ಗುರುವಾರ , ಅಕ್ಟೋಬರ್ 21, 2021
22 °C

ದೇಗುಲ ನೆಲಸಮ: ಸಂಸದರ ಎದುರು ಬಜರಂಗದಳ, ವಿಎಚ್‌ಪಿ ಕಾರ್ಯಕರ್ತರ ಅಳಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕ್ಕಮಗಳೂರು: ಮೈಸೂರು ಜಿಲ್ಲೆಯ ನಂಜನಗೂಡು ತಾಲ್ಲೂಕಿನ ಹರದನಹಳ್ಳಿಉಚ್ಚಗಣಿಯಲ್ಲಿ ದೇಗುಲ ನೆಲಸಮಗೊಳಿಸಿದ್ದು ಭಕ್ತರಿಗೆ ನೋವುಂಟುಮಾಡಿದೆ, ದೇಗುಲಗಳನ್ನು ಕೆಡವಬಾರದು ಎಂದು ಸಂಸದರಾದ ಪ್ರತಾಪ್‌ ಸಿಂಹ, ತೇಜಸ್ವಿ ಸೂರ್ಯ ಅವರಿಗೆ ಬಜರಂಗದಳ, ವಿಶ್ವ ಹಿಂದು ಪರಿಷತ್‌ ಕಾರ್ಯಕರ್ತರು ಒತ್ತಾಯಿಸಿದರು.  

ಮೂಡಿಗೆರೆಯ ಕೆಎಸ್‌ಆರ್‌ಟಿಸಿ ನಿಲ್ದಾಣದ ಸನಿಹದಲ್ಲಿ ಸಂಸದರನ್ನು ಕಾರ್ಯಕರ್ತರು ಸುತ್ತುವರಿದರು. ‘ನ್ಯಾಯ ಬೇಕು...’ ಘೋಷಣೆ ಕೂಗಿದರು. 

‘ದೇಗುಲ ಕೆಡವಿದ್ದರಿಂದ ನಮ್ಮ ಭಾವನೆಗೆ ನೋವಾಗಿದೆ. ನಮ್ಮ ಅಳಲನ್ನು ಪರಿಗಣಿಸಬೇಕು’ ಎಂದು ಕಾರ್ಯಕರ್ತರು ಕೋರಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು