ಶನಿವಾರ, 21 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹೊಸದುರ್ಗ: ಎಪಿಎಂಸಿ ಆವರಣದಲ್ಲೇ ನಿಂತ ರಾಗಿ ತುಂಬಿದ ಟ್ರ್ಯಾಕ್ಟರ್‌ಗಳು

Published : 30 ಜನವರಿ 2023, 5:25 IST
ಫಾಲೋ ಮಾಡಿ
Comments

ಹೊಸದುರ್ಗ: ರೈತರು ತಂದ ರಾಗಿಯನ್ನು ಖರೀದಿ ಮಾಡದ ಕಾರಣ ಪಟ್ಟಣದ ಎಪಿಎಂಸಿ ಆವರಣದಲ್ಲಿ ರಾಗಿ ಹೊತ್ತ ಟ್ರ್ಯಾಕ್ಟರ್‌ಗಳು ಸಾಲುಗಟ್ಟಿ ನಿಂತಿವೆ.

ಶನಿವಾರ ರಾಗಿ ಖರೀದಿ ಮಾಡುವವರು ಬಂದಿರಲಿಲ್ಲ. ಭಾನುವಾರ ಬರಬಹುದು ಎಂಬ ನಿರೀಕ್ಷೆಯಲ್ಲಿ ರೈತರು ಎಪಿಎಂಸಿ ಆವರಣದಲ್ಲೇ ರಾಗಿ ಖರೀದಿಗೆ ಎದುರು ನೋಡುತ್ತಿದ್ದರು. ಆದರೆ, ಭಾನುವಾರವೂ ಖರೀದಿ ಮಾಡದ ಕಾರಣ ನೂರಾರು ಟ್ರ್ಯಾಕ್ಟರ್ ಲೋಡ್ ರಾಗಿ ಆವರಣದಲ್ಲೇ ಇದೆ.

‘ಶುಕ್ರವಾರದಿಂದ ರಾಗಿ ಖರೀದಿಗೆ ಕಾಯುತ್ತಿದ್ದೇವೆ. ಖರೀದಿದಾರರು ಸಮಯಕ್ಕೆ ಸರಿಯಾಗಿ ಬರುವುದಿಲ್ಲ. 100ಕ್ಕೂ ಅಧಿಕ ಟ್ರ್ಯಾಕ್ಟರ್‌ನಲ್ಲಿ ರಾಗಿ ತರಲಾಗಿದೆ. ದಿನಕ್ಕೆ 20ರಿಂದ 25 ಟ್ರ್ಯಾಕ್ಟರ್ ಲೋಡ್ ಮಾತ್ರ ಖರೀದಿ ನಡೆಯುತ್ತಿದೆ. ಹೀಗಾದರೆ ರೈತರ ಪರಿಸ್ಥಿತಿ ಏನು?. ಸ್ವಂತ ಟ್ರ್ಯಾಕ್ಟರ್ ಇಲ್ಲದವರು ಬಾಡಿಗೆ ಟ್ರ್ಯಾಕ್ಟರ್‌ನಲ್ಲಿ ಲೋಡ್ ತರುತ್ತಾರೆ. ಯಾವುದೇ ಕೆಲಸವಿಲ್ಲದಿದ್ದರೂ ದಿನಕ್ಕೆ ₹ 3000 ಬಾಡಿಗೆ ನೀಡಬೇಕು. ದಿನಕ್ಕೆ 100 ಟ್ರ್ಯಾಕ್ಟರ್ ರಾಗಿ ಖರೀದಿಸಿದರೆ ರೈತರಿಗೆ ಅನುಕೂಲವಾಗುತ್ತದೆ. ಮಾರ್ಚ್ 30 ಖರೀದಿಗೆ ಕೊನೆ ದಿನ. ಕೊನೆಯ ದಿನದವರೆಗೂ ಕಾಯದೇ ಹೆಚ್ಚುವರಿ ಸಿಬ್ಬಂದಿ ನೇಮಿಸಿಕೊಂಡು ಶೀಘ್ರ ರಾಗಿ ಖರೀದಿ ಮಾಡಬೇಕು’ ಎಂದು ಹೊನ್ನೇಕೆರೆ ಮೂರ್ತಪ್ಪ ಒತ್ತಾಯಿಸಿದರು.

‘ಹೊಸದುರ್ಗದಲ್ಲಿ 10,000ಕ್ಕೂ ಅಧಿಕ ರೈತರು ರಾಗಿ ಖರೀದಿಗೆ ನೋಂದಣಿ ಮಾಡಿಸಿದ್ದಾರೆ. ದಿನಕ್ಕೆ 30 ರೈತರ ರಾಗಿ ಖರೀದಿ ಮಾತ್ರ ನಡೆಯುತ್ತಿದೆ. ಹೀಗಾದರೆ 10,000 ರೈತರ ರಾಗಿ ಖರೀದಿಗೆ ಎಷ್ಟು ದಿನಗಳಾಗಬಹುದು?. ಪ್ರಸ್ತುತ ಎರಡು ಕಡೆ ಅನ್‌ಲೋಡ್ ಮಾಡಲಾಗುತ್ತಿದೆ. ಹೆಚ್ಚುವರಿ ಸಿಬ್ಬಂದಿ ಪಡೆದು ನಾಲ್ಕು ಕಡೆ ಅನ್‌ಲೋಡ್ ಮಾಡಿದರೆ, ರಾಗಿ ಖರೀದಿ ಕಾರ್ಯ ಶೀಘ್ರವೇ ಮುಗಿಯುತ್ತದೆ. ರೈತರ ಹೊರೆ ತಗ್ಗುತ್ತದೆ’ ಎನ್ನುತ್ತಾರೆ ನಾಗೇನಹಳ್ಳಿ ಚಂದ್ರಪ್ಪ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT