ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಂಬಿದ ಕೆರೆ, ಕಟ್ಟೆಗಳು

Last Updated 19 ಮೇ 2022, 3:02 IST
ಅಕ್ಷರ ಗಾತ್ರ

ಧರ್ಮಪುರ: ಹೋಬಳಿಯಲ್ಲಿ ಮಂಗಳವಾರ ರಾತ್ರಿ ಸುರಿದ ಉತ್ತಮ ಮಳೆಯಿಂದಾಗಿ ಚೆಕ್ ಡ್ಯಾಂಗಳು, ಕೃಷಿ ಹೊಂಡಗಳು ತುಂಬಿದ್ದು, ಹಳ್ಳ ಹರಿದಿವೆ.

ಹೋಬಳಿಯ ಅರಳೀಕೆರೆ, ಹಲಗಲದ್ದಿ, ಧರ್ಮಪುರ, ಶ್ರವಣಗೆರೆ, ಹರಿಯಬ್ಬೆ, ಬೇತೂರು, ಹೊಸಕೆರೆ, ಈಶ್ವರಗೆರೆ, ಸೂಗೂರು, ಬೆಟ್ಟಗೊಂಡನಹಳ್ಳಿ, ಸಕ್ಕರ, ವೇಣುಕಲ್ಲುಗುಡ್ಡ, ಚಿಲ್ಲಹಳ್ಳಿ, ಇಕ್ಕನೂರು, ಹೂವಿನಹೊಳೆ, ಅಬ್ಬಿನಹೊಳೆ,ದೇವರಕೊಟ್ಟ, ಬೆಟ್ಟಗೊಂಡನಹಳ್ಳಿ ಮೊದಲಾದ ಕಡೆ ಉತ್ತಮ ಮಳೆಯಾಗಿದ್ದು, ತಗ್ಗು ಪ್ರದೇಶಗಳಲ್ಲಿ ನೀರು ನಿಂತಿದೆ. ದೊಡ್ಡಹಳ್ಳ, ಹಲಗಲದ್ದಿ ಹಳ್ಳಗಳಲ್ಲಿ ನೀರು ಭರ್ತಿಯಾಗಿದ್ದು, ಹರಿಯುತ್ತಿರುವ ದೃಶ್ಯ ಕಂಡುಬಂತು.

ಎಲ್ಲಿಯೂ ಹಾನಿಯಾಗಿಲ್ಲ. ಬಹುತೇಕ ಎಲ್ಲಾ ಚೆಕ್ ಡ್ಯಾಂಗಳು ಭರ್ತಿಯಾಗಿವೆ.

ಹೋಬಳಿಯಾದ್ಯಂತ ಉತ್ತಮ ಮಳೆಯಾಗಿದ್ದು, ರೈತರಲ್ಲಿ ಮಂದಹಾಸ ಮೂಡಿದೆ. ಸಕಾಲದಲ್ಲಿ ಮಳೆಯಾಗಿರುವುದು ರೈತರು ಖುಷ್ಕಿ ಭೂಮಿಯನ್ನು ಹಸನು ಮಾಡಿಕೊಳ್ಳಲು ಅನುಕೂಲವಾಗಲಿದೆ ಎಂದು ರೈತ ರಂಗನಾಥಪ್ಪ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT