ಎಂ.ಎನ್.ಯೋಗೇಶ್

ಚಿತ್ರದುರ್ಗ: ಎಲ್ಲವೂ ಅಂದುಕೊಂಡಂತೆ ನಡೆದರೆ ಮುಂದಿನ ವರ್ಷದ ಈ ವೇಳೆಗೆ ತೋಟಗಾರಿಕೆ ಇಲಾಖೆ ಕಚೇರಿ ಆವರಣದಲ್ಲಿ ಫಲ–ಪುಷ್ಪ ಪ್ರದರ್ಶನ ನಡೆಯುವುದಿಲ್ಲ. ಏಕೆಂದರೆ ಅಲ್ಲಿ ತೋಟಗಾರಿಕೆ ಕಚೇರಿ, ಮರ, ಗಿಡ ಸೇರಿದಂತೆ ಹಸಿರು ಪರಿಸರವೇ ಇರುವುದಿಲ್ಲ. ಕಳೆದ 33 ವರ್ಷಗಳಿಂದ ಕೋಟೆನಾಡಿನ ಜನರ ಕಣ್ಮನ ಸೆಳೆಯುತ್ತಿದ್ದ ಫಲ–ಪುಷ್ಪ ಪ್ರದರ್ಶನ ಇನ್ನುಮುಂದೆ ಬರೀ ನೆನಪಾಗಿ ಉಳಿಯಲಿದೆ.

ತೋಟಗಾರಿಕೆ ಇಲಾಖೆ ಆವರಣದ ಸಸ್ಯಕ್ಷೇತ್ರದಲ್ಲಿರುವ 2,156 ಮರ–ಗಿಡ ಸಸ್ಯ ತೆರವುಗೊಳಿಸಿ ಅಲ್ಲಿಯ 6.30 ಎಕರೆ ಜಾಗದಲ್ಲಿ ಹೊಸ ಜಿಲ್ಲಾಡಳಿತ ಭವನ ನಿರ್ಮಾಣಕ್ಕೆ ತೋಟಗಾರಿಕೆ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅನುಮತಿ ನೀಡಿರುವುದು ಚರ್ಚೆಗೆ ಕಾರಣವಾಗಿದೆ. ಈ ಹೊಸ ಯೋಜನೆಯಿಂದಾಗಿ ಕೋಟೆ ನಗರಿಯ ಹೃದಯ ಭಾಗದಲ್ಲಿರುವ ಹಸಿರು ಕೋಟೆ ನಾಶವಾಗಲಿದ್ದು, ಪರಿಸರ ಪ್ರೇಮಿಗಳನ್ನು ಆತಂಕಕ್ಕೆ ದೂಡಿದೆ.

ತೋಟಗಾರಿಕೆ ಇಲಾಖೆ ಹಾಗೂ ಸಸ್ಯಕ್ಷೇತ್ರ ನಿರ್ಮಾಣ ಮಾಡಲು ತಾಲ್ಲೂಕಿನ ಹಿರೇಗಂಟನೂರು ಹೋಬಳಿ ವ್ಯಾಪ್ತಿಯ ಚಿಕ್ಕಪುರದ ಬಳಿ 20 ಎಕರೆ ಜಾಗ ನೀಡಲು ಸಭೆ ತೀರ್ಮಾನ ಕೈಗೊಂಡಿದೆ. ತೋಟಗಾರಿಕೆ ಇಲಾಖೆ ಜೊತೆಗೆ ಸಸ್ಯಕ್ಷೇತ್ರವನ್ನೂ ಹೊಸದಾಗಿ ಅಭಿವೃದ್ಧಿಗೊಳಿಸಬೇಕಿರುವ ಕಾರಣ ಈಗಿರುವ ನಗರದ ಹಸಿರು ಹೊದಿಕೆ ಇತಿಹಾಸ ಸೇರಿಕೊಳ್ಳಲಿದೆ.

ಕುಂಚಿಗನಾಳ್ ಕಣಿವೆಯಲ್ಲಿ ನಿರ್ಮಾಣಗೊಂಡಿರುವ ಜಿಲ್ಲಾಧಿಕಾರಿ ಕಚೇರಿ ಕಟ್ಟಡ ದೂರ ಎಂಬ ಕಾರಣಕ್ಕೆ ಜಿಲ್ಲಾಡಳಿತವನ್ನು ಅಲ್ಲಿಗೆ ಸ್ಥಳಾಂತರ ಮಾಡದಿರಲು ಒಕ್ಕೊರಲಿನ ತಿರ್ಮಾನ ಕೈಗೊಳ್ಳಲಾಗಿದೆ. ಸರ್ಕಾರ ವೈದ್ಯಕೀಯ ಕಾಲೇಜಿನ ಕೆಲವು ವಿಭಾಗಗಳನ್ನು ಮಾತ್ರ ಅಲ್ಲಿಗೆ ಸ್ಥಳಾಂತರ ಮಾಡಿ ಜಿಲ್ಲಾಡಳಿತ ಭವನವನ್ನು ಹೊಸದಾಗಿ ನಿರ್ಮಿಸುವ ಯೋಜನೆಗೆ ಕಂದಾಯ ಇಲಾಖೆ, ತೋಟಗಾರಿಕೆ ಇಲಾಖೆ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆ ಒಪ್ಪಿಗೆ ಸೂಚಿಸಿವೆ.

ಫೆ.20ರಂದು ಸುಂದರ ಸಸ್ಯಕ್ಷೇತ್ರದ ಆವರಣದಲ್ಲಿ 3 ದಿನಗಳ ಫಲ–ಪುಷ್ಪ ಪ್ರದರ್ಶನ ಆರಂಭಗೊಂಡಿತ್ತು. ಪ್ರದರ್ಶನಕ್ಕೆ ಜಿಲ್ಲೆಯ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾದ ಹಿನ್ನೆಲೆಯಲ್ಲಿ ಪ್ರದರ್ಶನವನ್ನು ಮಾರ್ಚ್ 1ರವರೆಗೆ ವಿಸ್ತರಿಸಲಾಗಿದೆ. ಇಲಾಖೆಯ ಆವರಣದಲ್ಲಿರುವ ಸಾವಿರಾರು ಸಸ್ಯ ಸಂಕುಲ, ಹೂವು, ಹಣ್ಣು, ಎಲೆ, ಗರಿಗಳಿಂದ ರೂಪಿಸಿರುವ ಕಲಾಕೃತಿ ಮನಸೂರೆಗೊಳ್ಳುತ್ತಿದೆ. ಮುಂದೆ ಈ ವಾತಾವಣ ಇರುವುದಿಲ್ಲ ಎನ್ನುವುದು ಹಸಿರು ಪ್ರೇಮಿಗಳಿಗೆ ನುಂಗಲಾಗದ ತುತ್ತಾಗಿದೆ.

‘ಕುಂಚಿಗನಾಳ್ ಕಣಿವೆ ದೂರ ಎಂಬುದು ಎಲ್ಲರಿಗೂ ಗೊತ್ತಿತ್ತು. ಆದರೂ ಏಕೆ ಅಲ್ಲಿ ಭವನ ಕಟ್ಟಿದರು? ಬ್ರಿಟಿಷರ ಕಾಲದಿಂದಲೂ ಸಾವಿರಾರು ಪಕ್ಷಿಗಳ ಆವಾಸ ಸ್ಥಾನವಾಗಿರುವ ಸಸ್ಯಕ್ಷೇತ್ರದಲ್ಲಿ ಬೇರೆ ಯಾವ ಕಟ್ಟಡ ಕಟ್ಟಲೂ ಅವಕಾಶ ನೀಡಬಾರದು. ಜಿಲ್ಲೆಯ ಎಲ್ಲಾ ಸಂಘಟನೆಗಳು ಸಸ್ಯಕ್ಷೇತ್ರ ಉಳಿವಿಗೆ ಒಗ್ಗೂಡಬೇಕು. ಅಪ್ಪಿಕೊ ಚಳವಳಿ ನಡೆಸಲು ಮುಂದಾಗಬೇಕು’ ಎಂದು ಪರಿಸರ ಪ್ರೇಮಿ ಎಚ್.ಕೆ. ಮಂಜುನಾಥ್ ಒತ್ತಾಯಿಸಿದರು.

ತೋಟಗಾರಿಕೆ ಇಲಾಖೆಯ 6.10 ಎಕರೆ, ಹಾಪ್ಕಾಮ್ಸ್ನ 20 ಗುಂಟೆ ಜಾಗದಲ್ಲಿ ಜಿಲ್ಲಾಡಳಿತ ಭವನ ನಿರ್ಮಿಸಲು ಉದ್ದೇಶಿಸಲಾಗಿದೆ. ಅಲ್ಲಿಯ ಸಸ್ಯಕ್ಷೇತ್ರದಲ್ಲಿ 2,156 ಮರಗಿಡ ಸಸ್ಯ, 3 ಕಚೇರಿ ಕಟ್ಟಡ, 5 ಕೊಳವೆ ಬಾವಿ, 98 ಚದರ ಅಡಿಯ 1 ಕೃಷಿ ಹೊಂಡ, 100 ಚದರ ಅಡಿಯ 1 ಹಸಿರು ಮನೆ, 360 ಚದರ ಅಡಿಯ 2 ನೆರಳು ಪರದೆ ಮನೆ, 2 ಎರೆಹುಳು ಗೊಬ್ಬರ ಘಟಕ, 2.5 ಹೆಕ್ಟೇರ್ ಪ್ರದೇಶದಲ್ಲಿ ಹನಿ ನೀರಾವರಿ ವ್ಯವಸ್ಥೆ, 1 ತೆರೆದ ಬಾವಿ, 2 ನೀರಿನ ತೊಟ್ಟಿಗಳಿವೆ.

‘ತೋಟಗಾರಿಕೆ ಇಲಾಖೆಯ ಆವರಣದಲ್ಲಿರುವ ಸಸ್ಯಕ್ಷೇತ್ರ ಉಳಿಸಲು ನಾವು ಪ್ರತಿಭಟನೆ ನಡೆಸುತ್ತೇವೆ. ಅದಕ್ಕಾಗಿ ಜಿಲ್ಲೆಯ ಸಂಘಟನೆಗಳನ್ನು ಒಂದುಗೂಡಿಸುತ್ತೇವೆ’ ಎಂದು ಜಿಲ್ಲಾ ತೋಟಗಾರಿಕೆ ಸಂಘದ ನಾಗರಾಜ ಬೇದ್ರೆ ತಿಳಿಸಿದರು.

ಸಸ್ಯಕ್ಷೇತ್ರದಲ್ಲಿರುವ ಎಲ್ಲಾ ಮರ ಕಡಿಯುವ ಅವಶ್ಯಕತೆ ಬರುವುದಿಲ್ಲ ಪರಿಪೂರ್ಣವಾಗಿ ಯೋಜನಾ ವರದಿ ಸಿದ್ಧಗೊಂಡ ನಂತರ ಮರ ಗಿಡಗಳನ್ನು ಉಳಿಸುವುದಕ್ಕೆ ಆದ್ಯತೆ ನೀಡಲಾಗುವುದು
ಟಿ.ವೆಂಕಟೇಶ್ ಜಿಲ್ಲಾಧಿಕಾರಿ

ಮರು ಪರಿಶೀಲನೆ ಮಾಡಿ

‘ಚಿತ್ರದುರ್ಗ ನಗರಕ್ಕೆ ಅರಣ್ಯದಂತಹ ಪರಿಸರ ನೀಡಿರುವ ಸಸ್ಯಕ್ಷೇತ್ರದಲ್ಲಿ ಜಿಲ್ಲಾಡಳಿತ ಭವನ ನಿರ್ಮಿಸುವ ಯೋಜನೆಯನ್ನು ಮರು ಪರಿಶೀಲನೆಗೆ ಒಳಪಡಿಸಬೇಕು. ಬೇರೆ ಜಿಲ್ಲೆಗಳಲ್ಲಿ 20–25 ಎಕರೆ ಪ್ರದೇಶದಲ್ಲಿ ಜಿಲ್ಲಾಡಳಿತ ಭವನಗಳು ಬಂದಿವೆ. ಕೇವಲ ಆರೇಳು ಎಕರೆಯಲ್ಲಿ ಸುಸಜ್ಜಿತ ಭವನ ನಿರ್ಮಾಣ ಮಾಡುವುದು ಕಷ್ಟ. ಮತ್ತೆ ಕಿಷ್ಕಿಂದೆಯಂತ ಕಟ್ಟಡ ಬರುತ್ತದೆ. ಸಾವಿರಾರು ಸಸ್ಯ ತೆಗೆದು ಅಂತಹ ಇಕ್ಕಟ್ಟಾದ ಕಟ್ಟಡ ಕಟ್ಟಬೇಕಾ’ ಎಂದು ವಿಧಾನ ಪರಿಷತ್ ಸದಸ್ಯ ಕೆ.ಎಸ್

.ನವೀನ್ ಪ್ರಶ್ನಿಸಿದರು. ‘ಎಸ್ಪಿ ಕಚೇರಿ ಸಮೀಪ 10 ಎಕರೆ ಪ್ರತ್ಯೇಕ ಜಾಗವಿದೆ. ಆ ಜಾಗದ ಸಂಬಂಧ ವಕ್ಫ್ ಮಂಡಳಿ ಹಾಗೂ ನಗರಸಭೆ ನಡುವೆ ಪ್ರಕರಣವಿದೆ. ಅದು ನಗರಸಭೆಗೇ ಸೇರಬೇಕು ಎಂಬುದು ಹಲವು ದಾಖಲಾತಿಗಳಿಂದ ದೃಢಪಟ್ಟಿದೆ. ಪ್ರಕರಣವನ್ನು ಬೇಗ ಮುಗಿಸಿ ಆ ಜಾಗದಲ್ಲಿ ಜಿಲ್ಲಾಡಳಿತ ಭವನ ಕಟ್ಟಬಹುದು. ಇದು ಸಾಕಾರಗೊಂಡರೆ ತೋಟಗಾರಿಕೆ ಇಲಾಖೆಯ ಸಸ್ಯಕ್ಷೇತ್ರವೂ ಉಳಿಯುತ್ತದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.