ಸಡಗರದ ಯುಗಾದಿ ಆಚರಣೆ

ಬುಧವಾರ, ಏಪ್ರಿಲ್ 24, 2019
30 °C

ಸಡಗರದ ಯುಗಾದಿ ಆಚರಣೆ

Published:
Updated:
Prajavani

ಚಿಕ್ಕಮಗಳೂರು: ನಗರದ ಜನರು ಸಡಗರದಿಂದ ಶನಿವಾರ ಯುಗಾದಿ ಆಚರಿಸಿದರು.

ಮುಂಜಾನೆಯೆ ಮನೆ ಬಾಗಿಲಿಗೆ ಹಸಿರು ತೋರಣ ಕಟ್ಟಿದರು. ಮನೆ ಮಂದಿಯಲ್ಲ ಎಣ್ಣೆ ಸ್ನಾನ ಮಾಡಿ, ಹೊಸ ಬಟ್ಟೆ ತೊಟ್ಟು ಸಂಭ್ರಮಿಸಿದರು. ಪೂಜಾ ಕೈಂಕರ್ಯದ ನಂತರ ಯುಗಾದಿ ವಿಶೇಷವಾದ ಬೇವು–ಬೆಲ್ಲ ತಿಂದು ಹೊಸ ವರ್ಷ ಸ್ವಾಗತಿಸಿದರು. ತರಹೆವಾರಿ ಖಾದ್ಯಗಳನ್ನು ತಯಾರಿಸಿ ಸವಿದು ಸಂತಸಪಟ್ಟರು.

ಹಬ್ಬದ ನಿಮಿತ್ತ ದೇಗುಲಗಳಲ್ಲಿ ವಿಶೇಷ ಅಲಂಕಾರ, ಪೂಜೆ ಜರುಗಿದವು. ದೇಗುಲಗಳು ಭಕ್ತರಿಂದ ಗಿಜಿಗುಡತ್ತಿದ್ದವು. ಮುಖ್ಯ ರಸ್ತೆಗಳಲ್ಲಿನ ಬಹುತೇಕ ಅಂಗಡಿಗಳು ಮುಚ್ಚಿದ್ದವು. ರಸ್ತೆಗಳಲ್ಲಿ ವಾಹನ ಸಂಚಾರ ವಿರಳವಾಗಿತ್ತು. ಪೊಲೀಸ್ ಬಿಗಿಭದ್ರತೆ ಇತ್ತು.

 

 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !