ಶನಿವಾರ, ಅಕ್ಟೋಬರ್ 1, 2022
25 °C

ಮಳೆಗಾಳಿ: 42 ಮನೆ, 78 ವಿದ್ಯುತ್‌ ಕಂಬ ಹಾನಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಮಳೆಗಾಳಿಗೆ ಬುಧವಾರ 42 ಮನೆಗಳು ಕುಸಿದಿವೆ. 78 ವಿದ್ಯುತ್‌ ಕಂಬಗಳು ಮುರಿದಿವೆ.

ಸುಮಾರು 3.5 ಕಿ.ಮೀ ರಸ್ತೆ , ನಾಲ್ಕು ಸೇತುವೆಗಳು ಹಾಳಾಗಿವೆ. 1.56 ಕಿ.ಮೀ ವಿದ್ಯುತ್‌ ಮಾರ್ಗದ ತಂತಿ ಹಾಳಾಗಿದೆ.

ಚಿಕ್ಕಮಗಳೂರು ತಾಲ್ಲೂಕಿನಲ್ಲಿ 9 ಮನೆಗಳು ಹಾನಿಯಾಗಿವೆ. ಕಲ್ದೊಡ್ಡಿಯ ಯಶೋಧಾ, ಮುಗುಳವಳ್ಳಿಯ ದೊಡ್ಡಯ್ಯ, ತಗಡೂರಿನ ಜ್ಯೋತಿ, ಹವ್ವಳ್ಳಿಯ ವಿಶ್ವನಾಥ್‌, ಕಾಳಮ್ಮ, ಕೆಳಗೂರಿನ ಉಮೇಶ, ಹಾಂದಿಯ ಉದ್ದಯ್ಯ, ಅಪ್ಪು ಮೇಸ್ತ್ರಿ, ಮಲ್ಲಂದೂರಿನ ಮಂಜುನಾಥ ಅವರ ಮನೆಗಳು ಹಾನಿಯಾಗಿವೆ.

ಕೊಟ್ಟಿಗೆಹಾರ– 9.8, ಕಮ್ಮರಡಿ– 9, ಬಿಳ್ಳೂರು– 7.9, ಹೊಸಕೆರೆ– 6.7, ಕೆರೆಕಟ್ಟೆ– 6.4, ಕಿಗ್ಗಾ– 6.2, ಹಿರೇಬೈಲು– 6,ಜಾವಳಿ– 5.8, ಕಳಸ– 5.7ಗೋಣಿಬೀಡು, ಶೃಂಗೇರಿ– 5.6 ಜಯಪುರ– 5.2, ಮೂಡಿಗೆರೆ– 4.7, ಮೇಗರಮಕ್ಕಿ– 3.9 ಸೆಂ.ಮೀ ಮಳೆಯಾಗಿದೆ.

ಜಿಲ್ಲೆಯಲ್ಲಿ ಜೂನ್‌ 1ರಿಂದ ಈವರೆಗೆ 666 ಮನೆಗಳು, 23 ಗುಡಿಸಲು ಹಾನಿಯಾಗಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು