ಅನ್ವರ್ ಹತ್ಯೆ ಆರೋಪಿ ಬಂಧನಕ್ಕೆ ಒತ್ತಾಯ, ಪ್ರತ್ಯೇಕ ಉತ್ತರ ಕರ್ನಾಟಕಕ್ಕೆ ಒತ್ತಾಯ

6

ಅನ್ವರ್ ಹತ್ಯೆ ಆರೋಪಿ ಬಂಧನಕ್ಕೆ ಒತ್ತಾಯ, ಪ್ರತ್ಯೇಕ ಉತ್ತರ ಕರ್ನಾಟಕಕ್ಕೆ ಒತ್ತಾಯ

Published:
Updated:
Deccan Herald

ಚಿಕ್ಕಮಗಳೂರು: ಪ್ರತ್ಯೇಕ ಉತ್ತರ ಕರ್ನಾ ಟಕ ಬೇಡಿಕೆ ವಿರೋಧಿಸಿ ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣ ಗೌಡ ಬಣ), ಕನ್ನಡಸೇನೆ, ಕರ್ನಾಟಕ ರಕ್ಷಣಾ ವೇದಿಕೆ ಯುವಸೇನೆ ಕಾರ್ಯಕರ್ತರು ಹಾಗೂ ಬಿಜೆಪಿ ಮುಖಂಡ ಅನ್ವರ್ ಕೊಲೆ ಆರೋಪಿಗಳನ್ನು ಬಂಧಿಸುವಂತೆ ಸಂಬಂಧಿಕರು ಗುರುವಾರ ಪ್ರತ್ಯೇಕವಾಗಿ ಪ್ರತಿಭಟನೆ ನಡೆಸಿದರು.

ನಗರದ ತಾಲ್ಲೂಕು ಕಚೇರಿ ಆವರಣದಿಂದ ಜಿಲ್ಲಾಧಿಕಾರಿ ಕಚೇರಿ ವರೆಗೆ ಕರ್ನಾಟಕ ರಕ್ಷಣಾ ವೇದಿಕೆ ಯುವಸೇನೆ ಕಾರ್ಯಕರ್ತರು ಪ್ರತಿಭ ಟನಾ ಮೆರವಣಿಗೆ ನಡೆಸಿದರು. ಆಜಾದ್ ಪಾರ್ಕ್‌ ವೃತ್ತದಲ್ಲಿ ಜಮಾ ಯಿಸಿದ ಕರ್ನಾಟಕ ರಕ್ಷಣಾ ವೇದಿಕೆ, ಕನ್ನಡ ಸೇನೆ ಕಾರ್ಯಕರ್ತರು ಸಮಗ್ರ ಕರ್ನಾಟಕ ಅಭಿವೃದ್ಧಿಗೆ ಒತ್ತು ನೀಡುವಂತೆ ಘೋಷಣೆ ಕೂಗಿದರು.

ಕರ್ನಾಟಕ ರಕ್ಷಣಾ ವೇದಿಕೆ ತಾಲ್ಲೂಕು ಘಟಕದ ಅಧ್ಯಕ್ಷ ಮನೋಜ್ ಶೆಟ್ಟಿ ಮಾತನಾಡಿ, ಪ್ರಾದೇಶಿಕ ಅಸಮ ತೋಲನ ನಿವಾರಿಸಲು ಡಿ.ಎಂ.ನಂಜುಂಡಪ್ಪ ಅವರು ನೀಡಿರುವ ವರದಿಯನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರ ಅನುಷ್ಠಾನಗೊಳಿಸಬೇಕು. ರಾಜ್ಯದ 119 ತಾಲ್ಲೂಕುಗಳು ಹಿಂದು ಳಿದಿದ್ದು, ಶಿಕ್ಷಣ, ಉದ್ಯೋಗ, ಉದ್ಯಮ, ಆರೋಗ್ಯ, ಕೃಷಿ, ನೀರಾವರಿ ಸೌಕರ್ಯ ಒದಗಿಸಬೇಕು ಎಂದು ಒತ್ತಾಯಿಸಿದರು.

ಕರ್ನಾಟಕ ರಕ್ಷಣಾ ವೇದಿಕೆ ಯುವಸೇನೆ ಜಿಲ್ಲಾಘಟಕದ ಅಧ್ಯಕ್ಷ ನೂರುಲ್ಲಾಖಾನ್ ಮಾತನಾಡಿ, ಉತ್ತರ ಕರ್ನಾಟಕ ಭಾಗಕ್ಕೆ ಮೊದಲಿನಿಂದಲೂ ಅನ್ಯಾಯವಾಗಿದೆ. ಆ ಭಾಗದ ಅಭಿವೃದ್ಧಿಯನ್ನು ಎಲ್ಲ ಸರ್ಕಾರಗಳು ಕಡೆಗಣಿವೆ ಎಂದು ದೂರಿದರು.

ಉತ್ತರ ಕರ್ನಾಟಕದ ಜನಪ್ರತಿ ನಿಧಿಗಳು ಸಮಸ್ಯೆಗಳು, ಅಭಿವೃದ್ಧಿ ಬಗ್ಗೆ ಪ್ರತಿಭಟನೆ ನಡೆಸಲಿ, ಪ್ರತ್ಯೇಕತೆ ಬಗ್ಗೆ ಹೋರಾಟ ನಡೆಸಬಾರದು. ರಾಜ್ಯವನ್ನು ಒಡೆಯಬಾರದು ಎಂದರು.

ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾ ಘಟಕದ ಕಾರ್ಯದರ್ಶಿ ಪಂಚಾಕ್ಷರಿ, ಮುಖಂಡರಾದ ಕುಮಾರ್ ಆರ್.ಶೆಟ್ಟಿ, ನಾಗಲತಾ, ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಮರ್ಲೆ ಅಣ್ಣಯ್ಯ, ರೈತ ಮುಖಂಡ ಗುರುಶಾಂತಪ್ಪ ಇದ್ದರು.

ಅನ್ವರ್ ಹತ್ಯೆ ಆರೋಪಿ ಬಂಧಿಸಲು ಒತ್ತಾಯ: ಬಿಜೆಪಿ ಮುಖಂಡ ಮಹಮ್ಮದ್ ಅನ್ವರ್ ಹತ್ಯೆ ಆರೋಪಿ ಗಳನ್ನು ಬಂಧಿಸುವಂತೆ  ಉಪ್ಪಳ್ಳಿಯ ಅನ್ವರ್ ಅವರ ನಿವಾಸ ದಿಂದ ಆಜಾದ್ ಪಾರ್ಕ್‌ ವೃತ್ತದವರೆಗೆ ಸಂಬಂಧಿಕರು, ಸ್ನೇಹಿತರು ಕಪ್ಪು ಪಟ್ಟಿ ಧರಿಸಿ ಮೌನ ಪ್ರತಿಭಟನಾ ಮೆರವಣಿಗೆ ನಡೆಸಿದರು.

ಅನ್ವರ್ ಸಹೋದರ ಅಬ್ದುಲ್ ಮಾತನಾಡಿ, ಹತ್ಯೆಯಾಗಿ 39 ದಿನಗ ಳಾಗಿವೆ. ಪೊಲೀಸರು ಈವರೆಗೆ ಆರೋಪಿ ಗಳನ್ನು ಬಂಧಿಸಿಲ್ಲ. ಹದಿನೈದು ದಿನದಲ್ಲಿ ಆರೋಪಿಗಳನ್ನು ಬಂಧಿಸದಿದ್ದಲ್ಲಿ ಸಂಘ ಸಂಸ್ಥೆ, ರಾಜಕೀಯ ಪಕ್ಷಗಳೊಂದಿಗೆ ಸೇರಿ ಚಿಕ್ಕಮಗಳೂರು ಬಂದ್ ನಡೆಸಲಾ ಗುವುದು ಎಂದರು.

ಬಿಜೆಪಿ ಮುಖಂಡ ವರಸಿದ್ಧಿ ವೇಣು ಗೋಪಾಲ್ ಮಾತನಾಡಿ, ಅನ್ವರ್‌ ಅವರಿಗೆ 18 ಬಾರಿ ಚುಚ್ಚಿ ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಆ ಕ್ರೌರ್ಯಕ್ಕೆ ನಗರದ ಜನರು ಭಯಭೀತರಾಗಿದ್ದರು. ಆರೋಪಿಗಳನ್ನು ಬಂಧಿಸುವಂತೆ ಒತ್ತಾಯಿಸಿ ರಾಜ್ಯದಾದ್ಯಂತ ಪ್ರತಿಭಟನೆ ನಡೆಸಲು ಕ್ರಮಕೈಗೊಳ್ಳುವಂತೆ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರಿಗೆ ಮನವಿ ಪತ್ರ ಬರೆಯಲಾಗುವುದು ಎಂದರು.

ಅನ್ವರ್‌ ಸ್ನೇಹಿತ ದಾವುದ್ ಮಾತನಾಡಿ, ಆರೋಪಿಗಳನ್ನು ಬಂಧಿ ಸಲು ವಿಫಲವಾದರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಎದುರು ಅಮರಣಾಂತ ಉಪವಾಸ ಸತ್ಯಾಗ್ರಹ ನಡೆಸಲಾಗುವುದು ಎಂದರು.

ಅನ್ವರ್ ಅವರ ಪುತ್ರ ಮುಹಾಜ್, ಪುತ್ರಿ ಮಿನಾಜ್, ಸಹೋದರ ಅಬ್ದುಲ್ ಬಷೀರ್, ಬಿಜೆಪಿ ಮುಖಂಡ ಸಚ್ಚಿನ್ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !