ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಯೋಗ ನರಸಿಂಹ ದೇವಾಲಯ ಕಲಾಕರ್ಶಣೆ ಕಾಮಗಾರಿಗೆ ಭೂಮಿಪೂಜೆ’

Last Updated 1 ಡಿಸೆಂಬರ್ 2022, 4:30 IST
ಅಕ್ಷರ ಗಾತ್ರ

ಅಜ್ಜಂಪುರ: ತಾಲ್ಲೂಕಿನ ಬಗ್ಗವಳ್ಳಿ ಗ್ರಾಮದ ಯೋಗ ನರಸಿಂಹ ದೇವಾಲಯದ ಕಲಾಕರ್ಶಣೆ ಕಾಮಗಾರಿಗೆ ದೇವಾಲಯ ಅಭಿವೃದ್ಧಿ ಸಂಘ ಅಧ್ಯಕ್ಷ ಅನಂತ್ ಭೂಮಿ ಪೂಜೆ ನಡೆಸಿದರು.

ಬಳಿಕ ಮಾತನಾಡಿದ ಅವರು, ೀ ದೇವಾಲಯ 12 ನೇ ಶತಮಾನದಲ್ಲಿ ಹೊಯ್ಸಳರಿಂದ ನಿರ್ಮಾಣಗೊಂಡಿತ್ತು. ಶಿಥಿಲಾವಸ್ಥೆಗೆ ಜಾರುತ್ತಿತ್ತು. ಹಿಂದಿನ ಕಲಾ-ವಾಸ್ತುಶಿಲ್ಪ ಉಳಿಸಲು, ಪುರಾತನ ದೇವಾಲಯ ರಕ್ಷಿಸಲು ನಿರ್ಧರಿಸಲಾಯಿತು. ಅದಕ್ಕಾಗಿ ಸಂಘ ಮೂರು ವರ್ಷದಿಂದ ಕಾರ್ಯೋನ್ಮುಖವಾಗಿತ್ತು ಎಂದರು.

ಸಂಘದ ಕಾರ್ಯದರ್ಶಿ ಶಾಂತಪ್ಪ, ದೇವಾಲಯ ಪುನರ್ ನವೀಕರಣಕ್ಕೆ ₹1.55 ಕೋಟಿ ಅನುದಾನ ಬಿಡುಗಡೆಯಾಗಿ, ಕಾಮಗಾರಿ ಆರಂಭವಾಗಿದೆ ಎಂದರು.

ಶೃಂಗೇರಿ ಶಂಕರ ಮಠದ ಲಕ್ಷ್ಮೀನಾರಾಯಣ ಸೋಮಯಾಜಿ, ಪುರೋಹಿತ ರಾಘವೇಂದ್ರ ಶರ್ಮ, ನಾಗೇಶ್ ಉಡಾಳ, ಕುಮಾರಸ್ವಾಮಿ, ಪುರುಷೋತ್ತಮ ನೇತೃತ್ವದಲ್ಲಿ ಧಾರ್ಮಿಕ ವಿಧಿ-ವಿಧಾನಗಳು ಜರುಗಿದವು.

ರಾಜ್ಯ ಪುರಾತತ್ವ ಇಲಾಖೆಯ ಮೈಸೂರು ಘಟಕ ಎಂಜಿನಿಯರ್ ಕುಬೇರಪ್ಪ, ದೇವಾಲಯ ಅಭಿವೃದ್ಧಿ ಸಂಘದ ಕಾರ್ಯದರ್ಶಿ ಶಾಂತಪ್ಪ, ಪ್ರಸನ್ನ ಕುಮಾರ್, ಸದಸ್ಯ ಗಿರೀಶ್, ಪ್ರಸಾದ್, ಕುಮಾರಸ್ವಾಮಿ, ಪ್ರಭುಕುಮಾರ್ ಇದ್ದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT