶ
Published 8 ಮೇ 2024, 6:53 IST
Last Updated 8 ಮೇ 2024, 6:53 IST
ಅಕ್ಷರ ಗಾತ್ರ

ಕೊಪ್ಪ: ನಾಲ್ಕು ದಶಕಗಳ ಹಿಂದೆ ಆರಂಭಗೊಂಡ ಪಟ್ಟಣ ಸಮೀಪದ ಬಾಳಗಡಿಯಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಾವಿರಾರು ವಿದ್ಯಾರ್ಥಿಗಳ ಭವಿಷ್ಯ ರೂಪಿಸಿದೆ.

ಕಲಿಕೆಗೆ ಪೂರಕ ವಾತಾವರಣವಿರುವ ಕಾಲೇಜಿನಲ್ಲಿ ₹1 ಕೋಟಿ ವೆಚ್ಛದ ಗ್ರಂಥಾಲಯ ಕಟ್ಟಡವಿದ್ದು, 24 ಸಾವಿರ ಪುಸ್ತಕಗಳಿವೆ. ₹3.40 ಕೋಟಿ ವೆಚ್ಛದ ಸ್ನಾತಕೋತ್ತರ ಅಧ್ಯಯನ ಕೇಂದ್ರವಿದೆ. ಸದ್ಯ ಎಂ.ಕಾಂ. ಸ್ನಾತಕೋತ್ತರ ತರಗತಿಗಳು ನಡೆಯುತ್ತಿದ್ದು, ಈ ಬಾರಿ ಎಂ.ಎ ಕನ್ನಡ ಆರಂಭಗೊಳ್ಳುವ ನಿರೀಕ್ಷೆ ಇದೆ.

ವಿದ್ಯಾರ್ಥಿಗಳ ಅನುಕೂಲಕ್ಕಾಗಿ ₹2.25 ಕೋಟಿ ವೆಚ್ಛದ ಒಳಾಂಗಣ ಕ್ರೀಡಾಂಗಣ ನಿರ್ಮಾಣ ನಡೆಯುತ್ತಿದೆ. ಇದರಲ್ಲಿ ಮಲ್ಟಿ ಜಿಮ್, ವಾಲಿಬಾಲ್ ಕೋರ್ಟ್, ಶಟಲ್ ಕೋರ್ಟ್, ಕಬಡ್ಡಿ ಕೋರ್ಟ್, ಪ್ರೋ ಕಬಡ್ಡಿ ಇಂಟರ್ ನ್ಯಾಷನಲ್ ಆಡಿಸಬಹುದು. ₹3.50 ಲಕ್ಷ ಮೊತ್ತದ ಸಿಂಥೆಟಿಕ್ ಮ್ಯಾಟ್ ಬಂದಿದೆ.

ಒಳಾಂಗಣ ಕ್ರೀಡಾಂಗಣಕ್ಕೆ ಅಗತ್ಯವಿದ್ದ ₹90 ಲಕ್ಷ ಅನುದಾನವನ್ನು ಶಾಸಕ ಟಿ.ಡಿ.ರಾಜೇಗೌಡ ಅವರು ಮಂಜೂರು ಮಾಡಿದ್ದಾರೆ. ಇನ್ನೊಂದು ತಿಂಗಳಲ್ಲಿ ಕೆಲಸ ಆರಂಭಗೊಳ್ಳಲಿದೆ ಎಂದು ಕಾಲೇಜು ಮೂಲಗಳು ಹೇಳಿವೆ.

19 ಮಂದಿ ಬೋಧಕ, 4 ಮಂದಿ ಬೋಧಕೇತರ ಸಿಬ್ಬಂದಿ, 18 ಮಂದಿ ಅತಿಥಿ ಉಪನ್ಯಾಸರು ಇದ್ದಾರೆ. ಕಾಲೇಜು ಅಭಿವೃದ್ಧಿ ಸಮಿತಿ ವತಿಯಿಂದ 4 ಮಂದಿ ನಿಯೋಜನೆಗೊಂಡಿದ್ದಾರೆ. ಸರ್ಕಾರದ ಹೊರಗುತ್ತಿಗೆ ಆಧಾರದಲ್ಲಿ ಒಬ್ಬರು, ರಾತ್ರಿ ವಾಚ್ ಮನ್ ಸೇರಿದಂತೆ 6 ಮಂದಿ ಕೆಲಸ ನಿರ್ವಹಿಸುತ್ತಿದ್ದಾರೆ. ಭದ್ರತೆಗಾಗಿ 16 ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ. ಇತ್ತೀಚೆಗೆ ನವೀಕರಣಗೊಂಡ ಕಟ್ಟಡದಲ್ಲಿ 8 ಶೌಚಾಲಯಗಳಿವೆ.

ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಹೊಸದಾಗಿ ಬಿಸಿಎ, ಇಂಗ್ಲಿಷ್ ಐಚ್ಛಿಕ, ಶಿಕ್ಷಣ ಶಾಸ್ತ್ರ ಆರಂಭಿಸಲಾಗಿದೆ. ಸರ್ಟಿಫಿಕೇಟ್ ಕಂಪ್ಯೂಟರ್ ಶಿಕ್ಷಣ ನೀಡಲಾಗುತ್ತಿದೆ. ಪ್ರತಿವರ್ಷ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ತರಬೇತಿ, ಉದ್ಯೋಗ ಮೇಳ ಆಯೋಜಿಸಲಾಗುತ್ತಿದೆ.

ಕೊಪ್ಪ ಸರ್ಕಾರಿ ಕಾಲೇಜು ಗ್ರಂಥಾಲಯದ ನೋಟ
ಕೊಪ್ಪ ಸರ್ಕಾರಿ ಕಾಲೇಜು ಗ್ರಂಥಾಲಯದ ನೋಟ

Quote - ಜಯಪುರ ಹರಿಹರಪುರದಲ್ಲಿ ಹೊಸ ಕಾಲೇಜು ಆರಂಭಗೊಂಡಿದೆ ಜತೆಗೆ ಪದವಿ ಬದಲು ಬೇರೆ ಕೋರ್ಸ್‌ಗಳತ್ತ ವಿದ್ಯಾರ್ಥಿಗಳು ಆಸಕ್ತಿ ತೋರಿಸುತ್ತಿರುವುದರಿಂದ ದಾಖಲಾತಿ ಸ್ವಲ್ಪ ಕಡಿಮೆಯಾಗಿದೆ ಎಸ್.ಅನಂತ ಪ್ರಾಂಶುಪಾಲ

Cut-off box - ರಾಜ್ಯದಲ್ಲಿ 34ನೇ ಸ್ಥಾನ ಕಾಲೇಜಿಗೆ ‘ನ್ಯಾಕ್’ ಸಮಿತಿಯಿಂದ 2018ರಲ್ಲಿ  2.52(ಬಿ) ಗ್ರೇಡ್ ಮಾನ್ಯತೆ ಲಭಿಸಿತ್ತು ಪ್ರಸ್ತುತ 2.97(ಬಿ’ ಪ್ಲಸ್ ಪ್ಲಸ್) ಶ್ರೇಣಿ ಇದೆ. ರಾಜ್ಯದ 430 ಸರ್ಕಾರಿ ಕಾಲೇಜುಗಳ ಪೈಕಿ ಈ ಕಾಲೇಜು 34ನೇ ಸ್ಥಾನದಲ್ಲಿದೆ. ಇದೇ ಕಾಲೇಜಿನ ವಿದ್ಯಾರ್ಥಿಯೊಬ್ಬರು ಕಳೆದ ಬಾರಿ ಬಿಎಸ್ಸಿ ಪರೀಕ್ಷೆಯಲ್ಲಿ ವಿಶ್ವವಿದ್ಯಾಲಯ ಮಟ್ಟದಲ್ಲಿ 9ನೇ ರ್‍ಯಾಂಕ್‌ ಪಡೆದಿದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT