ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ ಸೋಂಕಿಗೆ ಇಬ್ಬರು ಬಲಿ: ಮನೆಗಳು ಸೀಲ್‌ಡೌನ್‌

ಚಳ್ಳಕೆರೆ ತಾಲ್ಲೂಕಿನ ದೊಡ್ಡಉಳ್ಳಾರ್ತಿ ಗ್ರಾಮ
Last Updated 3 ಮೇ 2021, 2:53 IST
ಅಕ್ಷರ ಗಾತ್ರ

ಚಳ್ಳಕೆರೆ: ತಾಲ್ಲೂಕಿನ ದೊಡ್ಡಉಳ್ಳಾರ್ತಿ ಗ್ರಾಮದ ವೃದ್ಧ ಹಾಗೂ ಮಹಿಳೆ ಕೊರೊನಾ ಸೋಂಕಿಗೆ ಶುಕ್ರವಾರ ರಾತ್ರಿ ಬಲಿಯಾಗಿದ್ದಾರೆ. ಗ್ರಾಮ ಪಂಚಾಯಿತಿ ಸದಸ್ಯ ಭೀಮಾರೆಡ್ಡಿ (65), ವಿಶಾಲಾಕ್ಷಮ್ಮ (55) ಸೋಂಕಿಗೆ ಬಲಿಯಾದವರು. ಇಬ್ಬರೂ ಗ್ರಾಮದ ಎದಿರು ಬದಿರು ಮನೆಯವರು. ಸೋಂಕಿನ ಭೀತಿಯ ಕಾರಣ ಮತ್ತು ಕುಟುಂಬದವರ ಓಡಾಟವನ್ನು ನಿಯಂತ್ರಿಸಲು ಎರಡೂ ಮನೆಗಳನ್ನು ಕಟ್ಟಿಗೆ ಪೋಲ್‌ಗಳ ಸಹಾಯದಿಂದ ಗ್ರಾಮ ಪಂಚಾಯಿತಿಯವರು ಸೀಲ್‍ಡೌನ್ ಮಾಡಿದ್ದಾರೆ.

ಅಧಿಕಾರಿಗಳ ತಂಡ: ಗ್ರಾಮದಲ್ಲಿ ಇಬ್ಬರು ಕೊರೊನಾ ಸೋಂಕಿಗೆ ಬಲಿಯಾಗಿರುವುದರಿಂದ ಪೊಲೀಸ್‌ ಇಲಾಖೆ ಅಧಿಕಾರಿಗಳು ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ಗ್ರಾಮಕ್ಕೆ ತೆರಳಿ ಕೊರೊನಾ ಜಾಗೃತಿ ಸಭೆ ನಡೆಸುವ ಮೂಲಕ ಜನರಲ್ಲಿ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡುತ್ತಿದ್ದಾರೆ.

9 ಕೋವಿಡ್ ಸೆಂಟರ್: ನಗರದ ಪಾವಗಡ ರಸ್ತೆ ದೇವರಾಜ ಅರಸು ವಸತಿ ವಿದ್ಯಾರ್ಥಿನಿಲಯ, ಚಳ್ಳಕೆರೆ, ಪರಶುರಾಂಪುರ, ಎನ್. ಮಹದೇವಪುರ ಮೊರಾರ್ಜಿ, ಕಿತ್ತೂರು ರಾಣಿ ಚನ್ನಮ್ಮ ಹಾಗೂ ಬಾಲೇನಹಳ್ಳಿ ಇಂದಿರಾ ಗಾಂಧಿ ವಸತಿ ಶಾಲೆ ಸೇರಿ 9 ಕೋವಿಡ್‌ ಸೆಂಟರ್‌ಗಳನ್ನು ಹೊಸದಾಗಿ ತೆರೆಯಲಾಗಿದ್ದು, 100 ಬೆಡ್‌ಗಳ ವ್ಯವಸ್ಥೆ ಮಾಡಲಾಗಿದೆ ಎಂದು ತಹಶೀಲ್ದಾರ್ ಎಂ. ಮಲ್ಲಿಕಾರ್ಜುನ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT