ಕಾರು ಅಪಘಾತ: ನಾಲ್ವರ ಸಾವು

ಮಂಗಳವಾರ, ಮಾರ್ಚ್ 19, 2019
28 °C

ಕಾರು ಅಪಘಾತ: ನಾಲ್ವರ ಸಾವು

Published:
Updated:
Prajavani

ತುರುವನೂರು: ಬೊಗಳೆರಹಟ್ಟಿ ಸಮೀಪದ ರಾಷ್ಟ್ರೀಯ ಹೆದ್ದಾರಿ 13ರಲ್ಲಿ ಎರಡು ಕಾರು ಹಾಗೂ ಲಾರಿ ನಡುವೆ ಸಂಭವಿಸಿದ ಸರಣಿ ಅಪಘಾತದಲ್ಲಿ ನಾಲ್ವರು ಮೃತಪಟ್ಟಿದ್ದಾರೆ.

ದಾವಣಗೆರೆ ಜಿಲ್ಲೆ ಜಗಳೂರು ತಾಲ್ಲೂಕಿನ ಬಂಗಾರಕ್ಕನಗುಡ್ಡ ಗ್ರಾಮದ ಕೇಶವಮೂರ್ತಿ (49), ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲ್ಲೂಕಿನ ಸಿದ್ಲಿಪುರದ ನಾಗಮ್ಮ (41), ರಾಧಿಕಾ (22) ಹಾಗೂ ಶಿವಮೊಗ್ಗ ನಿವಾಸಿ ಕಾವ್ಯಾ (20) ಮೃತಪಟ್ಟವರು.

ಜಗಳೂರು ಕಾಂಗ್ರೆಸ್‌ ಪರಿಶಿಷ್ಟ ಜಾತಿ ಘಟಕದ ಅಧ್ಯಕ್ಷರಾದ ಕೇಶವಮೂರ್ತಿ ಅವರ ಗ್ರಾಮದಲ್ಲಿ ಜಾತ್ರೆ ನಡೆಯುತ್ತಿತ್ತು. ಸೋದರತ್ತೆ ನಾಗಮ್ಮ ಹಾಗೂ ಇಬ್ಬರು ಸಂಬಂಧಿಕರ ಮಕ್ಕಳು ಜಾತ್ರೆಗೆ ಬಂದಿದ್ದರು. ಊರಿಗೆ ಮರಳುವ ಸಂದರ್ಭದಲ್ಲಿ ಈ ಅಪಘಾತ ಸಂಭವಿಸಿದೆ.

‘ಕೇಶಮೂರ್ತಿ ಅವರು ಸಂಬಂಧಿಕರನ್ನು ಚಿತ್ರದುರ್ಗ ಬಸ್‌ ನಿಲ್ದಾಣಕ್ಕೆ ಬಿಡಲು ಕಾರಿನಲ್ಲಿ ಬರುತ್ತಿದ್ದರು. ಶಿವಮೊಗ್ಗದ ಬಸ್‌ ಹಿಡಿಯಲು ಕಾರು ವೇಗವಾಗಿ ಸಾಗುತ್ತಿತ್ತು. ರಾಷ್ಟ್ರೀಯ ಹೆದ್ದಾರಿಯ ಕೃಷಿ ನಗರದ ಸಮೀಪ ಚಾಲನ ನಿಯಂತ್ರಣ ಕಳೆದುಕೊಂಡ ಕಾರು ಎದುರಿಗೆ ಬರುತ್ತಿದ್ದ ಮತ್ತೊಂದು ಕಾರಿಗೆ ಡಿಕ್ಕಿ ಹೊಡೆದಿದೆ. ಬಳಿಕ ಇದರ ಹಿಂಭಾಗದಲ್ಲಿದ್ದ ಲಾರಿಗೆ ಅಪ್ಪಳಿಸಿದೆ’ ಎಂದು ತುರುವನೂರು ಠಾಣೆಯ ಪೊಲೀಸರು ಮಾಹಿತಿ ನೀಡಿದ್ದಾರೆ.

‘ಲಾರಿಗೆ ಅಪ್ಪಳಿಸಿದ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಕಾರಿನ ಮುಂಭಾಗದಲ್ಲಿದ್ದ ಕೇಶವಮೂರ್ತಿ ಹಾಗೂ ನಾಗಮ್ಮ ಅವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಕಾವ್ಯಾ ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೇ ಅವರೂ ಮೃತಪಟ್ಟಿದ್ದಾರೆ’ ಎಂದು ವಿವರಿಸಿದರು.

ಜಿಲ್ಲಾಸ್ಪತ್ರೆಯ ಶವಾಗಾರದ ಎದುರು ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು. ಶವಪರೀಕ್ಷೆಯ ಬಳಿಕ ಮೃತದೇಹಗಳನ್ನು ವಾರಸುದಾರರಿಗೆ ಹಸ್ತಾಂತರಿಸಲಾಗಿದೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !