ಮಂಗಳವಾರ, 10 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹೊಳಲ್ಕೆರೆ | 'ಖಾಸಗಿ ಶಾಲಾ ಬಸ್‌ಗಳಿಗೆ ನಿಯಮ ರೂಪಿಸಿ'

ರೈತಸಂಘದಿಂದ ಬಿಇಒಗೆ ಮನವಿ
Published 22 ಆಗಸ್ಟ್ 2024, 15:29 IST
Last Updated 22 ಆಗಸ್ಟ್ 2024, 15:29 IST
ಅಕ್ಷರ ಗಾತ್ರ

ಹೊಳಲ್ಕೆರೆ: ಖಾಸಗಿ ಶಾಲೆಗಳ ಬಸ್‌ಗಳಿಗೆ ನಿಯಮ ರೂಪಿಸಬೇಕು ಎಂದು ಆಗ್ರಹಿಸಿ ರೈತ ಸಂಘ ಹಾಗೂ ಹಸಿರು ಸೇನೆಯ ಸದಸ್ಯರು ಬಿಇಒ ಎಚ್.ಶ್ರೀನಿವಾಸ್ ಅವರಿಗೆ ಮನವಿ ಸಲ್ಲಿಸಿದರು.

ತಾಲ್ಲೂಕಿನಲ್ಲಿರುವ ಖಾಸಗಿ ಶಾಲೆಗಳ ಬಸ್‌ಗಳಲ್ಲಿ 40 ವಿದ್ಯಾರ್ಥಿಗಳ ಬದಲಿಗೆ 80ರಿಂದ 100 ವಿದ್ಯಾರ್ಥಿಗಳನ್ನು ತುಂಬಲಾಗುತ್ತಿದೆ. ಮಕ್ಕಳನ್ನು ಬಾನೆಟ್ ಮೇಲೆ ಕೂರಿಸುತ್ತಾರೆ. ವಾರ್ಷಿಕ ₹ 8,000 ರಿಂದ ₹ 10,000 ಬಸ್ ಶುಲ್ಕ ಪಡೆಯುತ್ತಿದ್ದರೂ ಸರಿಯಾದ ಸೌಲಭ್ಯ ಒದಗಿಸುತ್ತಿಲ್ಲ ಎಂದು ರೈತ ಸಂಘದ ಸದಸ್ಯರು ದೂರಿದರು.

ಶಾಲಾ ಬಸ್‌ಗಳಲ್ಲಿ 40ಕ್ಕಿಂತ ಹೆಚ್ಚು ಮಕ್ಕಳನ್ನು ಹತ್ತಿಸಬಾರದು. ಹಳೆಯ ಬಸ್‌ಗಳು ಹಾಗೂ ಎಫ್‌ಸಿ ಇಲ್ಲದ ಬಸ್‌ಗಳ ಸಂಚಾರವನ್ನು ತಕ್ಷಣ ನಿಲ್ಲಿಸಬೇಕು. ಮದ್ಯಪಾನ ಮಾಡುವ ಚಾಲಕರನ್ನು ಕೆಲಸಕ್ಕೆ ತೆಗೆದುಕೊಳ್ಳಬಾರದು. ಬಸ್‌ಗಳಲ್ಲಿ ಕಡ್ಡಾಯವಾಗಿ ಕಂಡಕ್ಟರ್ ಇರಬೇಕು. ವಿದ್ಯಾರ್ಥಿಗಳು ಬಸ್ ಬಾಗಿಲಲ್ಲಿ ನಿಲ್ಲದಂತೆ ನೋಡಿಕೊಳ್ಳಬೇಕು. ಖಾಸಗಿ ಶಾಲೆಗಳು ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಬಸ್ ಹೊಂದಿರಬೇಕು. ನಿಯಮಗಳನ್ನು ಪಾಲಿಸದ ಶಾಲಾ ಬಸ್‌ಗಳ ಪರವಾನಗಿ ರದ್ದುಪಡಿಸಬೇಕು ಎಂದು ಆಗ್ರಹಿಸಿದರು.

ರೈತ ಸಂಘದ ಅಧ್ಯಕ್ಷ ಎಸ್.ಸಿದ್ದರಾಮಪ್ಪ, ಪ್ರಧಾನ ಕಾರ್ಯದರ್ಶಿ ಕೆ.ಎನ್.ಅಜಯ್, ಉಪಾಧ್ಯಕ್ಷ ಲೋಕೇಶಪ್ಪ, ಶ್ರೀಧರ್, ಖಜಾಂಚಿ ಶಿವಮೂರ್ತಿ, ಸಂಘಟನಾ ಕಾರ್ಯದರ್ಶಿ ದುಕ್ಕಡ್ಲೆ ರವಿ, ಡಿ.ಎಸ್.ರಾಜಪ್ಪ, ಸಣ್ಣಕ್ಕಿ ಪ್ರಭಾಕರ್, ಅಬ್ಬಿಗೆರೆ ಬಸಪ್ಪ, ಲೋಕಮಾನ್ಯ ತಿಲಕ್, ರಾಜಪ್ಪ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT