ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರೋಗ್ಯ ನಿರೀಕ್ಷಕ ಎಸಿಬಿ ಬಲೆಗೆ

Last Updated 18 ಮಾರ್ಚ್ 2021, 13:56 IST
ಅಕ್ಷರ ಗಾತ್ರ

ಹೊಳಲ್ಕೆರೆ: ಇಲ್ಲಿಯ ಪಟ್ಟಣ ಪಂಚಾಯಿತಿಯ ಆರೋಗ್ಯ ನಿರೀಕ್ಷಕ ಪರಮೇಶ್ವರಪ್ಪ ಲಂಚ ಸ್ವೀಕರಿಸುವಾಗ ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಬಲೆಗೆ ಬಿದ್ದಿದ್ದಾರೆ.

ಪಟ್ಟಣದ ಸನತ್ ಕುಮಾರ್ ಎಂಬವರು ಶಾಮಿಯಾನ, ಆಯಿಲ್ ಹಾಗೂ ಆಹಾರ ಉತ್ಪನ್ನಗಳ ಏಜೆನ್ಸಿ ಹೊಂದಿದ್ದಾರೆ. ಉದ್ದಿಮೆ ಪರವಾನಗಿ ನವೀಕರಣ ಮಾಡಿ ಕೊಡಲು ಪರಮೇಶ್ವರಪ್ಪ ₹2,000 ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈ ಬಗ್ಗೆ ಸನತ್ ಕುಮಾರ್ ಅವರು ಎಸಿಬಿಗೆ ದೂರು ನೀಡಿದ್ದರು.

ಸನತ್ ಕುಮಾರ್ ಅವರು ನವೀಕರಣದ ಶುಲ್ಕವನ್ನುಗುರುವಾರ ಬ್ಯಾಂಕಿಗೆ ಜಮಾ ಮಾಡಿದರು. ನಂತರ ಅವರನ್ನು ಪಟ್ಟಣದ ವೆಂಟಕೇಶ್ವರ ಹಾರ್ಡ್‌ವೇರ್ ಸಮೀಪಕ್ಕೆ ಬರಲು ಪರಮೇಶ್ವರಪ್ಪ ಸೂಚಿಸಿದರು. ಬಸ್‌ ನಿಲ್ದಾಣದ ಸಮೀಪದಲ್ಲೇ ಸನತ್ ಕುಮಾರ್ ಅವರಿಂದ ಲಂಚ ಪಡೆಯುತ್ತಿದ್ದಾಗ ಎಸಿಬಿ ಪೊಲೀಸರು ದಾಳಿ ನಡೆಸಿದ್ದಾರೆ. ಹಣವನ್ನು ವಶಕ್ಕೆ ಪಡೆದು, ಆರೋಗ್ಯ ನಿರೀಕ್ಷರನ್ನು ಬಂಧಿಸಿದ್ದಾರೆ.

ಪೊಲೀಸ್ ಇನ್‌ಸ್ಪೆಕ್ಟರ್ ಪ್ರವೀಣ್ ಕುಮಾರ್ ನೇತೃತ್ವದಲ್ಲಿ ಆರೋಪಿಯ ಮನೆಯನ್ನೂ ಶೋಧಿಸಲಾಗಿದ್ದು, ತನಿಖೆ ಮುಂದುವರಿದಿದೆ.ಭ್ರಷ್ಟಾಚಾರ ನಿಗ್ರಹ ದಳದ ಡಿವೈಎಸ್‌ಪಿ ಬಸವರಾಜ ಮಗದುಮ್, ಪೊಲೀಸ್ ಇನ್‌ಸ್ಪೆಕ್ಟರ್‌ ಡಿ.ಎಸ್. ಆಂಜನೇಯ ದಾಳಿಯ ನೇತೃತ್ವ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT