ಸೋಮವಾರ, ನವೆಂಬರ್ 18, 2019
20 °C

ಅಯ್ಯೋ ಪಾಪ | ತಂತಿಬೇಲಿಯ ಉರುಳಿಗೆ ಸಿಲುಕಿದ ಕರಡಿ

Published:
Updated:

ಮೊಳಕಾಲ್ಮೂರು (ಚಿತ್ರದುರ್ಗ ಜಿಲ್ಲೆ): ಸಮೀಪದ ರಾಯದುರ್ಗ ರಸ್ತೆಯ ಜಮೀನಿಗೆ ಅಳವಡಿಸಿದ ತಂತಿಬೇಲಿಯ ಉರುಳಿಗೆ ಕರಡಿಯೊಂದು ಸೋಮವಾರ ನಸುಕಿನಲ್ಲಿ ಸಿಲುಕಿದೆ.

ಬೇಲಿ ದಾಟಲು ಮುಂದಾದ ಕರಡಿಯ ಕೊರಳಿಗೆ ಉರುಳು ಬಿಗಿದುಕೊಂಡಿದೆ. ತಂತಿಯಿಂದ ಬಿಡಿಸಿಕೊಳ್ಳಲು ಕರಡಿ ಒದ್ದಾಡುತ್ತಿದೆ. ಕಾಡುಹಂದಿ ಹಾವಳಿ ತಡೆಗೆ ಉರುಳು ಹಾಕಿದ್ದರು ಎನ್ನಲಾಗಿದೆ.

ರಾಯದುರ್ಗ ರಸ್ತೆಯಲ್ಲಿ ಸಾಗುತ್ತಿದ್ದ ವಾಹನ ಸವಾರರು ಮುಂಜಾನೆ ಇದನ್ನು ಗಮನಿಸಿ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಕರಡಿ ನೋಡಲು ಸ್ಥಳದಲ್ಲಿ ನೂರಾರು ಜನ ಸೇರಿದ್ದಾರೆ. ಜನರ ಕೂಗಾಟಕ್ಕೆ ಕರಡಿ ಗಾಬರಿಗೊಂಡು ಒದ್ದಾಡುತ್ತಿದೆ.

ಪ್ರತಿಕ್ರಿಯಿಸಿ (+)