ಸೋಮವಾರ, 9 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

‘ಸಂಜೀವಿನಿ ಆರ್ಥಿಕ ಉತ್ತೇಜನಕ್ಕೆ ಪೂರಕ’

Published 5 ಸೆಪ್ಟೆಂಬರ್ 2024, 15:51 IST
Last Updated 5 ಸೆಪ್ಟೆಂಬರ್ 2024, 15:51 IST
ಅಕ್ಷರ ಗಾತ್ರ

ಕೊಟ್ಟಿಗೆಹಾರ: ಸರ್ಕಾರ ಗ್ರಾಮ ಪಂಚಾಯಿತಿ ಮೂಲಕ ಜಾರಿಗೆ ತಂದಿರುವ ಸ್ವಸಹಾಯ ಸಂಘಗಳ ಸಂಜೀವಿನಿ ಒಕ್ಕೂಟವು ಮಹಿಳೆಯರ ಆರ್ಥಿಕ ಉತ್ತೇಜನಕ್ಕೆ ಪೂರಕವಾಗಿದೆ ಎಂದು ಜಾವಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಎಂ.ಪಿ. ಪ್ರದೀಪ್ ಹೇಳಿದರು.

ಜಾವಳಿಯಲ್ಲಿ ನಡೆದ ಸಂಜೀವಿನಿ ಒಕ್ಕೂಟದ ವಾರ್ಷಿಕ ಸಭೆಯಯಲ್ಲಿ ಅವರು ಮಾತನಾಡಿದರು. ಸ್ವಸಹಾಯ ಸಂಘಗಳಿಗೆ ಪಂಚಾಯಿತಿ ಮೂಲಕ ಅನುದಾನ ನೀಡಲಾಗುತ್ತಿದೆ. ಸ್ವಂತ ಉದ್ಯೋಗ ಮಾಡುವ ಮೂಲಕ ಮಹಿಳೆಯರು ಸಬಲರಾಗಬಹುದು ಎಂದರು.

ಪಂಚಾಯಿತಿ ಉಪಾಧ್ಯಕ್ಷ ಮನೋಹರ್ ಮಾತನಾಡಿ, ‘ಮಹಿಳಾ ಸಂಘಗಳ ಒಕ್ಕೂಟಕ್ಕೆ ಕಡಿಮೆ ಬಡ್ಡಿ ದರದಲ್ಲಿ ಸರ್ಕಾರ ಸಾಲ ನೀಡುತ್ತದೆ. ಕೃಷಿ ಮತ್ತು ಕೃಷಿಯೇತರ ಕೆಲಸಗಳನ್ನು ಮಾಡಿ ಮಹಿಳೆಯರು ಮುಖ್ಯವಾಹಿನಿಗೆ ಬರಬೇಕು. ಈ ನಿಟ್ಟಿನಲ್ಲಿ ಒಕ್ಕೂಟದ ಸದಸ್ಯರು ಸಹಕಾರ ನೀಡಬೇಕು’ ಎಂದರು.

ಒಕ್ಕೂಟದ ಅಧ್ಯಕ್ಷೆ ಯಮುನಾ ಮಾತನಾಡಿ, ಮಹಿಳೆಯರು ಸ್ವಸಹಾಯ ಸಂಘಕ್ಕೆ ಸೇರಿ ಸರ್ಕಾರ ನೀಡುವ ಅನುದಾನ ಬಳಸಿಕೊಂಡು ಉದ್ಯಮಶೀಲರಾಗಬೇಕು ಎಂದರು.

ಒಕ್ಕೂಟದ ಸಾಮಾಜಿಕ ಲೆಕ್ಕ ಪರಿಶೋಧನೆಯ ವಾರ್ಷಿಕ ವರದಿಯನ್ನು ಅರ್ಚನಾ ವಾಚಿಸಿದರು. ಪಿಡಿಒ ಯತೀಶ್ ಕುಮಾರ್, ಒಕ್ಕೂಟದ ಅಧ್ಯಕ್ಷೆ ಕುಸುಮಾ, ಸದಸ್ಯೆ ನಂದಿನಿ ಹಾಗೂ ಪಂಚಾಯಿತಿ ಸದಸ್ಯರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT