ಶುಕ್ರವಾರ, ಅಕ್ಟೋಬರ್ 18, 2019
24 °C

ಕಾಫಿ ಮೌಲ್ಯವರ್ಧನೆಗೆ ತುಡಿದ ಸಿದ್ದಾರ್ಥ

Published:
Updated:

ಚಿಕ್ಕಮಗಳೂರು: ಉದ್ಯಮಿ, ಕಾಫಿ ಬೆಳೆಗಾರ ವಿ.ಜಿ.ಸಿದ್ದಾರ್ಥ್ ಅವರು ಕಾಫಿ ಉದ್ಯಮದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಛಾಪು ಮೂಡಿಸಿದವರು. ಕಾಫಿ ಬೆಳೆಯುವ ರೀತಿ, ಮಾರಾಟ ಮತ್ತು ಖರೀದಿಯಲ್ಲಿ ತಮ್ಮದೇ ಸೂತ್ರಗಳನ್ನು ಅಳವಡಿಸಿ ಉದ್ಯಮಕ್ಕೆ ಹೊಸತನ ತಂದುಕೊಟ್ಟಿದ್ದರು.

ಮೂಡಿಗೆರೆ ತಾಲ್ಲೂಕಿನ ಗೌತಹಳ್ಳಿಯ (ಚೇತನಹಳ್ಳಿ ಎಸ್ಟೇಟ್‌) ಗಂಗಯ್ಯ ಹೆಗ್ಡೆ ಮತ್ತು ವಾಸಂತಿ ದಂಪತಿ ಪುತ್ರ ಸಿದ್ದಾರ್ಥ. ಮಾಜಿ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಪುತ್ರಿ ಮಾಳವಿಕಾ ಅವರನ್ನು ಮದುವೆಯಾಗಿದ್ದರು. ನಗರದಲ್ಲಿ ಕಾಫಿ ಡೇ ಗ್ಲೋಬಲ್‌ ಲಿಮಿಟೆಡ್‌ ಘಟಕ, ಸೆರಾಯ್‌ ಐಷಾರಾಮಿ ಹೋಟೆಲ್‌ ಮತ್ತು ಆ್ಯಂಬರ್‌ ವ್ಯಾಲಿ ಶಾಲೆ ಹಾಗೂ ಜಿಲ್ಲೆಯ ವಿವಿಧೆಡೆ ಕಾಫಿ ತೋಟಗಳು ಅವರ ಒಡೆತನದಲ್ಲಿ ಇವೆ.

ಬೆಳೆಗಾರರೊಂದಿಗೆ ಸಿದ್ದಾರ್ಥ ಅವರ ಒಡನಾಟ, ಕಾರ್ಯನಿರ್ವಹಣೆ ಪರಿ ಕುರಿತು ಕರ್ನಾಟಕ ಬೆಳೆಗಾರರ ಒಕ್ಕೂಟದ (ಕೆಜಿಎಫ್‌) ಅಧ್ಯಕ್ಷರೂ ಆಗಿರುವ ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನ ಕಾನಹಳ್ಳಿಯ ಬೆಳೆಗಾರರ ಯು.ಎಂ.ತೀರ್ಥಮಲ್ಲೇಶ್‌ ‘ಪ್ರಜಾವಾಣಿ’ಯೊಂದಿಗೆ ಮಾಹಿತಿ ಹಂಚಿಕೊಂಡರು.

‘ಆರಂಭದ ದಿನಗಳಲ್ಲಿ ಸಿದ್ದಾರ್ಥ ಒಬ್ಬ ಸಾಮಾನ್ಯ ಬೆಳೆಗಾರರಾಗಿದ್ದರು. ಕೆಫೆ ಕಾಫಿ ಡೇ ಸ್ಥಾಪಿಸಿ ಕಾಫಿ ಘಮಲನ್ನು ವಿಶ್ವದೆಲ್ಲೆಡೆ ಪಸರಿಸಿದರು. ಚಿಕೋರಿ ರಹಿತ ಶುದ್ಧ ಕಾಫಿ ಪೇಯವನ್ನು ಈ ಕೆಫೆಗಳಲ್ಲಿ ಸಿಗುವಂತೆ ಮಾಡಿ ಉದ್ಯಮಕ್ಕೆ ಜಾಗತಿಕ ಮಟ್ಟದಲ್ಲಿ ಖ್ಯಾತಿ ತಂದುಕೊಟ್ಟರು.

‘ಕಾಫಿಯ ಮೌಲ್ಯವರ್ಧನೆಗೆ ಒತ್ತು ನೀಡುವುದರೊಂದಿಗೆ, ಬೆಳೆಗಾರರಿಗೆ ವಿವಿಧೆಡೆಗಳಿಂದ ಹೊಸ ತಳಿಗಳನ್ನು ಪರಿಚಯಿಸಿದರು. ನಾವು ಬೆಳೆದ ಬೆಳೆ, ನಾವು ಸಿದ್ಧಪಡಿಸಿದ ಪದಾರ್ಥಗಳನ್ನು ನಾವೇ ಮಾರಾಟ ಮಾಡಲು ದಾರಿ ಕಂಡುಕೊಳ್ಳಬೇಕು ಎಂಬುದು ಅವರ ಸಿದ್ಧಾಂತ. 1993ರಲ್ಲಿ ಅಮಾಲ್ಗಮೇಟೆಡ್‌ ಬೀನ್‌ ಕಂಪೆನಿ ಲಿಮಿಟೆಡ್‌ (ಎಬಿಸಿಎಲ್‌) ಸ್ಥಾಪಿಸಿದರು. ಕಾಫಿ ಬೆಳೆಯುವ, ಬಳಕೆಯಾಗುವ ಬಹುತೇಕ ಕಡೆ ಈ ಸಂಸ್ಥೆಯ ಶಾಖೆಗಳು ಇದ್ದವು.

