ಕಲಬೆರಕೆ ಹಾಲು ಕುಡಿದು ವಿದ್ಯಾರ್ಥಿಗಳು ಅಸ್ವಸ್ಥ-ಮುಖ್ಯಶಿಕ್ಷಕ ಸಹಿತ ನಾಲ್ವರ ಬಂಧನ

7

ಕಲಬೆರಕೆ ಹಾಲು ಕುಡಿದು ವಿದ್ಯಾರ್ಥಿಗಳು ಅಸ್ವಸ್ಥ-ಮುಖ್ಯಶಿಕ್ಷಕ ಸಹಿತ ನಾಲ್ವರ ಬಂಧನ

Published:
Updated:

ಚಿಕ್ಕಮಗಳೂರು: ಜಿಲ್ಲೆಯ ಕೊಪ್ಪ ತಾಲ್ಲೂಕಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಕಲಬೆರಕೆ ಹಾಲು ಕುಡಿದು 18 ವಿದ್ಯಾರ್ಥಿಗಳು ಅಸ್ವಸ್ಥರಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಶಿಕ್ಷಕ ಅಶೋಕ ಸಹಿತ ನಾಲ್ವರನ್ನು ಬಂಧಿಸಲಾಗಿದೆ.

ಆಶೋಕ, ಅಡುಗೆ ಮುಖ್ಯಸಿಬ್ಬಂದಿ ಯಶೋಧಮ್ಮ (42), ಸಹಾಯಕಿಯರಾದ ಶಾರದಾ (54) ಮತ್ತು ಗುಲಾಬಿ (54) ಬಂಧಿತರು. ವಿಷಕಾರಿ ಪದಾರ್ಥ ತಿನ್ನಿಸುವುದು (ಐಪಿಸಿ 328), ನಿರ್ಲಕ್ಷ್ಯ ತೋರಿದ (284) ಪ್ರಕರಣಗಳನ್ನು ದಾಖಲಿಸಲಾಗಿದೆ.
ಕ್ಷೀರಭಾಗ್ಯ ಯೋಜನೆಯಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ವಿತರಿಸುವ ಹಾಲಿಗೆ ಸಕ್ಕರೆ ಬದಲಿಗೆ ಯೂರಿಯಾ ಮಿಶ್ರಣ ಮಾಡಲಾಗಿದೆ. ಈ ಹಾಲನ್ನು ಕುಡಿದು 18 ಮಕ್ಕಳು ಅಸ್ವಸ್ಥರಾಗಿ ಹರಿಹರಪುರ ಆಸ್ಪತ್ರೆಗೆ ದಾಖಲಾಗಿದ್ದರು. ಮಕ್ಕಳು ಚಿಕಿತ್ಸೆ ಪಡೆದು ಆಸ್ಪತ್ರೆಯಿಂದ ಮನೆಗೆ ತೆರಳಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಪ್ಪ ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ದೂರು ದಾಖಲಿಸಿದ್ದಾರೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗುವುದು ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೆ.ಅಣ್ಣಾಮಲೈ ತಿಳಿಸಿದ್ದಾರೆ.

* ಇದನ್ನೂ ಓದಿ...

ಚಿಕ್ಕಮಗಳೂರು: ಹಾಲು ಕುಡಿದು 18 ವಿದ್ಯಾರ್ಥಿಗಳು ಅಸ್ವಸ್ಥ

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !