ಹೊಸದುರ್ಗ: ‘ಬಿಜೆಪಿ ಅಭ್ಯರ್ಥಿ ಲಿಂಗಮೂರ್ತಿ ಅವರನ್ನು ಬೆಂಬಲಿಸುವಂತಹ ಪರಿಸ್ಥಿತಿ ಬಂದಿಲ್ಲ. ಒಂದು ವೇಳೆ ಅಂತಹ ಸಂದರ್ಭ ಬಂದರೆ ಕಾಂಗ್ರೆಸ್ ಅಭ್ಯರ್ಥಿ ಬಿ.ಜಿ.ಗೋವಿಂದಪ್ಪಗೆ ಸಹಕರಿಸುವೆ’ ಎಂದು ಮಾಜಿ ಸಚಿವ ಗೂಳಿಹಟ್ಟಿ ಡಿ.ಶೇಖರ್ ಸುದ್ದಿಗಾರರಿಗೆ ತಿಳಿಸಿದರು.

ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿ ಮಾತನಾಡಿದ ಅವರು, ‘ನಾನು ಸತ್ತರೂ ನನ್ನ ಶಾಪ ತಟ್ಟುತ್ತೆ. ಹೊಸದುರ್ಗ ಅಭಿವೃದ್ಧಿಗಾಗಿ ಲಿಂಗಮೂರ್ತಿ ಹಾಗೂ ಯಡಿಯೂರಪ್ಪ ಪದೇ ಪದೇ ಅಡ್ಡಿ ಮಾಡುತ್ತಿದ್ದರು. ಪ್ರಸ್ತುತ ಟಿಕೆಟ್ ತಪ್ಪಿಸಲು ಅವರೇ ಕಾರಣ. ಸಚಿವನಾಗಿದ್ದಾಗಲೂ ಇವರ ಆಡಳಿತವೇ ಇತ್ತು. ನಾನು ಸತ್ತರೂ ನನ್ನ ಶಾಪ ಅವರಿಗೆ ತಟ್ಟದೇ ಬಿಡುವುದಿಲ್ಲ. ಸಂಪರ್ಕ ಸೇತುವೆ ನಿರ್ಮಾಣಕ್ಕೂ ಅಡಚಣೆಯಾಗಿತ್ತು. ರಾಜೀನಾಮೆ ಕೊಡುವುದಾಗಿ ತಿಳಿಸಿದ ನಂತರ ಅನುದಾನ ಬಂದಿದ್ದು’ ಎಂದು ದೂರಿದರು.

ಎಸ್. ಲಿಂಗಮೂರ್ತಿ ಸಂಪರ್ಕಿಸಿಲ್ಲ: ‘ಲಿಂಗಮೂರ್ತಿ ಫೋನ್ ಮೂಲಕ ಸಂಪರ್ಕಿಸಿರುವುದಾಗಿ ಸುಳ್ಳು ಹೇಳಿಕೆ ನೀಡಿದ್ದಾರೆ. ನನ್ನನ್ನು ಸಂಪರ್ಕಿಸಿಲ್ಲ. ರಿಯಲ್ ಎಸ್ಟೇಟ್, ಸರ್ಕಾರಿ ಜಾಗ ಕಬಳಿಸುವ ಮೂಲಕ ಹೊಸದುರ್ಗ ಲೂಟಿ ಮಾಡಲು ಹೊರಟಿರುವ ಅವರಿಗೆ ನಾನು ಬೆಂಬಲಿಸಲ್ಲ’ ಎಂದು ಸ್ಪಷ್ಟಪಡಿಸಿದರು.

ಕೆಂಪು ವಸ್ತ್ರ ಧರಿಸಿದ್ದಕ್ಕೆ ಕಾರಣ: ‘ಜನ ಜಾತಿ ಜಾತಿ ಎಂದು ಬಡಿದಾಡುತ್ತಾರೆ. ಜಾತಿ, ಮತ, ಭೇದವಿಲ್ಲದೆ ಎಲ್ಲರ ಮೈಯಲ್ಲೂ ಹರಿಯುವ ರಕ್ತ ಕೆಂಪು ಬಣ್ಣದ್ದು. ನಾವೆಲ್ಲ ಒಂದೇ ಎಂದು ಸಾರುವ ಉದ್ದೇಶದಿಂದ ಈ ಕೆಂಪು ಬಣ್ಣದ ವಸ್ತ್ರ ಧರಿಸಲಾಗಿದೆ’ ಎಂದು ಸ್ಪಷ್ಟಪಡಿಸಿದರು.

ಪ್ರತಿ ಸ್ಪರ್ಧಿ ಗೋವಿಂದಪ್ಪ: ‘ಈ ಬಾರಿ ಚುನಾವಣೆಯಲ್ಲಿ ನನ್ನ ಪ್ರತಿಸ್ಪರ್ಧಿ ಬಿ.ಜಿ. ಗೋವಿಂದಪ್ಪ. ಅವರಿಗಿಂತ 25,000ದಿಂದ 30,000 ಮತಗಳ ಅಂತರದಿಂದ ಗೆಲುವು ಸಾಧಿಸುವೆ. 2008ರಿಂದಲೂ ಮತದಾರರು ನನ್ನ ಪರವಾಗಿದ್ದಾರೆ. ಮೊದಲಿಂದಲೂ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದವ ನಾನು. ಈಗಲೂ ಅದೇ ಆಗಿದೆ. ಅಂದಿನಿಂದಲೂ ನನ್ನ ಮತಗಳನ್ನು ಮಗು ತರಹ ಭದ್ರವಾಗಿ ಕಾಪಾಡಿಕೊಂಡಿದ್ದೇನೆ. ಯಾರೂ ನನಗೆ ಸಹಕರಿಸಲಿಲ್ಲ, ಇನ್ನೂ ನನ್ನಿಂದ ಅವರಿಗೆ ಅನುಕೂಲವಾಗಿದೆ. ತಾಲ್ಲೂಕಿನ ಜನತೆ ಬುದ್ಧಿವಂತರು. ತಾಲ್ಲೂಕಿನ 33 ಪಂಚಾಯಿತಿಗಳಲ್ಲೂ ಅಭಿವೃದ್ಧಿ ಕೆಲಸ ಮಾಡಿದ್ದೇನೆ. ರಾಜ್ಯದ ಯಾವ ಶಾಸಕರೂ ಮಾಡದೇ ಇರುವಂತಹ ಕೆಲಸ ಮಾಡಿದ್ದೇನೆ. ಯಾವುದೇ ಅನಧಿಕೃತ ಆಸ್ತಿ ಮಾಡಿಲ್ಲ. ಯಾರ ವಿರುದ್ಧವೂ ಷಡ್ಯಂತ್ರ
ಮಾಡಿಲ್ಲ, ಇದೊಂದೇ ಸಾಕು ಜನರ ಬಳಿ ಮತ ಕೇಳಲು’ ಎಂದು
ಹೇಳಿದರು.

‘ಏ. 24ಕ್ಕೆ ತೆಂಗಿನ ಮರ, ಹಣ್ಣಿನ ಬುಟ್ಟಿ ಅಥವಾ ಮರ ಇವುಗಳಲ್ಲಿ ಒಂದು ಚಿಹ್ನೆ ನೀಡುವರು. ಕಾರ್ಯಕರ್ತರು ಬೂತ್ ಬಿಟ್ಟು ಬರಬೇಡಿ. ಅಲ್ಲೇ ನಿಂತು ಮತ ಹಾಕಿಸಿ’ ಎಂದು ಗೂಳಿಹಟ್ಟಿ ಡಿ. ಶೇಖರ್ ಬೆಂಬಲಿಗರಿಗೆ ಮನವಿ ಮಾಡಿದರು.

ಮೆರವಣಿಗೆ; ಗೂಳಿ ಗೂಳಿ.. ಘೋಷಣೆ

ರೋಡ್ ಶೋ ಆರಂಭಕ್ಕೂ ಮೊದಲು ಗೂಳಿಹಟ್ಟಿ ಡಿ. ಶೇಖರ್ ಸೋಮಸಂದ್ರದ ಆಂಜನೇಯ ಸ್ವಾಮಿ, ಪಟ್ಟಣದ ಸಾಯಿಬಾಬಾ ಹಾಗೂ ವೀರಭದ್ರೇಶ್ವರ ಸ್ವಾಮಿ ದೇವರಿಗೆ ಪೂಜೆ ಸಲ್ಲಿಸಿದರು. ಮಧ್ಯಾಹ್ನ 12ಕ್ಕೆ ಆರಂಭವಾದ ರೋಡ್ ಶೋ ಟಿ.ಬಿ. ವೃತ್ತ ತಲುಪುವಷ್ಟರಲ್ಲಿ 2.30 ಆಗಿತ್ತು. ಮೆರವಣಿಗೆ ಉದ್ದಕ್ಕೂ ಗೂಳಿಹಟ್ಟಿ ಡಿ. ಶೇಖರ್ ಸಹಿತ ಬೆಂಬಲಿಗರೆಲ್ಲರೂ ಕೆಂಪು ವಸ್ತ್ರ ಧರಿಸಿ, ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

ತೊಗಲು ಗೊಂಬೆಗಳು ಸಹ ಇದಕ್ಕೆ ಸಾಥ್ ನೀಡಿದವು. ‘2023ಕ್ಕೆ ಹೊಸದುರ್ಗಕ್ಕೆ ಮತ್ತೊಮ್ಮೆ ಗೂಳಿ... ಗೂಳಿ.. ಗೂಳಿ..’ ಎಂಬ ಘೋಷಣೆಗಳು ಮೊಳಗಿದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.