ರಸ್ತೆ ಬದಿ ಕುಸಿತ– ತ್ವರಿತ ಕ್ರಮಕ್ಕೆ ಆಗ್ರಹ

7

ರಸ್ತೆ ಬದಿ ಕುಸಿತ– ತ್ವರಿತ ಕ್ರಮಕ್ಕೆ ಆಗ್ರಹ

Published:
Updated:
Deccan Herald

ಮೂಡಿಗೆರೆ: ತಾಲ್ಲೂಕಿನ ಅಂಗಡಿ ಗ್ರಾಮದಲ್ಲಿ ರಸ್ತೆ ಬದಿ ಕುಸಿದಿರುವುದನ್ನು ಬುಧವಾರ ಸ್ಥಳೀಯ ಜನಪ್ರತಿನಿಧಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಜಿಲ್ಲಾ ಪಂಚಾಯಿತಿ ಸದಸ್ಯೆ ಅಮಿತಾ ಮುತ್ತಪ್ಪ ಮಾತನಾಡಿ, ಅಂಗಡಿ – ದೇವರುಂದ ರಸ್ತೆಯು ಪ್ರವಾಸಿ ತಾಣಗಳಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಯಾಗಿದ್ದು, ಈ ರಸ್ತೆಯಲ್ಲಿ ಪ್ರತಿನಿತ್ಯ ಪ್ರವಾಸಿಗರು ತಿರುಗಾಡುತ್ತಾರೆ. ರಸ್ತೆ ಬದಿ ಕುಸಿದು ಅಂಗಡಿ – ದೇವರುಂದ ಗ್ರಾಮಗಳ ಸಂಪರ್ಕ ಕಡಿತವಾಗಿರುವುದು ಸ್ಥಳೀ ಯರಿಗೆ ಅನನುಕೂಲವಾಗುತ್ತಿದ್ದು, ಕೂಡಲೇ ಕುಸಿತವಾಗಿರುವ ಕಡೆಯಲ್ಲಿ ಕಾಮಗಾರಿ ನಿರ್ವಹಿಸಿ, ಸಂಚಾರಕ್ಕೆ ಮುಕ್ತಗೊಳಿಸಬೇಕು ಎಂದರು.

ಅಂಗಡಿ ಗ್ರಾಮ ಪಂಚಾಯಿತಿ ಸದಸ್ಯ ವಿನೋದ್‌ ಕಣಚೂರು ಮಾತನಾಡಿ, ರಸ್ತೆಗೆ ಸಮನಾಗಿ ಕೆರೆಯಲ್ಲಿ ನೀರು ಸಂಗ್ರಹವಾಗಿದ್ದು, ಕೆರೆಗೆ ತಡೆಗೋಡೆಯಿಲ್ಲದ ಕಾರಣ ಅನಾಹುತಗಳು ಸಂಭವಿಸುವ ಅಪಾ ಯವಿದೆ. ಕೆರೆಯು ಅತ್ಯಂತ ಆಳವಿದ್ದು ಮುನ್ನೆಚ್ಚರಿಕೆಯಾಗಿ ಕೆರೆಯ ಎರಡೂ ಬದಿಯಲ್ಲಿ ತಡೆಗೋಡೆಗಳನ್ನು ನಿರ್ಮಿ ಸಬೇಕು ಎಂದರು.

ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷೆ ಸವಿತಾ ರಮೇಶ್‌, ಹಂತೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪುಟ್ಟಮ್ಮ, ಕಣಚೂರು ವಿನೋದ್‌ಕುಮಾರ್‌, ಮುತ್ತಪ್ಪ, ಕನ್ನೆಹಳ್ಳಿ ಆದರ್ಶ ಹಾಗೂ ಗ್ರಾಮ ಪಂಚಾಯಿತಿ ಸದಸ್ಯರು ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !