ಮೊಳಕಾಲ್ಮುರು: ಕಡಿಮೆ ವೋಲ್ಟೇಜ್ ಸಮಸ್ಯೆಯನ್ನು ಸರಿಪಡಿಸಬೇಕು ಎಂದು ಆಗ್ರಹಿಸಿ ಬುಧವಾರ ತಾಲ್ಲೂಕಿನ ಬಿ.ಜಿ. ಕೆರೆಯ ಬೆಸ್ಕಾಂ ಕಚೇರಿ ಎದುರು ರೈತಸಂಘ ಹಾಗೂ ಹಸಿರುಸೇನೆ ರಾಜ್ಯ ಘಟಕದ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.

ಬಿ.ಜಿ. ಕೆರೆ ಹಾಗೂ ಹಿರೇಹಳ್ಳಿ ವಿದ್ಯುತ್ ವಿತರಣಾ ಕೇಂದ್ರ ವ್ಯಾಪ್ತಿಯ ಗ್ರಾಮಗಳಲ್ಲಿ ಸಮಸ್ಯೆ ಅಧಿಕವಾಗಿದ್ದು, ಮೋಟರ್ಗಳಿಗೆ ಹಾನಿಯಾಗುತ್ತಿದೆ. ತಾಂತ್ರಿಕ ಸಮಸ್ಯೆಯ ಜೊತೆಗೆ ವಿದ್ಯುತ್ ಲೈನ್ ಉದ್ದಕ್ಕೂ ಗಿಡಗಂಟಿಗಳು ಬೇಕಾಬಿಟ್ಟಿಯಾಗಿ ಬೆಳೆದಿದ್ದು, ವಿದ್ಯುತ್ ಪ್ರವಹಿಸುವ ತಂತಿಗಳಿಗೆ ಹಬ್ಬಿಕೊಂಡಿವೆ. ಇದರಿಂದ ಸಾಕಷ್ಟು ವಿದ್ಯುತ್ ಪೋಲಾಗುತ್ತಿದೆ ಎಂದು ಪ್ರತಿಭಟನಾಕಾರರು ದೂರಿದರು.

ಹೆಚ್ಚಿನ ಲೋಡ್ ಇರುವ ಮಾರ್ಗಗಳ ದುರಸ್ತಿ ಮಾಡಬೇಕು. ತಂತಿ ಮತ್ತು ಇತರೆ ಸಾಮಗ್ರಿಗಳನ್ನು ಹೊಸದಾಗಿ ಅಳವಡಿಸಬೇಕು. ಜೊತೆಗೆ ಜಂಗಲ್ ಸ್ವಚ್ಛತೆ ಮಾಡಬೇಕು. ನೀರಾವರಿ ಸೌಲಭ್ಯ ಸಿಗುವ ತನಕ ಇಲ್ಲಿನ ರೈತರಿಗೆ ಅಕ್ರಮ–ಸಕ್ರಮ ಯೋಜನೆಯಡಿ ಈ ಹಿಂದೆ ನೀಡುತ್ತಿದ್ದ ಮಾದರಿಯಲ್ಲೇ ವಿದ್ಯುತ್ ಸಂಪರ್ಕ ಮುಂದುವರಿಸಬೇಕು ಎಂದು ಆಗ್ರಹಿಸಿದರು.

ಸಂಘದ ರಾಜ್ಯ ಘಟಕದ ಕಾರ್ಯಾಧ್ಯಕ್ಷ ಬೇಡರೆಡ್ಡಿಹಳ್ಳಿ ಬಸವರೆಡ್ಡಿ, ಜಿಲ್ಲಾ ಘಟಕದ ಅಧ್ಯಕ್ಷ ಮರ್ಲಹಳ್ಳಿ ರವಿಕುಮಾರ್, ತಾಲ್ಲೂಕು ಘಟಕದ ಅಧ್ಯಕ್ಷ ಸೂರಮ್ಮನಹಳ್ಳಿ ರಾಜಣ್ಣ, ರಮೇಶ್, ಅಶೋಕರೆಡ್ಡಿ, ಲಕ್ಷ್ಮಣರೆಡ್ಡಿ, ವಿಶ್ವನಾಥ್, ಯಶವಂತರೆಡ್ಡಿ, ಕಾಮಯ್ಯ, ಪಾಪಯ್ಯ, ಮೀಸೆ ತಿಪ್ಪಯ್ಯ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.