ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಂತ ಖರ್ಚಿನಲ್ಲಿ ಸ್ವಗ್ರಾಮಕ್ಕೆ ಕಳುಹಿಸಿದ ಶಾಸಕ

ಕಡೂರಿನಲ್ಲಿ ಕ್ವಾರಂಟೈನ್ ಕೇಂದ್ರದಲ್ಲಿದ್ದ ಬಳ್ಳಾರಿಯ 64 ಕಾರ್ಮಿಕರು
Last Updated 27 ಏಪ್ರಿಲ್ 2020, 9:51 IST
ಅಕ್ಷರ ಗಾತ್ರ

ಕಡೂರು: ಸಾರಿಗೆ ಸಂಸ್ಥೆಗೆ ಹಣ ಪಾವತಿಸುವ ವಿಚಾರದಲ್ಲಿನ ಗೊಂದಲದಿಂದಾಗಿ ಕಡೂರಿಗೆ ವಾಪಸ್ಸಾಗಿದ್ದ ಹೂವಿನಹಡಗಲಿಯ 64 ಕಾರ್ಮಿಕರನ್ನು ಶಾಸಕ ಬೆಳ್ಳಿಪ್ರಕಾಶ್ ಸ್ವಂತ ಖರ್ಚಿನಿಂದ ಸ್ವಗ್ರಾಮಗಳಿಗೆ ಶನಿವಾರ ಕಳುಹಿಸಿದರು.

ಬಳ್ಳಾರಿ ಜಿಲ್ಲೆಯ ಹೂವಿನಹಡಗಲಿಯ ಕೂಲಿ ಕಾರ್ಮಿಕರು ಚಿಕ್ಕಮಗಳೂರು, ಸಕಲೇಶಪುರ ಮುಂತಾದೆಡೆ ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದರು. ಹಾಗೆ ಬಂದವರಲ್ಲಿ ಎಬಿಸಿ ಎಸ್ಟೇಟ್‌ನಲ್ಲಿದ್ದ 64 ಕಾರ್ಮಿಕರು ತಮ್ಮ ಸ್ವಗ್ರಾಮಗಳಿಗೆ ತೆರಳಲು ಮುಖ್ಯರಸ್ತೆಯಲ್ಲಿದ್ದ ಚೆಕ್‌ಪೋಸ್ಟ್ ತಪ್ಪಿಸಿ ಒಳದಾರಿಯಲ್ಲಿ ಸಾಗಿ ಕಡೂರು ಬಳಿಯ ಅಂಚೇಚೋಮನಹಳ್ಳಿ ಚೆಕ್‌ಪೋಸ್ಟ್ ಬಳಿ ಪೊಲೀಸರ ಕೈಗೆ ಸಿಕ್ಕಿಬಿದಿದ್ದರು. ಅವರನ್ನು ಪೊಲೀಸರು ಕಡೂರಿನ ಕ್ವಾರಂಟೈನ್ ಕೇಂದ್ರದಲ್ಲಿ ಇಟ್ಟಿದ್ದರು.

ಲಾಕ್‌ಡೌನ್ ಸಡಿಲಿಕೆಯಾದ ಕಾರಣ 64 ಜನರನ್ನು ಮೂರು ಬಸ್‌ಗಳಲ್ಲಿ ಹೂವಿನಹಡಗಲಿಗೆ ಕಳುಹಿಸುವ ವ್ಯವಸ್ಥೆಯನ್ನು ಶನಿವಾರ ತಾಲ್ಲೂಕು ಆಡಳಿತ ಮಾಡಿತು. ಹೀಗೆ ಹೊರಟವರ ಪೈಕಿ 20 ಮಹಿಳೆಯರೂ ಇದ್ದರು. ಹೂವಿನಹಡಗಲಿಗೆ ಹೋಗುವ ಮಾರ್ಗ ಮಧ್ಯದಲ್ಲಿ ಅಜ್ಜಂಪುರ ಬಳಿ, ‘ ಪ್ರಯಾಣ ಶುಲ್ಕ ನೀಡದೆ ಬಸ್ ಕಳುಹಿಸುವುದಿಲ್ಲ. ವಾಪಸ್ ಬನ್ನಿ’ ಎಂದು ಮೇಲಧಿಕಾರಿ ಹೇಳಿದ್ದರಿಂದ ಬಸ್‌ಗಳು ಕಡೂರಿಗೆ ವಾಪಸ್ಸಾಗಿ ಪೊಲೀಸ್ ಠಾಣೆ ಬಳಿ ನಿಂತವು. ಅಲ್ಲಿ ಈ ಕಾರ್ಮಿಕರಿಗೆ ಜೈನ್ ಸಮಾಜದ ಮೂಲಕ ಊಟದ ವ್ಯವಸ್ಥೆ ಮಾಡಲಾಯಿತು. ಈ ವಿಚಾರ ಶಾಸಕರ ಗಮನಕ್ಕೂ ಬಂತು.

ಕೂಡಲೇ ಶಾಸಕ ಬೆಳ್ಳಿಪ್ರಕಾಶ್ ಮತ್ತು ಜಿಲ್ಲಾ ಪಂಚಾಯಿತಿ ಸದಸ್ಯ ಮಹೇಶ್ ಒಡೆಯರ್ ಸ್ಥಳಕ್ಕೆ ಬಂದು ಕೆಎಸ್ಆರ್‌ಟಿಸಿ ಡಿಪೋ ವ್ಯವಸ್ಥೆ ಅವರನ್ನು ಸ್ಥಳಕ್ಕೆ ಕರೆಸಿ, ಕಾರ್ಮಿಕರನ್ನು ಹೂವಿನಹಡಗಲಿಗೆ ಕಳುಹಿಸುವ ಖರ್ಚು ತಾವೇ ಭರಿಸುವುದಾಗಿ ತಿಳಿಸಿದರು. ಬಸ್‌ಗಳಲ್ಲಿದ್ದವರು ಶಾಸಕರಿಗೆ ಕೃತಜ್ಞತೆ ಸಲ್ಲಿಸಿ ತೆರಳಿದರು.

ತಹಶೀಲ್ದಾರ್ ಉಮೇಶ್, ಇನ್‌ಸ್ಪೆಕ್ಟರ್ ಮಂಜುನಾಥ್, ಸಮಾಜ ಕಲ್ಯಾಣಾಧಿಕಾರಿ ಶಂಕರಪ್ಪ, ಪುರಸಭೆ ಮುಖ್ಯಾಧಿಕಾರಿ ಮಂಜುನಾಥ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT