ಧರ್ಮಪುರ: ವಿದ್ಯಾರ್ಥಿಗಳ ವ್ಯವಹಾರಿಕ ಜ್ಞಾನದ ವೃದ್ಧಿಗೆ ಮಕ್ಕಳ ಸಂತೆ ಪೂರಕವಾಗಿದ್ದು, ಶಿಕ್ಷಕರು ಇದಕ್ಕೆ ಉತ್ತೇಜನ ನೀಡುತ್ತಿರುವುದು ಶ್ಲಾಘನೀಯ ಎಂದು ಶಿಕ್ಷಣ ಸುಧಾರಣಾ ಸಮಿತಿಯ ಅಧ್ಯಕ್ಷ ಅಮೃತೇಶ್ವರಸ್ವಾಮಿ ತಿಳಿಸಿದರು.

ಸಮೀಪದ ಬೆನಕನಹಳ್ಳಿ, ಗೊಲ್ಲರಹಟ್ಟಿ, ಉಪ್ಪಾರಹಟ್ಟಿ ಮೂರು ಶಾಲೆಗಳ ಸಹೋಗದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಮಕ್ಕಳ ಸಂತೆ ಕಾರ್ಯಮದಲ್ಲಿ ತರಕಾರಿ ಕೊಳ್ಳುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ವಿದ್ಯಾರ್ಥಿಗಳು ಮೊಬೈಲ್ ಬಳಕೆಯಿಂದ ದೂರಾಗಿ, ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳತ್ತ ಗಮನ ಹರಿಸಬೇಕೆಂದು ತಿಳಿಸಿದರು.

ಧರ್ಮಪುರ ಹೋಬಳಿಯ ವಿವಿಧ ಶಾಲೆಗಳಿಗೆ ಬುಧವಾರ ಭೇಟಿ ನೀಡಿ ಕುಂದು ಕೊರತೆ ಆಲಿಸಿದರು.

ಕೆಡಿಪಿ ಸದಸ್ಯ ತಿಮ್ಮಯ್ಯ, ಮೂರು ಶಾಲೆಗಳ ಎಸ್ಡಿಎಂಸಿ ಅಧ್ಯಕ್ಷರಾದ ಶಿವಮೂರ್ತಿ, ಗೋವಿಂದಪ್ಪ, ಮಹೇಶ್, ಧರ್ಮಪುರ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ನೂರ್ ಜಾನ್, ಜ್ಯೋತಿ, ಮಂಜಪ್ಪ, ಗುರುಮೂರ್ತಿ, ನಿಜಲಿಂಗಪ್ಪ, ಕೆ. ಪುಟ್ಟಸ್ವಾಮಿಗೌಡ, ಕೋಟೆಲಿಂಗಯ್ಯ, ಬಸವರಾಜು, ಶಾಲೆಯ ಮುಖ್ಯ ಶಿಕ್ಷಕರಾದ ಸಿ.ಆರ್. ರಘುನಾಥ್, ಆರ್. ರಂಗನಾಥ್, ಎಸ್.ವಿ. ನಾಗೇಶ್, ಶಿಕ್ಷಕರಾದ ಶಶಿಧರ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.