ನಾಯಕನಹಟ್ಟಿ: ಹೋಬಳಿಯ ರೇಖಲಗೆರೆ ಗ್ರಾಮದ ಜಮೀನಿನಲ್ಲಿ ಗುರುವಾರ ಯೂರಿಯಾ ಮಿಶ್ರಿತ ನೀರು ಕುಡಿದು ನಾಲ್ಕು ಕುರಿಗಳು ಮೃತಪಟ್ಟಿದ್ದು, 40ಕ್ಕೂ ಹೆಚ್ಚು ಕುರಿಗಳು ಅಸ್ವಸ್ಥಗೊಂಡಿವೆ.

ಹೋಬಳಿಯ ರೇಖಲಗೆರೆ ಗ್ರಾಮದ ಗ್ರಾಮದ ಡಾಕ್ಯಾನಾಯ್ಕ ಎಂಬುವವರ ಜಮೀನಿನಲ್ಲಿ ಬೆಳೆಗೆ ಪೈಪ್ಲೈನ್ ಮೂಲಕ ಯೂರಿಯಾ ಸೇರಿಸಿ ನೀರು ಹರಿಸಿದ್ದರು. ಇದೇ ವೇಳೆ ಆಶಾಬಾಯಿ, ತಿಪ್ಪೇಸ್ವಾಮಿ ಎಂಬುವವರು ಕುರಿಗಳನ್ನು ಮೇಯಿಸಿಕೊಂಡು ಸಂಜೆ ಮನೆಗೆ ಮರಳುವಾಗ ಪೈಪ್ವಾಲ್ ಹತ್ತಿರ ಕುರಿಗಾಹಿಗಳಿಬ್ಬರೂ ನೀರನ್ನು ಕುಡಿದು ನಂತರ ಕುರಿಗಳಿಗೂ ಕುಡಿಸಿದ್ದಾರೆ. ತಕ್ಷಣವೇ ಕುರಿಗಳು ನರಳಾಡಲು ಆರಂಭಿಸಿದ್ದು, ಸ್ಥಳದಲ್ಲೇ ನಾಲ್ಕು ಕುರಿಗಳು ಮೃತಪಟ್ಟಿವೆ.

ತಕ್ಷಣ ಜಮೀನಿನ ಮಾಲೀಕರು ಮತ್ತು ಗ್ರಾಮದ ಯುವಕರು ಪಶು ವೈದ್ಯ ವಿಜಯ್ಕುಮಾರ್ ಅವರನ್ನು ಕರೆಸಿ ಅಸ್ವಸ್ಥಗೊಂಡ ಕುರಿಗಳಿಗೆ ಚಿಕಿತ್ಸೆ ನೀಡಿದ್ದಾರೆ. ಜೊತೆಗೆ ನೀರು ಕುಡಿದು ಅಸ್ವಸ್ಥರಾಗಿದ್ದ ಆಶಾಬಾಯಿ ತಿಪ್ಪೇಸ್ವಾಮಿಯವರನ್ನು ನಾಯಕನಹಟ್ಟಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ.

ಮೃತ ಕುರಿಗಳ ಮರಣೋತ್ತರ ಪರೀಕ್ಷೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಿ ರೈತರಿಗೆ ಸೂಕ್ತ ಪರಿಹಾರ ದೊರಕಿಸಿಕೊಡಿಸುವ ಬಗ್ಗೆ ಡಾ.ವಿಜಯಕುಮಾರ್ ಬಗ್ಗೆ ಭರವಸೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.