ಶನಿವಾರ, ಮೇ 8, 2021
24 °C

ಜಿ.ಪಂ, ತಾ.ಪಂ ಸದಸ್ಯರ ಸಂಖ್ಯೆ ಮರು ನಿಗದಿ: ಅಧಿಸೂಚನೆ ಪ್ರಕಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕ್ಕಮಗಳೂರು: ಜಿಲ್ಲಾ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿ ಸದಸ್ಯರ ಸಂಖ್ಯೆಯನ್ನು ಮರು ನಿಗದಿಮಾಡಿ ಬುಧವಾರ ಆದೇಶ ಹೊರಡಿಸಲಾಗಿದೆ.

ರಾಜ್ಯದ ಎಲ್ಲಾ 31 ಜಿಲ್ಲಾ ಪಂಚಾಯಿತಿ ಮತ್ತು 239 ತಾಲ್ಲೂಕು ಪಂಚಾಯಿತಿ ಕ್ಷೇತ್ರದ ಸಂಖ್ಯೆಗಳ ಅಧಿಸೂಚನೆ ಪ್ರಕಟಿಸಲಾಗಿದೆ. ಚಿಕ್ಕಮಗಳೂರು ಜಿಲ್ಲಾ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿ ಸದಸ್ಯರ ಸಂಖ್ಯೆ ನಿಗದಿ ಇಂತಿದೆ.

ಚಿಕ್ಕಮಗಳೂರು: ಜಿ.ಪಂ– 7, ತಾ.ಪಂ– 15, ಮೂಡಿಗೆರೆ: ಜಿ.ಪಂ– 4 , ತಾ.ಪಂ–10, ಕೊಪ್ಪ: ಜಿ.ಪಂ–3, ತಾ.ಪಂ.–11, ಶೃಂಗೇರಿ: ಜಿ.ಪಂ–2, ತಾ.ಪಂ–11, ಎನ್‌.ಆರ್‌.ಪುರ: ಜಿ.ಪಂ–2, ತಾ.ಪಂ–11, ಕಡೂರು: ಜಿ.ಪಂ–8, ತಾ.ಪಂ–18, ತರೀಕೆರೆ: ಜಿ. ಪಂ–4, ತಾ.ಪಂ–9 ಹಾಗೂ ಅಜ್ಜಂಪುರ: ಜಿ.ಪಂ–3, ತಾ.ಪಂ–11 ಸದಸ್ಯರ ಸಂಖ್ಯೆ ನಿಗದಿಪಡಿಸಲಾಗಿದೆ.

ಒಟ್ಟು ಜಿಲ್ಲಾ ಪಂಚಾಯಿತಿ ಸದಸ್ಯರ ಸಂಖ್ಯೆ–33 ಹಾಗೂ ತಾಲ್ಲೂಕು ಪಂಚಾಯಿತಿ ಸದಸ್ಯರ ಸಂಖ್ಯೆ–96 ನಿಗದಿಪಡಿಸಲಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು