ಭಾನುವಾರ, ನವೆಂಬರ್ 28, 2021
22 °C

ಹೊಳಲ್ಕೆರೆ: ಹಂಸಲೇಖಗೆ ಭದ್ರತೆ ನೀಡಲು ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೊಳಲ್ಕೆರೆ: ಸಂಗೀತ ಕಲಾವಿದ ಹಂಸಲೇಖ ಅವರಿಗೆ ಪೊಲೀಸ್ ಭದ್ರತೆ ನೀಡಬೇಕು ಎಂದು ಆಗ್ರಹಿಸಿ ದಲಿತ ಸಂಘರ್ಷ ಸಮಿತಿಯ ಸದಸ್ಯರು ಬುಧವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.

‘ಹಂಸಲೇಖ ಅವರು ದಲಿತರನ್ನು ಬೆಂಬಲಿಸಿ ಮಾತನಾಡಿದ್ದಾರೆ. ಅಸ್ಪೃಶ್ಯತೆ ಹೋಗಲಾಡಿಸುವ ಉದ್ದೇಶದಿಂದ ಅವರು ಮಾತನಾಡಿದ್ದು, ಮನುವಾದಿಗಳು ಅವರಿಗೆ ಬೆದರಿಕೆ ಹಾಕುವ ಮೂಲಕ ಕ್ಷಮೆ ಕೇಳಿಸಿದ್ದಾರೆ. ಶೇ15 ರಷ್ಟಿರುವ ಬ್ರಾಹ್ಮಣರು ಶೇ 85ರಷ್ಟಿರುವ ದಲಿತರು, ಹಿಂದುಳಿದವರ ಮೇಲೆ ದಬ್ಬಾಳಿಕೆ ಮಾಡುತ್ತಿದ್ದಾರೆ. ಡಾ.ಬಿ.ಆರ್. ಅಂಬೇಡ್ಕರ್ ರಚಿಸಿದ ಸಂವಿಧಾನದ ಆಧಾರದಲ್ಲಿ ನಾವು ಬದುಕುತ್ತಿದ್ದೇವೆಯೇ ಹೊರತು ಭಗವದ್ಗೀತೆಯ ಆಧಾರದಲ್ಲಿ ಅಲ್ಲ’ ಎಂದು ಪ್ರತಿಭಟನಕಾರರು ಆಕ್ರೋಶ ವ್ಯಕ್ತಪಡಿಸಿದರು.

ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಕೆಂಗುಂಟೆ ಜಯಣ್ಣ, ನವೀನ್ ಮದ್ದೇರು, ಕಾಲ್ಕೆರೆ ಪ್ರಕಾಶ್, ನವೀನ್ ಪವಾರ್, ಸುಂದರ ಮೂರ್ತಿ, ಕೆಂಗುಂಟೆ ಪ್ರಭಾಕರ್, ಮಂಜುನಾಥ್, ಸತೀಶ್, ಶ್ರೀನಿವಾಸ, ಚಂದ್ರು, ರಾಜಪ್ಪ, ರುದ್ರೇಶ್ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.