ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ರೈತರಿಗೆ ವರವಾದ ಭದ್ರಾ ಮೇಲ್ದಂಡೆ ಯೋಜನೆ’

Last Updated 2 ಮಾರ್ಚ್ 2022, 4:47 IST
ಅಕ್ಷರ ಗಾತ್ರ

ಹೊಸದುರ್ಗ: ಭದ್ರಾ ಮೇಲ್ದಂಡೆ ಯೋಜನೆಯಿಂದ ಶೇ 90ರಷ್ಟು ರೈತರಿಗೆ ಅನುಕೂಲವಾಗಿದೆ. ಕ್ಷೇತ್ರದ ಜನರಿಗೆ ಅಗತ್ಯ ಸೌಲಭ್ಯಗಳನ್ನು ಸರ್ಕಾರದಿಂದ ನೀಡಲಾಗುವುದು ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ತಿಳಿಸಿದರು.

ತಾಲ್ಲೂಕಿನ ಹಾಲುರಾಮೇಶ್ವರದಲ್ಲಿ ಗೂಳಿಹಟ್ಟಿ ಡಿ. ಶೇಖರ್ ಸಾರಥ್ಯದಲ್ಲಿ ಆಯೋಜಿಸಿದ್ದ ‘ಹಾಲುರಾಮೇಶ್ವರ ಉತ್ಸವ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮಾತನಾಡಿ, ‘ರಾಜ್ಯದಲ್ಲೇ ಕ್ಷೇತ್ರದ ಅಭಿವೃದ್ಧಿಗಾಗಿ ಅತಿ ಹೆಚ್ಚು ಅನುದಾನ ತಂದಿರುವ ರಾಜಕಾರಣಿ ಗೂಳಿಹಟ್ಟಿ ಡಿ. ಶೇಖರ್. ರಾಮಾಯಣದಲ್ಲಿ ಬರುವ ರಾಮೇಶ್ವರ
ದಷ್ಟೇ ಈ ಹಾಲುರಾಮೇಶ್ವರ ಪವಿತ್ರ ಸ್ಥಳ. ಶಿವನ ಅನುಗ್ರಹ ಎಲ್ಲರ ಮೇಲಿರಲಿ’ ಎಂದರು.

ಶಾಸಕ ಗೂಳಿಹಟ್ಟಿ ಡಿ. ಶೇಖರ್ ಮಾತನಾಡಿ, ‘ಭದ್ರಾ ಮೇಲ್ದಂಡೆ ರಾಷ್ಟ್ರೀಯ ಯೋಜನೆಯಾಗಲು ಗೋವಿಂದ ಕಾರಜೋಳ ಅವರು ಕಾರಣ. ₹ 2,600 ಕೋಟಿ ಅನುದಾನ, 1.5 ಲಕ್ಷ ಎಕರೆ ಭೂಮಿಗೆ ಡ್ರಿಪ್ ಸೌಲಭ್ಯ ನೀಡಿದ್ದಾರೆ. ಸಂಪರ್ಕ ಸೇತುವೆ ನಿರ್ಮಿಸಲು ₹ 100 ಕೋಟಿ, ಕಾಂಕ್ರೀಟ್ ರಸ್ತೆ ನಿರ್ಮಿಸಲು ₹ 10 ಕೋಟಿ, ಹೊಸದುರ್ಗ ಪಟ್ಟಣ ಅಭಿವೃದ್ಧಿಗೆ ₹ 40 ಕೋಟಿ ನೀಡಿದ್ದಾರೆ’ ಎಂದರು.

ಭಗೀರಥ ಪೀಠದ ಪುರುಷೋತ್ತಮಾನಂದಪುರಿ ಸ್ವಾಮೀಜಿ, ಕುಂಚಿಟಿಗ ಮಠದ ಶಾಂತವೀರ ಸ್ವಾಮೀಜಿ, ಕೆ.ಎಸ್. ನವೀನ್ ಮಾತನಾಡಿದರು. ಬಿಜೆಪಿ ಜಿಲ್ಲಾ ಅಧ್ಯಕ್ಷ ಮುರುಳಿ, ಮಂಡಲ ಅಧ್ಯಕ್ಷ ಜಗದೀಶ್, ಎಪಿಎಂಸಿ ಅಧ್ಯಕ್ಷ ಮಲ್ಲಿಕಾರ್ಜುನ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT