ಸೋಮವಾರ, 15 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮೊಳಕಾಲ್ಮರು: ಸಿಐಟಿಯು ನೇತೃತ್ವದಲ್ಲಿ ಪ್ರತಿಭಟನೆ

Published 10 ಜುಲೈ 2024, 16:25 IST
Last Updated 10 ಜುಲೈ 2024, 16:25 IST
ಅಕ್ಷರ ಗಾತ್ರ

ಮೊಳಕಾಲ್ಮುರು: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಬುಧವಾರ ಇಲ್ಲಿ ಕಾರ್ಮಿಕರು ಸಿಐಟಿಯು ನೇತೃತ್ವದಲ್ಲಿ ತಾಲ್ಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಎಲ್ಲ ಎನ್‌.ಎಂ.ಪಿ ಕಾಯ್ದೆ ರದ್ದುಪಡಿಸಿ ಕಾರ್ಮಿಕರಿಗೆ ಕನಿಷ್ಠ ಮಾಸಿಕ ₹ 26,000 ವೇತನ ನೀಡಬೇಕು. ಗುತ್ತಿಗೆ ಆಧಾರಿತ, ಹೊರಗುತ್ತಿಗೆ ನೌಕರರಿಗೆ ಉದ್ಯೋಗ ಭದ್ರತೆ ಖಚಿತ ಪಡಿಸುವ ಜತೆಗೆ ಸಮಾನ ಹುದ್ದೆಗೆ ಸಮಾನ ವೇತನ
ನೀಡಬೇಕು. ಜಾರಿ ಮಾಡಲು ಹೊರಟಿರುವ 4 ಲೇಬರ್‌ ಕೋಡ್‌ಗಳನ್ನು ರದ್ದುಪಡಿಸಬೇಕು. ಸಂಘಟನೆಗಳ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ನೀಡಬೇಕು ಎಂದು ಎಐಟಿಯುಸಿ ತಾಲ್ಲೂಕು ಘಟಕದ ಉಪಾಧ್ಯಕ್ಷ ದಾನಸೂರ ನಾಯಕ ಆಗ್ರಹಿಸಿದರು.

ಹಳೆ ಪಿಂಚಣಿ ಯೋಜನೆ ಮರು ಜಾರಿ ಮಾಡುವ ಜತೆಗೆ ಕನಿಷ್ಠ ₹ 9,000 ಪಿಂಚಣಿ ನಿಗದಿಪಡಿಸಬೇಕು. ಚಾಲಕರು, ಕಾರ್ಮಿಕರಿಗೆ ಸಾಮಾಜಿಕ ಭದ್ರತಾ ಯೋಜನಗೆಳನ್ನು ಜಾರಿಗೊಳಿಸಬೇಕು. ಅಗ್ನಿವೀರ್‌ ಸೇರಿ ಕೇಂದ್ರ ಸರ್ಕಾರ
ಎಲ್ಲ ಬಗೆಯ ಗುತ್ತಿಗೆ ಹುದ್ದೆ ತುಂಬುವುದನ್ನು ನಿಲ್ಲಿಸಿ ಕಾಯಂ ಆಗಿ ಹುದ್ದೆ ಭರ್ತಿ ಮಾಡಬೇಕು ಎಂದು ಮನವಿ ಮಾಡಿದರು.

ಗುರಪ್ಪ, ನಾಗರಾಜ್‌, ಶಿವಮೂರ್ತಿ, ಶಿವಣ್ಣ, ಪಾರ್ವತಮ್ಮ, ಮಲ್ಲಣ್ಣ, ಓಬಣ್ಣ, ಜ್ಯೋತಿ, ಭಾಗ್ಯಮ್ಮ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT