ಬುಧವಾರ, ಜುಲೈ 28, 2021
28 °C
ಸಿರಿಗೆರೆಯಲ್ಲಿ ಲಿಂ.ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ ಅವರ ಶ್ರದ್ಧಾಂಜಲಿ ಸಮಾರಂಭ

ಸಸಿ ನೆಟ್ಟರೆ ವಿದ್ಯಾರ್ಥಿಗಳಿಗೆ ಕೃಪಾಂಕ ಕೊಡಿ: ಶಿವಮೂರ್ತಿ ಶಿವಾಚಾರ್ಯ ಶ್ರೀ ಸಲಹೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಿರಿಗೆರೆ: ಪ್ರೌಢಶಾಲೆಯಲ್ಲಿ ಓದುತ್ತಿರುವ ಪ್ರತಿ ವಿದ್ಯಾರ್ಥಿ ಮೂರು ವರ್ಷದ ಅವಧಿಯಲ್ಲಿ 10 ಸಸಿಗಳನ್ನು ನೆಟ್ಟು ಪೋಷಣೆ ಮಾಡಿದರೆ 10 ಕೃಪಾಂಕ ಕೊಡುವ ಪದ್ಧತಿ ಜಾರಿಗೆ ತರಬೇಕು ಎಂದು ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಸಲಹೆ ನೀಡಿದರು.

ಇಲ್ಲಿನ ಬಿಎಲ್‌ಆರ್‌ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಆಯೋಜಿಸಿರುವ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ ಅವರ 26ನೇ ಶ್ರದ್ಧಾಂಜಲಿಯ ಮೂರನೇ ದಿನದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಆಗ ರಾಜ್ಯದಲ್ಲಿ ಖರ್ಚಿಲ್ಲದೆ ಸಸಿಗಳನ್ನು ಬೆಳೆಸಬಹುದು. ಈ ಯೋಜನೆಯಿಂದ ನಾಡು, ಸಸ್ಯಶಾಮಲೆಯಾಗಿ ಸಮೃದ್ದವಾಗುತ್ತದೆ. ಬರಗಾಲ ತಾನಾಗಿಯೇ ದೂರವಾಗುತ್ತದೆ’ ಎಂದು ಸ್ವಾಮೀಜಿ ಅಭಿಪ್ರಾಯಪಟ್ಟರು.

‘ಪರಿಶುದ್ಧ ನಡೆ ಇಲ್ಲದ ಪರಿಣಾಮ ಇಂದಿನ ರಾಜಕಾರಣ ಕಲುಷಿತಗೊಂಡಿದೆ. ಯೋಗವನ್ನು ಜೀವನಕ್ಕೆ ಅಳವಡಿಸಿಕೊಳ್ಳಲು ವಿದೇಶಿಕಗರು ಭಾರತಕ್ಕೆ ಬರುತ್ತಾರೆ. ಆದರೆ, ಭಾರತೀಯರು ಭೋಗ ಜೀವನಕ್ಕಾಗಿ ವಿದೇಶಗಳಿಗೆ ತೆರಳತ್ತಿರುವುದು ವಿಪರ್ಯಾಸ’
ಎಂದು ತಿಳಿಸಿದರು.

ಮುಖ್ಯಾಂಶಗಳು

* ಖರ್ಚು ಇಲ್ಲದೇ ಹಸಿರು ಬೆಳೆಸುವ ಉಪಾಯ

* ವಿದ್ಯಾರ್ಥಿಗಳಲ್ಲಿ ಪರಿಸರ ಪ್ರೀತಿ ಬೆಳೆಯುತ್ತದೆ

* ಸಸ್ಯಶಾಮಲೆ ಸಮೃದ್ಧಿಯಾದರೆ ತಾನಾಗಿಯೇ ಬರ ದೂರ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು