ಶೃಂಗೇರಿ: ‘ಕೆರೆಗಳ ಹೆಸರಿನಲ್ಲಿ ಲೂಟಿ ಹೊಡೆಯುತ್ತಿರುವ ಸಿ.ಟಿ.ರವಿ ಅವರು ರಾಜ್ಯದ ಮುತ್ಸದ್ದಿ ರಾಜಕಾರಣಿ ಸಿದ್ದರಾಮಯ್ಯ ಅವರ ಬಗ್ಗೆ ಕೀಳು ಮಟ್ಟದಲ್ಲಿ ಮಾತನಾಡಿರುವುದನ್ನು ಖಂಡಿಸುತ್ತೇವೆ' ಎಂದು ಶಾಸಕ ಟಿ.ಡಿ ರಾಜೇಗೌಡ ಹೇಳಿದರು.

ಶೃಂಗೇರಿ ಪಟ್ಟಣದ ಕುರುಬಕೇರಿ ವೃತ್ತದಲ್ಲಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ನಡೆಸಿದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.

‘ಸಿದ್ದರಾಮಯ್ಯ ಅವರಿಗೆ ರಾಜಕಾರಣದಲ್ಲಿ 40 ವರ್ಷ ಅನುಭವವಿದೆ. ಮುಖ್ಯಮಂತ್ರಿಯಾಗಿ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. ಅವರ ಬಗ್ಗೆ ಈ ರೀತಿ ಅವಹೇಳನಾಕಾರಿಯಾಗಿ ಮಾತನಾಡುವ ಮೂಲಕ ರವಿ ಅವರ ತಮ್ಮ ಸಂಸ್ಕೃತಿಯನ್ನು ತೋರಿಸಿದ್ದಾರೆ. ಸಿದ್ದರಾಮಯ್ಯ ಅವರ ಬಳಿ ರವಿ ಕ್ಷಮೆಯಾಚಿಸಬೇಕು’ ಎಂದು ಆಗ್ರಹಿಸಿದರು.

ಕಾಂಗ್ರೆಸ್ ಮುಖಂಡ ನಟರಾಜ್ ಮಾತನಾಡಿ, ‘ರಾಜ್ಯದ ಜನ ಮಳೆಯಿಂದ ತತ್ತರಿಸುತ್ತಿರುವ ಸಮಯದಲ್ಲಿ ಸಿ.ಟಿ ರವಿ ಅವರು ಜನರ ಸಮಸ್ಯೆಗಳಿಗೆ ಪರಿಹಾರ ನೀಡುವುದನ್ನು ಬಿಟ್ಟು, ಈ ರೀತಿ ಹಗುರವಾಗಿ ಮಾತನಾಡುವುದರಲ್ಲಿ ತೊಡಗಿದ್ದಾರೆ’ ಎಂದು ಟೀಕಿಸಿದರು.

ಪಟ್ಟಣ ಪಂಚಾಯಿತಿ ಸದಸ್ಯರಾದ ರೂಪಾ ಪೈ, ಆಶಾ ದಿನೇಶ್, ಲತಾ ಗುರುದತ್, ಗ್ರಾಮ ಪಂಚಾಯಿತಿ ಸದಸ್ಯ ಪುಟ್ಟಪ್ಪ ಹೆಗ್ಡೆ, ಶಬರೀಶ, ಮಂಜುನಾಥ್, ಮುಖಂಡರಾದ ಕುರಾದಮನೆ ವೆಂಕಟೇಶ್, ಗೋಪಾಲ್ ಹೆಗ್ಡೆ, ರವಿಶಂಕರ್, ಕೆ.ಟಿ ಮಂಜುನಾಥ್, ದಿನೇಶ್ ಶೆಟ್ಟಿ, ಶಿವಮೂರ್ತಿ, ಕೃಷ್ಣಪ್ಪ, ರಾಜ್‍ಕುಮಾರ್ ಹೆಗ್ಡೆ, ನೂತನ್ ಕುಮಾರ್ ಹೆಗ್ಡೆ, ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.