ಚಿತ್ರದುರ್ಗದಲ್ಲಿ ಬಂಡಾಯ ಸಾಹಿತ್ಯ ಸಂವಾದ

7

ಚಿತ್ರದುರ್ಗದಲ್ಲಿ ಬಂಡಾಯ ಸಾಹಿತ್ಯ ಸಂವಾದ

Published:
Updated:

ಚಿತ್ರದುರ್ಗ: ಬಂಡಾಯ ಸಾಹಿತ್ಯಕ್ಕೆ ನಾಲ್ಕು ದಶಕ ತುಂಬಿದ್ದರಿಂದ ರಾಜ್ಯ ಮಟ್ಟದ ಮೊದಲ ‘ಸಾಹಿತ್ಯ ಸಂವಾದ’ ವನ್ನು ಚಿತ್ರದುರ್ಗದಲ್ಲಿ ಏರ್ಪಡಿಸಲು ಬಂಡಾಯ ಸಾಹಿತ್ಯ ಸಂಘಟನೆ ಮುಂದಾಗಿದೆ.

ಪ್ರೊ.ಬರಗೂರು ರಾಮಚಂದ್ರಪ್ಪ ನೇತೃತ್ವದಲ್ಲಿ ನಗರದಲ್ಲಿ ಭಾನುವಾರ ನಡೆದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದ್ದು, ಅಕ್ಟೋಬರ್‌ ಎರಡನೇ ವಾರದಲ್ಲಿ ಕಾರ್ಯಕ್ರಮ ಆಯೋಜಿಸಲು ನಿರ್ಧರಿಸಲಾಗಿದೆ.

ಭಾರತೀಯ ಸಾಹಿತ್ಯ, ಸಂಸ್ಕೃತಿ ಹಾಗೂ ಬಂಡಾಯ ಪರಂಪರೆಯ ಕುರಿತು ಎರಡು ದಿನ ಸಂವಾದ ನಡೆಯಲಿದೆ. ದಕ್ಷಿಣ ಭಾರತದ ಸಾಹಿತ್ಯದ ಜತೆಗೆ ಉರ್ದು, ಹಿಂದಿ, ಬಂಗಾಳಿ, ಕಾಶ್ಮೀರಿ ಹಾಗೂ ಪಂಜಾಬಿ ಸಾಹಿತ್ಯದಲ್ಲಿನ ಬಂಡಾಯ ಪರಂಪರೆಯನ್ನು ಸಮಕಾಲೀನ ಸಂದರ್ಭಕ್ಕೆ ಮುಖಾಮುಖಿಗೊಳಿಸುವುದು ಇದರ ಉದ್ದೇಶ ಎಂದು ಆಯೋಜನಾ ಸಮಿತಿಯ ಡಾ.ಜೆ. ಕರಿಯಪ್ಪ ಮಾಳಿಗೆ ಮಾಹಿತಿ ನೀಡಿದರು.

ದೇಶದ ವಿವಿಧ ರಾಜ್ಯಗಳಿಂದ ಸಂಪನ್ಮೂಲ ವ್ಯಕ್ತಿಗಳು ಭಾಗವಹಿಸಲಿದ್ದಾರೆ. ಸಂವಾದ ಗೋಷ್ಠಿ ಮತ್ತು ಕವಿಗೋಷ್ಠಿ ನಡೆಯಲಿವೆ. ಬಂಡಾಯ ಸಾಹಿತ್ಯದ ಹಿರಿಯ ಹಾಗೂ ಯುವ ಬರಹಗಾರರನ್ನು ಒಂದೆಡೆ ತರುವ ಪ್ರಯತ್ನ ಇದಾಗಿದೆ. ಇನ್ನು ಮುಂದೆ ಪ್ರತಿ ವರ್ಷವೂ ‘ಸಾಹಿತ್ಯ ಸಂವಾದ’ ಏರ್ಪಡಿಸಲಾಗುವುದು ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !