ಚಳ್ಳಕೆರೆ: ‘ತಾಲ್ಲೂಕಿನ ಬೊಮ್ಮಸಮುದ್ರ ಗ್ರಾಮದಲ್ಲಿ ಅಕ್ರಮವಾಗಿ ಕೆರೆ ಮಣ್ಣು ಹಾಗೂ ಮರಳನ್ನು ಸಾಗಣೆ ಮಾಡಲಾಗುತ್ತಿದೆ’ ಎಂದು ಗ್ರಾಮಸ್ಥರು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಎಚ್. ಶಶಿಧರ್ ಅವರಿಗೆ ದೂರು ನೀಡಿದರು.

‘ನಿರಂತರವಾಗಿ ಗ್ರಾಮದಲ್ಲಿ ಕೆರೆ ಮಣ್ಣು ಮತ್ತು ಮರಳನ್ನು ಚಳ್ಳಕೆರೆ ನಗರದ ಲೇಔಟ್ ಮತ್ತು ನಿವೇಶನಗಳಿಗೆ ಅಕ್ರಮವಾಗಿ ಸಾಗಾಣಿಕೆ ಮಾಡುತ್ತಿದ್ದಾರೆ. ಪ್ರತಿನಿತ್ಯ ಲಾರಿ, ಟ್ರ್ಯಾಕ್ಟರ್ಗಳ ಓಡಾಟದಿಂದ ಗ್ರಾಮದ ಜನರಿಗೆ ಬಹಳಷ್ಟು ತೊಂದರೆಯಾಗುತ್ತಿದೆ. ತಡೆಯಲು ಹೋದರೆ ನಮ್ಮನ್ನು ಹೊಡೆಯುವುದು ಅವಾಚ್ಯ ಪದಗಳಿಂದ ನಿಂದಿಸುವ ಕೆಲಸ ಮಾಡುತ್ತಿದ್ದಾರೆ. ಈ ವಿಷಯವನ್ನು ಗ್ರಾಮ ಲೆಕ್ಕಾಧಿಕಾರಿಗೆ ತಿಳಿಸಿದರೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ’ ಎಂದು ದೂರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.