ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖಾದಿ ಬಳಸಿ, ಕೈಮಗ್ಗ ಉಳಿಸಿ: ಸಚಿವ ಸಿ.ಟಿ ರವಿ

ಗಾಂಧೀಜಿ, ‌ಶಾಸ್ತ್ರೀಜಿ ಜಯಂತ್ಯುತ್ಸವ
Last Updated 2 ಅಕ್ಟೋಬರ್ 2020, 16:58 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ‘ನನ್ನ ಜೀವನವೇ ನನ್ನ ಸಂದೇಶ’ ಎಂದು ಹೇಳುವಂಥ ಧೈರ್ಯವನ್ನು ಗಾಂಧೀಜಿ ಹೊರತಾಗಿ ಯಾವ ನಾಯಕರೂ ತೋರಿಲ್ಲ. ಮಾತಿನಂತೆ ಬದುಕಿದ್ದರೆ ಮಾತ್ರ ಹೀಗೆ ಹೇಳಲು ಸಾಧ್ಯ ಎಂದು ಸಚಿವಸಿ.ಟಿ.ರವಿ ಹೇಳಿದರು.

ಜಿಲ್ಲಾಧಿಕಾರಿ ಕಚೇರಿ ಆವರಣದ ನೆನಪಿನಂಗಳದಲ್ಲಿ ಶುಕ್ರವಾರ ನಡೆದ ಮಹಾತ್ಮ ಗಾಂಧಿ ಹಾಗೂ ಲಾಲ್‌ಬಹದ್ದೂರ್ ಶಾಸ್ತ್ರಿ ಜಯಂತ್ಯುತ್ಸವದಲ್ಲಿ ಮಾತನಾಡಿದರು. ಜೀವನ ಪರ್ಯಂತ ಸತ್ಯದ ಮಾರ್ಗದಲ್ಲಿ ಬದುಕುವುದು ಸುಲಭದ ಸಂಗತಿಯಲ್ಲ. ಅದನ್ನು ಸಾಧ್ಯವಾಗಿಸಿದವರು ಗಾಂಧೀಜಿ. ಆವರು ಸರಳತೆಯ ಪ್ರತೀಕವಾಗಿದ್ದರು ಎಂದು ಬಣ್ಣಿಸಿದರು.

ಸರಳ ಸಾಧನಗಳ ಮೂಲಕ ಜನಮಾನಸವನ್ನು ಸ್ವಾತಂತ್ರ್ಯ ಚಳವಳಿಗೆ ಜೋಡಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಚರಕದ ಮೂಲಕ ಆತ್ಮನಿರ್ಭರರಾಗಬೇಕು, ಸ್ವಾವಲಂಬಿಗಳಾಗಬೇಕು ಎಂಬ ಸಂದೇಶ ನೀಡಿದರು ಎಂದು ವಿಶ್ಲೇಷಿಸಿದರು.

ನಮ್ಮ ಕಪಾಟಿನಲ್ಲಿ ಕನಿಷ್ಠಿ ಒಂದು ಜೊತೆಗೆ ಖಾದಿ ದಿರಿಸಿಗೆ ಜಾಗ ಕೊಟ್ಟರೆ, ನಶಿಸುತ್ತಿರುವ ಕೈಮಗ್ಗ ಬಡಿದೇಳುತ್ತದೆ. ಲಕ್ಷಾಂತರ ಮಂದಿಗೆ ಉದ್ಯೋಗವಾಗುತ್ತದೆ. ಹೀಗೆ ಸ್ವಾವಲಂಬಿ ಚಿಂತನೆ ಜೋಡಿಸಿಕೊಳ್ಳಬೇಕು’ ಎಂಬ ಆಶಯ ವ್ಯಕ್ತಪಡಿಸಿದರು.

‘ಶಾಸ್ತ್ರೀಜಿ ಆದರ್ಶಗಳ ಗಣಿ’

ಲಾಲ್‌ಬಹದ್ದೂರ ಶಾಸ್ತ್ರಿ ಅವರು ದಿಟ್ಟತನದಿಂದ ಭಾರತವನ್ನು ಸ್ವಾತಂತ್ರ್ಯ ಸಂಗ್ರಾಮಕ್ಕೆ ಭಾರತವನ್ನು ಅಣಿಗೊಳಿಸಿದರು. ಪಾಕಿಸ್ತಾನವನ್ನು ಅವರು ಮಣಿಸಿದ ರೀತಿ ಎಂದಿಗೂ ಮರೆಯಲಾಗದು ಎಂದು ಸ್ಮರಿಸಿದರು.

‘ಶಾಸ್ತ್ರೀಜಿ ಎಂದರೆ ಸರಳತೆ, ಸ್ವಾಭಿಮಾನದ, ಸಾರ್ವಜನಿಕ ಬದುಕು ಹೇಗಿರಬೇಕು ಎಂಬುದರ ಸಂದೇಶ. ಅವರಿಗೆ ಬರುತ್ತಿದ್ದ ಸಂಬಳದಲ್ಲಿ ಪತ್ನಿ ಉಳಿಸಿದ್ದನ್ನು ನೋಡಿ, ತನಗೆ ಸಂಬಳ ಕಡಿಮೆ ಮಾಡಿಸಿದ್ದರು. ಆದರ್ಶಗಳ ಕಾರಣಕ್ಕೆ ನೆನಪಾಗುತ್ತಾರೆ’ ಎಂದರು.

ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಶುಭಾ ಸತ್ಯಮೂರ್ತಿ, ಉಪಾಧ್ಯಕ್ಷೆ ಶಾರದಾಶಿಧರ್, ರೇಖಾಅನಿಲ್, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಬಿ.ಜಿ. ಸೋಮಶೇಖರಪ್ಪ, ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಆನಂದ್, ಜಿಲ್ಲಾ ಪಂಚಾಯಿತಿ ಸದಸ್ಯೆಯರಾದ ಜಸಂತಾ ಅನಿಲ್‌ಕುಮಾರ್, ಕವಿತಾಲಿಂಗರಾಜ್, ಡಿಸಿ ಡಾ.ಬಗಾದಿ ಗೌತಮ್, ಜಿಲ್ಲಾ ಪಂಚಾಯಿತಿ ಸಿಇಒ ಎಸ್.ಪೂವಿತಾ, ಎಸ್ಪಿ ಅಕ್ಷಯ್ ಎಂ. ಹಾಕೆ, ಎಡಿಸಿ ಡಾ. ಕುಮಾರ, ಉಪವಿಭಾಗಾಧಿಕಾರಿ ಡಾ.ಎಚ್.ಎಲ್.ನಾಗರಾಜ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT