ಹಿರಿಯೂರು: ‘ತಾಲ್ಲೂಕಿನ ವಾಣಿವಿಲಾಸ ಜಲಾಶಯಕ್ಕೆ 2008ರಲ್ಲಿ ಭದ್ರಾ ಮೇಲ್ದಂಡೆ ಯೋಜನೆಯಲ್ಲಿ ಹಂಚಿಕೆ ಮಾಡಿದ್ದ 5 ಟಿಎಂಸಿ ಅಡಿ ನೀರನ್ನು, 2013ರಲ್ಲಿ ಅಧಿಕಾರಕ್ಕೆ ಬಂದ ಸರ್ಕಾರ 2 ಟಿಎಂಸಿ ಅಡಿಗೆ ಇಳಿಸಿದೆ. ಅಗತ್ಯಕ್ಕೆ ತಕ್ಕಂತೆ ನೀರಿನ ಹಂಚಿಕೆ ಮಾಡಿಸುವಂತೆ’ ರೈತ ಮುಖಂಡರು ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್ ಅವರಿಗೆ ಶನಿವಾರ ಮನವಿ ಸಲ್ಲಿಸಿದರು.

‘ವಿಶ್ವೇಶ್ವರಯ್ಯ ನೀರಾವರಿ ನಿಗಮ ನೀಡಿರುವ ಅಂಕಿ– ಅಂಶಗಳ ಪ್ರಕಾರ ಚಿತ್ರದುರ್ಗ, ಚಳ್ಳಕೆರೆ, ಹೊಸದುರ್ಗ, ಹಿರಿಯೂರು, ಹೊಳಲ್ಕೆರೆ ಪಟ್ಟಣಗಳ ಕುಡಿಯುವ ನೀರಿಗೆ ವಾರ್ಷಿಕ 8.5 ಟಿಎಂಸಿ ಅಡಿ ನೀರು ಬೇಕಿದೆ. ಅಣೆಕಟ್ಟೆ ನಿರ್ಮಾಣಗೊಂಡು 118 ವರ್ಷಗಳಲ್ಲಿ ಕೇವಲ ಮೂರು ಬಾರಿ ಭರ್ತಿಯಾಗಿದೆ. ಭದ್ರಾ ಮೇಲ್ದಂಡೆ ಯೋಜನೆಯಲ್ಲಿ ಕೇವಲ 2 ಟಿಎಂಸಿ ಅಡಿ ನೀರು ಮೀಸಲಿಟ್ಟಿರುವುದು ತುಂಬಾ ಅವೈಜ್ಞಾನಿಕವಾಗಿದೆ. ಒಂದೆರಡು ವರ್ಷ ಮಳೆ ಕೈಕೊಟ್ಟರೆ ಜಲಾಶಯ ಬರಿದಾಗುವ ಅಪಾಯವಿದೆ. 1933ರಲ್ಲಿ ಕೋಡಿ ಬಿದ್ದ ನಂತರ 2022 ರವರೆಗೆ ಜಲಾಶಯ ತುಂಬಿದ್ದಕ್ಕಿಂತ ಖಾಲಿಯಾಗಿದ್ದೇ ಹೆಚ್ಚು’ ಎಂದು ಮುಖಂಡರು ವಸ್ತುಸ್ಥಿತಿ ವಿವರಿಸಿದರು.

