ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊನ್ನೆಕಾಡು ನೀರು ಕಳಸೇಶ್ವರನಿಗೆ ಅರ್ಪಣೆ

ಕಳಸ ನೀರು ಬಳಕೆದಾರರ ಕ್ರಿಯಾ ಸಮಿತಿ ಮೆರವಣಿಗೆ
Last Updated 17 ಜುಲೈ 2017, 7:25 IST
ಅಕ್ಷರ ಗಾತ್ರ

ಕಳಸ: ಇಲ್ಲಿನ ಪಟ್ಟಣಕ್ಕೆ ಹೊನ್ನೆಕಾಡು ಯೋಜನೆಯ ನೀರು ತಲುಪಿದ ಅಂಗವಾಗಿ ಭಾನುವಾರ ಸಂಭ್ರಮ ಆಚರಿಸಲಾಯಿತು.

ಕಳಸದ ನೀರು ಬಳಕೆದಾರರ ಕ್ರಿಯಾ ಸಮಿತಿಯ ನೇತೃತ್ವದಲ್ಲಿ ನಡೆದ ಸಂಭ್ರ ಮಾಚರಣೆಯು ಮಳೆಯ ನಡುವೆಯೂ ರಂಗು ಪಡೆದಿತ್ತು. ಬೆಳಿಗ್ಗೆಯೇ ಹೊನ್ನೆ ಕಾಡಿನಿಂದ ಪೂರ್ಣಕುಂಭ ಕಲಶಗಳಲ್ಲಿ ನೀರನ್ನು ವಾಹನದಲ್ಲಿ ತರಲಾಯಿತು.

ವೆಂಕಟರಮಣ ದೇವಸ್ಥಾನದ ಬಳಿ ಪೂರ್ಣಕುಂಭ ಕಲಶಗಳನ್ನು ಬಳಕೆ ದಾರರು ಹರ್ಷೋದ್ಘಾರದಿಂದ ಸ್ವಾಗತಿಸಿ ದರು.ಅಲ್ಲಿಂದ ಕಳಸೇಶ್ವರ ದೇವಸ್ಥಾನದ ವರೆಗೆ ನಡೆದ ಮೆರವಣಿಗೆಯಲ್ಲಿ ಮಂಗಳವಾದ್ಯ, ಚಂಡೆವಾದ್ಯದ ಸದ್ದು ಜೋರಾಗಿತ್ತು. ಬಣ್ಣ ಬಣ್ಣದ ಪಟಾಕಿಗಳ ರಂಗು ಜನರನ್ನು ರಂಜಿಸಿತು.

ನೀರು ಬಳಕೆದಾರರ ಕ್ರಿಯಾ ಸಮಿತಿ ಅಧ್ಯಕ್ಷ ರವಿ ರೈ, ಗೌರವಾಧ್ಯಕ್ಷ ಮಂಜ ಪ್ಪಯ್ಯ, ತಾಲ್ಲೂಕು ಪಂಚಾಯಿತಿ ಸದಸ್ಯ ರಫೀಕ್‌, ಎಪಿಎಂಸಿ ಸದಸ್ಯ ಎಂ .ಬಿ. ಸಂತೋಷ್‌, ಪದಾಧಿಕಾರಿಗಳಾದ ಬ್ರಹ್ಮ ದೇವ, ರುದ್ರಯ್ಯ ಆಚಾರ್‌, ಅನಿಲ್‌ ಡಿಸೋಜ, ಸುರೇಶ್‌, ಗೋಪಾಲ ಪ್ರಭು, ಬಿ.ಜಿನರಾಜಯ್ಯ, ಭೋಜೇಗೌಡ, ಗೋಪಾಲ, ಜೆಡಿಎಸ್‌ ಮುಖಂಡರಾದ ಜ್ವಾಲನಯ್ಯ ಮೆರವಣಿಗೆಯ ಮುಂಚೂಣಿಯಲ್ಲಿದ್ದರು.

ಕಳಸದ ಕಳಸೇಶ್ವರ ಸ್ವಾಮಿ ದೇವಸ್ಥಾನ, ಚಂದ್ರನಾಥ ಸ್ವಾಮಿ ಬಸದಿ, ಪಟ್ಟಣದ ದೇವಸ್ಥಾನಗಳಿಗೆ ನೀರನ್ನು ಆಯಾ ದೇವಸ್ಥಾನಗಳ ಪುರೋಹಿತರು ತಲೆಯ ಮೇಲೆ ಹೊತ್ತು ಕೊಂಡೊಯ್ದರು. ಅಲ್ಲಿ ಆ ನೀರಿನಿಂದ ದೇವರಿಗೆ ಅಭಿಷೇಕ ಮಾಡಲಾಯಿತು.

ಕಳಸೇಶ್ವರ ದೇವಸ್ಥಾನದಲ್ಲಿ ನೆರೆದಿದ್ದ ನೀರು ಬಳಕೆದಾರರ ಸಮ್ಮುಖದಲ್ಲಿ ‘ಹೊನ್ನೆಕಾಡು ನೀರು ಯಾವುದೇ ವಿಘ್ನ ವಾಗದಂತೆ ದಶಕಗಳ ಕಾಲ ಕಳಸಕ್ಕೆ ಹರಿ ಯಲಿ. ಎಲ್ಲ ಜನರ ಬಾಯಾರಿಕೆ ತಣಿಸಿ, ಆರೋಗ್ಯ ವೃದ್ಧಿಸಲಿ’ ಎಂದು ಪ್ರಾರ್ಥಿಸಿ ಅಭಿಷೇಕ ನೆರವೇರಿಸಲಾಯಿತು.

ಆನಂತರ ದುರ್ಗಾ ಮಂಟಪದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ನೀರು ಬಳೆಕದಾರರ ಕ್ರಿಯಾ ಸಮಿತಿ ಗೌರವಾಧ್ಯಕ್ಷ ಜಿ.ಕೆ.ಮಂಜಪ್ಪಯ್ಯ, 2006 ರಿಂದ ಈವರೆಗೆ ಹೊನ್ನೆಕಾಡು ಯೋಜನೆ ಗಾಗಿ ವಿವಿಧ ಪಕ್ಷಗಳ ಮುಖಂಡರ ಸಹಕಾರದಿಂದ ನಡೆಸಿದ ಪ್ರಯತ್ನ, ಅರಣ್ಯ ಭೂಮಿಯಿಂದಾಗಿ ಉಂಟಾದ ತೊಡಕು, ಆನಂತರದ ಕಾನೂನು ಸಮರ ಹಾಗೂ ಕಳೆದ 3 ತಿಂಗಳಲ್ಲಿ ₹ 1 ಕೋಟಿ ಮೊತ್ತದ ತುರ್ತು ಕಾಮಗಾರಿಯ ಬಗ್ಗೆ ಮಾಹಿತಿ ನೀಡಿದರು.

‘ಯೋಜನೆಯಲ್ಲಿ ಈಗಲೂ ₹ 1 ಕೋಟಿಗೂ ಹೆಚ್ಚು ಮೊತ್ತ ಟೆಂಡರ್‌ ಆಗದೆ ಉಳಿದಿದೆ. ಈ ಅನುದಾನದಲ್ಲಿ ಪಟ್ಟಣಕ್ಕೆ ವಿತರಣಾ ಪೈಪ್‌ಲೈನ್‌ ಕಾಮ ಗಾರಿಗೆ ಯೋಜನಾ ವರದಿ ಸಿದ್ಧಪಡಿ ಸಲು ಈಗಿನ ಜಿಲ್ಲಾ ಪಂಚಾಯಿತಿ ಸದಸ್ಯರು ಆಸಕ್ತಿ ತೋರಲಿ. ಎಲ್ಲರೂ ರಾಜಕಾರಣ ಮರೆತು ಯೋಜನೆಯ ಉಳಿದ ಭಾಗ ಸಮರ್ಪಕವಾಗಿ ಅನುಷ್ಠಾನಗೊಳಿಸೋಣ’ ಎಂದರು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ರತಿ, ಉಪಾಧ್ಯಕ್ಷ ಪ್ರಕಾಶ್‌, ಸದಸ್ಯ ಸಂತೋಷ್‌, ತಾಲ್ಲೂಕು ಪಂಚಾಯಿತಿ ಸದಸ್ಯ ರಫೀಕ್‌,  ಸಮಿತಿಯ ಅಧ್ಯಕ್ಷ ರವಿ ರೈ, ಪದಾಧಿಕಾರಿಗಳಾದ ಬ್ರಹ್ಮದೇವ, ಬಿ.ಜಿನರಾಜಯ್ಯ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT