ಹಿಂದೂ ಮಹಾಗಣಪತಿ ನಗರ: ಆರ್‌ಎಸ್‌ಎಸ್‌ ಮುಖಂಡರ ಹೇಳಿಕೆಗೆ ಕಾಂಗ್ರೆಸ್‌ ಆಕ್ಷೇಪ

7

ಹಿಂದೂ ಮಹಾಗಣಪತಿ ನಗರ: ಆರ್‌ಎಸ್‌ಎಸ್‌ ಮುಖಂಡರ ಹೇಳಿಕೆಗೆ ಕಾಂಗ್ರೆಸ್‌ ಆಕ್ಷೇಪ

Published:
Updated:

ಚಿತ್ರದುರ್ಗ: ‘ಆರ್‌ಎಸ್‌ಎಸ್‌ ಮುಖಂಡ ಸು.ರಾಮಣ್ಣ ಅವರು ಚಿತ್ರದುರ್ಗವನ್ನು ಹಿಂದೂ ಮಹಾಗಣಪತಿ ನಗರವನ್ನಾಗಿ ರೂಪಿಸಿ ಎಂದು ಶೋಭಯಾತ್ರೆಯಲ್ಲಿ ಸಲಹೆ ನೀಡುವ ಮೂಲಕ ಪಾಳೇಗಾರರ ಪಾರುಪತ್ಯ ಹಾಗೂ ಮುರುಘಾ ಶರಣರ ಗುರುಪರಂಪರೆಯನ್ನು ಅವಮಾನಿಸಿದ್ದಾರೆ’ ಎಂದು ಜಿಲ್ಲಾ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿ ಬಿ.ಟಿ. ಜಗದೀಶ್ ಆರೋಪಿಸಿದ್ದಾರೆ.

‘ಚಿತ್ರದುರ್ಗ ಐತಿಹಾಸಿಕ ನಗರ. ಈ ಸ್ಥಳಕ್ಕೆ ಸಹಸ್ರಾರು ವರ್ಷಗಳ ಇತಿಹಾಸವಿದೆ. ಕೇವಲ ಐದು ವರ್ಷಗಳಿಂದ ನಡೆಯುತ್ತಿರುವ ಹಿಂದೂ ಗಣಪತಿ ಉತ್ಸವದಿಂದ ಚಿತ್ರದುರ್ಗ ನಗರದ ಹೆಸರನ್ನೇ ಬದಲಾಯಿಸಲು ಹೊರಟಿರುವ ಪುರೋಹಿತಶಾಯಿ ಮನಸ್ಥಿತಿಯನ್ನು ತೀವ್ರವಾಗಿ ಖಂಡಿಸುತ್ತೇವೆ’ ಎಂದು ಪತ್ರಿಕಾ ಪ್ರಕಟಣೆಯಲ್ಲಿ ಆಕ್ರೋಶ ಹೊರಹಾಕಿದ್ದಾರೆ.

‘ಸ್ವಾತಂತ್ರ್ಯ ಸಂಗ್ರಾಮದಲ್ಲಿ ಬ್ರಿಟೀಷರ ವಿರುದ್ಧ ಜನರನ್ನು ಸಂಘಟಿಸುವ ಉದ್ದೇಶದಿಂದ ಬಾಲಗಂಗಾಧರನಾಥ ತಿಲಕ್ ಅವರು ಆರಂಭಿಸಿದ ಗಣೇಶ ಉತ್ಸವ, ಪ್ರಸ್ತುತ ಸಂದರ್ಭದಲ್ಲಿ ಕೋಮು ಸಂಘರ್ಷದ ವಿಷ ಬೀಜ ಬಿತ್ತುವ ಉದ್ದೇಶಕ್ಕೆ ಆರ್‌ಎಸ್‌ಎಸ್‌ ಬಳಸಿಕೊಳ್ಳುತ್ತಿದೆ. ಧಾರ್ಮಿಕ ಭಾವನೆಗಳಿಗೆ ಕೇಸರಿ ಲೇಪನ ಮಾಡಿ ಜನರನ್ನು ದಿಕ್ಕು ತಪ್ಪಿಸುತ್ತಿರುವುದು ವಿಷಾದಕರ ಸಂಗತಿ’ ಎಂದು ಅಸಮಾಧಾನ ಹೊರಹಾಕಿದ್ದಾರೆ.

‘ಐತಿಹಾಸಿಕ ಚಿತ್ರದುರ್ಗದ ವಿಚಾರವಾಗಿ ಈ ರೀತಿ ಮಾತನಾಡಿ ತಳಸಮುದಾಯಗಳ ಸ್ವಾಭಿಮಾನಕ್ಕೆ ಧಕ್ಕೆ ತರಲು ಪ್ರಯತ್ನಿಸಿದ್ದಾರೆ. ಇದು ಹೀಗೆ ಮುಂದುವರಿದರೆ ಮುಂದಿನ ದಿನಗಳಲ್ಲಿ ತಕ್ಕ ಬೆಲೆ ತೆರಬೇಕಾಗುತ್ತದೆ. ಸು. ರಾಮಣ್ಣ ಅವರು ಮಾತನಾಡುವಾಗ ನಾಲಿಗೆಯ ಮೇಲೆ ಹಿಡಿತ ಇಟ್ಟುಕೊಳ್ಳಲಿ’ ಎಂದು ಎಚ್ಚರಿಕೆ ನೀಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !