ಮಂಗಳವಾರ, ಅಕ್ಟೋಬರ್ 20, 2020
23 °C
ನರಸಿಂಹರಾಜಪುರದ ಬಿ.ಎಚ್‌.ಕೈಮರ

ನರಸಿಂಹರಾಜಪುರ: ರಾತ್ರಿಯಿಡೀ ಮೋರಿಯಲ್ಲಿದ್ದರೂ ಬದುಕುಳಿದ ಮಹಿಳೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನರಸಿಂಹರಾಜಪುರ: ರಾತ್ರಿಯಿಂದ ಬೆಳಗ್ಗಿನವರೆಗೂ ಚಪ್ಪಡಿ ಮುಚ್ಚಿದ್ದ ಮೋರಿಯ ಅಡಿ ಬಿದ್ದಿದ್ದ ಮಹಿಳೆಯೊಬ್ಬರು ಪವಾಡ ಸದೃಶವಾಗಿ ಬದುಕುಳಿದ ಘಟನೆ ತಾಲ್ಲೂಕಿನ ಬಿ.ಎಚ್.ಕೈಮರದಲ್ಲಿ ನಡೆದಿದೆ.

ಬಿ.ಎಚ್.ಕೈಮರ ಸಮೀಪದ ಕುಂಬರಿಕಾಡು ರಾಮಕ್ಕ (53) ಬದುಕುಳಿದ ಮಹಿಳೆ. ಬಿ.ಎಚ್.ಕೈಮರದಿಂದ ಹಳ್ಳಿಬೈಲು, ನಾಗರಮಕ್ಕಿಗೆ ಹೋಗುವ ಬೈಪಾಸ್‍ ರಸ್ತೆಯ ಆರಂಭದಲ್ಲಿ ಸಾಲಾಗಿರುವ ಅಂಗಡಿಗಳ ಮುಂಭಾಗದಲ್ಲಿನ ದೊಡ್ಡ ಚರಂಡಿಯನ್ನು ಚಪ್ಪಡಿಯಿಂದ ಮುಚ್ಚಲಾಗಿದೆ. ಆದರೆ, ಚರಂಡಿಯ ಒಂದು ಬದಿ ತೆರೆದಿತ್ತು.

ಮಂಗಳವಾರ ರಾತ್ರಿ ಮಹಿಳೆಯು ಚರಂಡಿಯ ತೆರೆದ ಭಾಗದಲ್ಲಿ ಬಿದ್ದಿದ್ದು, ಮುಚ್ಚಿದ ಚರಂಡಿಯೊಳಗಿನ ಕತ್ತಲಲ್ಲೇ 30 ಅಡಿ ಮುಂದೆ ಹೋಗಿ ನಿತ್ರಾಣರಾಗಿದ್ದರು. ಚರಂಡಿಯ ತೆರೆದಿರುವ ಭಾಗದಲ್ಲಿ ಒಡೆದು ಹೋದ ಕುಡಿಯುವ ನೀರಿನ ಪೈಪ್‍ ದುರಸ್ತಿ ಮಾಡಲು ಸ್ಥಳೀಯ ಬಾಲಕನೊಬ್ಬ ಚರಂಡಿಗೆ ಇಳಿದಾಗ ಮಹಿಳೆ ಸಣ್ಣ ಸ್ವರದಲ್ಲಿ ನರಳುತ್ತಿರುವುದು ಕೇಳಿ ಬಂದಿದೆ.

ತಕ್ಷಣವೇ ಸ್ಥಳೀಯ ಪೆಟ್ರೋಲ್ ಬಂಕ್ ಬಿನು, ಶಕೀಲ್, ಪ್ರಕಾಶ್, ಸಚಿನ್, ರಂಜಿತ್‍ ಎನ್ನುವವರು ಮಹಿಳೆಯ ಧ್ವನಿ ಕೇಳಿ ಬರುತ್ತಿರುವ ಜಾಗದಲ್ಲಿ ಚಪ್ಪಡಿ ತೆಗೆದಿದ್ದಾರೆ. ಆಗ, ತಲೆಗೆ ಗಾಯವಾಗಿ ಅರೆ ಪ್ರಜ್ಞಾವ್ಯವಸ್ಥೆಯಲ್ಲಿ ಮಹಿಳೆ ಬಿದ್ದಿರುವುದು ಕಂಡು ಬಂದಿದೆ. ಕೂಡಲೇ ನರಸಿಂಹರಾಜಪುರದ ಸಮಾಜ ಸೇವಕಿ ಜುಬೇದಾ ಅವರಿಗೆ ಮಾಹಿತಿ ನೀಡಿದ್ದಾರೆ. ಅಂಬುಲೆನ್ಸ್‌ ನೊಂದಿಗೆ ಬಂದ ಜುಬೇದಾ, ಆಮಹಿಳೆಯನ್ನು ಸ್ವಚ್ಛಗೊಳಿಸಿ, ಬೇರೆ ಬಟ್ಟೆ ತೊಡಿಸಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದರು. ಮಹಿಳೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು