ಶನಿವಾರ, ಜನವರಿ 28, 2023
15 °C

ರಂಭಾಪುರಿ ಶ್ರೀ ಜನ್ಮ ದಿನೋತ್ಸವ ನಾಳೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬಾಳೆಹೊನ್ನೂರು: ರಂಭಾಪುರಿ ಪೀಠದ ವೀರಸೋಮೇಶ್ವರ ಸ್ವಾಮೀಜಿ ಅವರ 67ನೇ ಜನ್ಮ ದಿನೋತ್ಸವವನ್ನು ತೆಲಂಗಾಣ ರಾಜ್ಯದ ಕೊಲನಪಾಕ ಸ್ವಯಂಭು ಸೋಮೇಶ್ವರ ಕ್ಷೇತ್ರದಲ್ಲಿ ಜ.7ರಂದು ಆಚರಿಸಲಾಗುವುದು’ ಎಂದು ಪೀಠದ ವಾರ್ತಾಧಿಕಾರಿ ಸಿ.ಎಚ್.ಬಾಳನಗೌಡ್ರು ಹೇಳಿದರು.

‘ಜ,5ರಿಂದ 7ರವರೆಗೆ ರಂಭಾಪುರಿ ಸ್ವಾಮೀಜಿ ಇಷ್ಟಲಿಂಗ ಪೂಜೆ  ನೆರವೇರಿಸುವರು. ಪ್ರತಿದಿನ ಪ್ರಾತ:ಕಾಲದಲ್ಲಿ ಸೋಮೇಶ್ವರ ಮಹಾಲಿಂಗ ಮತ್ತು ವೀರಭದ್ರಸ್ವಾಮಿಗೆ ರುದ್ರಾಭಿಷೇಕ, ಮಹಾಪೂಜೆ ಹಾಗೂ ಶಕ್ತಿಮಾತೆ ಚಂಡಿಕಾಂಬಾ ದೇವಿಗೆ ಕುಂಕುಮಾರ್ಚನೆ ನಡೆಯಲಿದೆ ಎಂದು ಕೊಲನುಪಾಕ ಸೋಮೇಶ್ವರ ಜಗದ್ಗುರು ರೇಣುಕಾಚಾರ್ಯ ಡೆವೆಲಪ್‌ಮೆಂಟ್ ಮತ್ತು ಚಾರಿಟಬಲ್ ಟ್ರಸ್ಟ್‌ನವರು ತಿಳಿಸಿರುವುದಾಗಿ ಅವರು
ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.