‘ಕಾಫಿ ಬೆಳೆಗಾರರು ಬೆಳೆದುದೆಲ್ಲವನ್ನೂ ಒಮ್ಮೆಲೆ ಮಾರಬಾರದು. ಬೆಲೆ ಗಮನಿಸಿ ಮಾರಾಟ ಮಾಡಬೇಕು ಎಂಬುದು ಅವರು ಹೇಳುತ್ತಿದ್ದ ಕಿವಿಮಾತು. ಎಬಿಸಿಯಲ್ಲಿ ಬೆಳೆಯನ್ನು ಮಾರಾಟ ಮಾಡದೇ ವ್ಯಾಪಾರ ಒಪ್ಪಂದ ಮಾಡಿಕೊಂಡು ಇರಿಸಲು (ಕನ್‌ಸೈನ್‌ಮೆಂಟ್‌) ಅವಕಾಶ ಇತ್ತು. ಎಬಿಸಿಗೆ ಕಾಫಿ ಮಾರಿದರೆ ದುಡ್ಡು ಪಕ್ಕಾ ಎಂಬುದು ಜನಜನಿತವಾದ ಮಾತು.‘ಸಿದ್ದಾರ್ಥ ಓರ್ವ ಕನಸುಗಾರ. ಬೆಳೆಗಾರರೊಂದಿಗೆ ಉತ್ತಮ ಬಾಂಧವ್ಯ ಇತ್ತು. ದೊಡ್ಡಮಟ್ಟಕ್ಕೆ ಬೆಳೆದಿದ್ದರು’.

ಇನ್ನಷ್ಟು... 

ಕಾಫಿ ಡೇ ಕಾರು ರ‍್ಯಾಲಿ ನೆನೆದ ಅಭಿಮಾನಿಗಳು

ಕೋಕಾಕೋಲಾಗೆ ಕಾಫಿ ಡೇ ಮಾರಾಟ: ಮಾತುಕತೆ ಆರಂಭಿಸಿದ್ದ ಸಿದ್ದಾರ್ಥ

ಕೆಫೆ ಕಾಫಿ ಡೇ ಆಡಳಿತ ಮಂಡಳಿ ಸಭೆ ಆರಂಭ

ಹೀಗಿತ್ತು ಕಾಫಿಕಿಂಗ್‌ ವಿ.ಜಿ ಸಿದ್ದಾರ್ಥ್‌ ಸಾಗಿ ಬಂದ ಹಾದಿ 

ಕಾಣೆಯೋ, ಯಾರಾದರೂ ಕರೆದೊಯ್ದಿದ್ದಾರೋ ಗೊತ್ತಿಲ್ಲ, ಪ್ರಕರಣ ತನಿಖೆಯಾಗಲಿ: ಡಿಕೆಶಿ

ಆದಾಯ ತೆರಿಗೆ ಡಿಜಿ, ಪಾಲುದಾರರ ಕಿರುಕುಳ: ಸಿದ್ದಾರ್ಥ್‌ ಕೊನೇ ಪತ್ರದಲ್ಲೇನಿದೆ?

ದಾರಿಯುದ್ದಕ್ಕೂ 'ಕ್ಷಮಿಸಿ' ಎನ್ನುತ್ತಿದ್ದ ಸಿದ್ದಾರ್ಥ್

ಕಾಫಿ ಡೇ ಸಿದ್ದಾರ್ಥಗೆ ಕಿರುಕುಳ ಕೊಟ್ಟಿಲ್ಲ: ಆದಾಯ ತೆರಿಗೆ ಸ್ಪಷ್ಟನೆ

ಕಾಫಿ ಡೇ ಷೇರು ಶೇ 20ರಷ್ಟು ಕುಸಿತ

ನೇತ್ರಾವತಿ ಸೇತುವೆ ಬಳಿ ಎಸ್.ಎಂ.ಕೃಷ್ಣ ಅಳಿಯ, ಕಾಫಿ ಡೇ ಮಾಲೀಕ ಸಿದ್ದಾರ್ಥ್‌ ಕಾಣೆ

ಆರ್ಥಿಕ ಮುಗ್ಗಟ್ಟಿನಿಂದ ಎಸ್‌.ಎಂ.ಕೃಷ್ಣ ಅಳಿಯ ಸಿದ್ದಾರ್ಥ್ ಆತ್ಮಹತ್ಯೆ?

ಹಾಸನ, ಚಿಕ್ಕಮಗಳೂರಿನ ಕಾಫಿ ಡೇ ಗ್ಲೊಬಲ್ ಲಿಮಿಟೆಡ್‌ ಬಂದ್

ಸಿದ್ದಾರ್ಥ್ ನಾಪತ್ತೆ: ಹಾಸನ, ಚಿಕ್ಕಮಗಳೂರಿನ ಕಾಫಿ ಡೇ ಗ್ಲೊಬಲ್ ಲಿಮಿಟೆಡ್‌ ಬಂದ್ 

ಸಿದ್ಧಾರ್ಥ ಒಡೆತನದ ಕಾಫಿ ಡೇ ಕಚೇರಿಗಳ ಮೇಲೆ ಐಟಿ ದಾಳಿ

ಧೂಮಪಾನಕ್ಕೆ ಅವಕಾಶ, ಕೆಫೆ ಕಾಫಿ ಡೇ ಮಳಿಗೆಗೆ ಬೀಗ

ತೆರಿಗೆ ಬಾಕಿ ಇಲ್ಲ: ಕಾಫಿ ಡೇ

Post Comments (+)