ಗುರುವಾರ , ಮೇ 19, 2022
22 °C

ಚಿಕ್ಕಜಾಜೂರು: ಕೊಳೆಯುತ್ತಿವೆ ಬೆಳೆಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಜಾಜೂರು: ಒಂದು ವಾರದಿಂದ ಸುರಿಯುತ್ತಿರುವ ಮಳೆಯಿಂದಾಗಿ ಮುತ್ತುಗದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ 11 ಮನೆಗಳ ಗೋಡೆಗಳು ಕುಸಿದು ಬಿದ್ದಿವೆ.

ಸಮೀಪದ ಮುತ್ತುಗದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುತ್ತುಗದೂರು ಗ್ರಾಮದಲ್ಲಿ ನಾಲ್ಕು ಮನೆಗಳು, ವಿಶ್ವನಾಥನಹಳ್ಳಿ ಮತ್ತು ಕತ್ತಾಳಿಹಟ್ಟಿ ಗ್ರಾಮಗಳಲ್ಲಿ ತಲಾ ಎರಡು, ಕಾಳಘಟ್ಟ ಲಂಬಾಣಿಹಟ್ಟಿಯಲ್ಲಿ ಮೂರು ಮನೆಗಳ ಗೋಡೆಗಳು ಶುಕ್ರವಾರ ಕುಸಿದಿವೆ.

ಕತ್ತಾಳಿಹಟ್ಟಿಯ ಲಕ್ಷ್ಮೀಬಾಯಿ ಲಚ್ಚಾನಾಯ್ಕ್‌, ಲೋಕೇಶಪ್ಪ ಮಾದಾನಾಯ್ಕ್‌ ಎಂಬುವರ ಮನೆಗಳ ಗೋಡೆಗಳು ಬಿದ್ದಿವೆ. ಅಲ್ಲದೆ, ಮುತ್ತುಗದೂರು ಗ್ರಾಮದ ತೊಳಸಮ್ಮ ಮಾರಪ್ಪ, ಸುನಂದಮ್ಮ ದೇವರಾಜ್‌, ಮಾದಮ್ಮ ವೆಂಕಟಪ್ಪ ಹಾಗೂ ಮಮತ ಮಂಜಪ್ಪ ಎಂಬುವರ ಮನೆ ಗೋಡೆಗಳು, ವಿಶ್ವನಾಥನಹಳ್ಳಿಯಲ್ಲಿ ಕೆಂಚಪ್ಪ, ರತ್ನಮ್ಮ ರಾಮಪ್ಪ, ಕಾಳಘಟ್ಟ ಲಂಬಾಣಿಹಟ್ಟಿಯ ಹನುಮಂತನಾಯ್ಕ್‌, ಅಂಬಿಕಾಬಾಯಿ ಹಾಗೂ ರುದ್ರಾನಾಯ್ಕ ಎಂಬುವವರ ಮನೆಗಳು ಬಿದ್ದಿವೆ. ಮನೆಯ ಹೆಂಚುಗಳು, ಸಿಮೆಂಟ್‌ ಶೀಟ್‌ಗಳು ಹಾಳಾಗಿವೆ.

‘ಮನೆಗಳ ಗೋಡೆಗಳು ಬಿದ್ದಿದ್ದು, ಯಾವುದೇ ಜೀವ ಹಾನಿಯಾಗಿಲ್ಲ. ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಪಡೆಯಲಾಗಿದ್ದು, ವರದಿಯನ್ನು ಮೇಲಧಿಕಾರಿಗಳಿಗೆ ಕಳುಹಿಸಲಾಗುವುದು’ ಎಂದು ಪಿಡಿಒ ನಟರಾಜ್‌ ತಿಳಿಸಿದರು.

ರಾಗಿ ಮತ್ತು ಮೆಕ್ಕೆಜೋಳದ ಪೈರುಗಳು ಸಂಪೂರ್ಣವಾಗಿ ಮಳೆಗೆ ನೆನೆದು ಹೋಗಿವೆ. ಇದರಿಂದ ರೈತರು ಅಪಾರ ನಷ್ಟ ಅನುಭವಿಸುವಂತಾಗಿದೆ ಎಂದು ಮುತ್ತುಗದೂರು ಗ್ರಾಮ ಪಂಚಾಯಿತಿ ಸದಸ್ಯ ಶಿವಕುಮಾರ್‌ ಹೆಗ್ಗೆರೆ, ರಾಮಚಂದ್ರಪ್ಪ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.