‘ಜಲಾಶಯದಿಂದ 8.5 ಟಿಎಂಸಿ ಅಡಿಗೆ ಬೇಡಿಕೆ ಇದೆ. ಆದರೆ ಸರ್ಕಾರ ಹಂಚಿಕೆ ಮಾಡಿರುವುದು ಕೇವಲ 2 ಟಿಎಂಸಿ ಅಡಿ. ಜಲಾಶಯದ ನೀರನ್ನು ನಂಬಿ ಅಚ್ಚುಕಟ್ಟು ಪ್ರದೇಶದಲ್ಲಿ 20 ಸಾವಿರ ಎಕರೆಗೂ ಹೆಚ್ಚು ತೋಟ ಹೊಂದಿರುವ ರೈತರಿದ್ದಾರೆ. ನೀರು ಹಂಚಿಕೆ ಮಾಡಿದವರು ಅಚ್ಚುಕಟ್ಟು ಪ್ರದೇಶಕ್ಕೆ ಎಷ್ಟು ನೀರು ಎಂದು ನಿಗದಿಪಡಿಸಿಲ್ಲ. ಮಳೆಯ ಕೊರತೆ ಎದುರಾದಲ್ಲಿ ಹಿರಿಯೂರು ತಾಲ್ಲೂಕಿನ ರೈತರು, ನಾಗರಿಕರು ಅಪಾಯಕ್ಕೆ ಸಿಲುಕುವ ಸಂಭವ ಇದೆ’ ಎಂದು ರೈತರು ಆತಂಕ ವ್ಯಕ್ತಪಡಿಸಿದ್ದಾರೆ.

‘ವಾಣಿವಿಲಾಸಕ್ಕೆ ಅಗತ್ಯ ಇರುವಷ್ಟು ನೀರು ಹರಿಸುವಂತೆ ಸಹಾಯ ಮಾಡಲು ಆ. 4ರಂದು ಸಿರಿಗೆರೆಯ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಯವರನ್ನು ಕೋರಿದ್ದೆವು. ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಜಿಲ್ಲೆಯ ಶಾಸಕರು, ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳ ಸಭೆ ಕರೆಯುವ ಭರವಸೆ ನೀಡಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬಬ್ಬೂರು ಫಾರಂನ ಕೃಷಿ ವಿಜ್ಞಾನ ಕೇಂದ್ರದ ಶತಮಾನೋತ್ಸವ ಸಮಾರಂಭಕ್ಕೆ ಬಂದಿದ್ದಾಗ ವಾಣಿವಿಲಾಸಕ್ಕೆ ಹೆಚ್ಚಿನ ನೀರು ಹರಿಸುವಂತೆ ಮನವಿ ಸಲ್ಲಿಸಿದ್ದೆವು. ಮನವಿಗೆ ಸ್ಪಂದಿಸಿ ನಿಮ್ಮ ಬೇಡಿಕೆ ನ್ಯಾಯಯುತವಾಗಿದೆ ಎಂದಿದ್ದರು. ಸಿಎಂ, ಡಿಸಿಎಂ ಮನವೊಲಿಸಿ ವಾಣಿವಿಲಾಸಕ್ಕೆ ಹೆಚ್ಚಿನ ನೀರನ್ನು ಮರುಹಂಚಿಕೆ ಮಾಡಿಸಿಕೊಡಬೇಕು’ ಎಂದು ರೈತ ಮುಖಂಡರು ಮನವಿ ಮಾಡಿದರು.

‘ಈ ಬಗ್ಗೆ ಸಭೆ ಕರೆದು ಸಿಎಂ, ಡಿಸಿಎಂ ಬಳಿಗೆ ರೈತರ ನಿಯೋಗ ಕೊಂಡೊಯ್ಯುವೆ’ ಎಂದು ಡಿ. ಸುಧಾಕರ್ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ವಿವಿ ಸಾಗರ ಹಾಗೂ ಭದ್ರಾ ಮೇಲ್ದಂಡೆ ಅಚ್ಚುಕಟ್ಟುದಾರ ರೈತರ ಹಿತರಕ್ಷಣಾ ಸಮಿತಿ ಮುಖಂಡರಾದ ಕಸವನಹಳ್ಳಿ ರಮೇಶ್, ಎಚ್.ಆರ್. ತಿಮ್ಮಯ್ಯ, ಆಲೂರು ಸಿದ್ದರಾಮಣ್ಣ, ಎಸ್.ಬಿ. ಶಿವಕುಮಾರ್, ಬಬ್ಬೂರು ಸುರೇಶ್, ಎಂ. ರಾಜೇಂದ್ರ, ಕೆ.ಸಿ. ಹೊರಕೇರಪ್ಪ, ಆರ್.ಕೆ.ಗೌಡ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.