ಗುರುವಾರ , ಅಕ್ಟೋಬರ್ 22, 2020
22 °C

ಚಿತ್ರದುರ್ಗ: ಜಮೀನಿನಲ್ಲಿ ಸಿಕ್ಕಿತು ₹ 16 ಲಕ್ಷ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿತ್ರದುರ್ಗ: ಚಳ್ಳಕೆರೆ ತಾಲ್ಲೂಕಿನ ಬುಕ್ಲೊರಹಳ್ಳಿಯ ಜಮೀನೊಂದರಲ್ಲಿ ಗುರುವಾರ ₹16.8 ಲಕ್ಷ ಪತ್ತೆಯಾಗಿದೆ. ಕಳವು ಮಾಡಿದ ಹಣವನ್ನು ಜಾಲಿಗಿಡದ ಪೊದೆಯಲ್ಲಿ ಬಿಸಾಡಿ ಹೋಗಿರುವ ಸಾಧ್ಯತೆ ಇದೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

ದೊಡ್ಡ ಸೂರಮ್ಮ ಎಂಬುವರ ಜಮೀನಿನಲ್ಲಿ ₹50, ₹100 ಹಾಗೂ ₹2 ಸಾವಿರ ಮುಖಬೆಲೆಯ ಕಂತೆ ಕಂತೆ ಹಣ ಸಿಕ್ಕಿದೆ. ಈ ಹಣವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಬೀದರ್- ಶ್ರೀರಂಗಪಟ್ಟಣ ಹೆದ್ದಾರಿ ವಿಸ್ತರಣೆಯ ಕಾಮಗಾರಿ ಕೈಗೆತ್ತಿಕೊಂಡಿರುವ ದಿಲೀಪ್ ಬಿಲ್ಡ್‌ಕಾನ್‌ ಕಂಪನಿಯ ಕಚೇರಿ ಅನತಿ ದೂರದಲ್ಲಿದೆ. ಅ.3ರಂದು ಇದೇ ಕಚೇರಿಯಲ್ಲಿ ₹ 36 ಲಕ್ಷ ಹಣ ಕಳವಾಗಿತ್ತು. ಬ್ಯಾಂಕ್‌ನಿಂದ ಬಿಡಿಸಿಕೊಂಡು ತಂದಿದ್ದ ಹಣವನ್ನು ಚಾವಣಿ ಮುರಿದು ಕಳವು ಮಾಡಲಾಗಿತ್ತು. ಈ ಹಣವನ್ನು ಬಿಸಾಡಿರುವ ಸಾಧ್ಯತೆ ಇದೆ ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು