ಶನಿವಾರ, 20 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹೊಳಲ್ಕೆರೆ | ಒಂದು ತಿಂಗಳಲ್ಲಿ ಒಳಾಂಗಣ ಕ್ರೀಡಾಂಗಣ ಸಿದ್ಧ: ಶಾಸಕ ಎಂ.ಚಂದ್ರಪ್ಪ

ಕಾಮಗಾರಿ ಪರಿಶೀಲಿಸಿದ ಶಾಸಕ ಎಂ.ಚಂದ್ರಪ್ಪ
Published 22 ಜೂನ್ 2024, 13:27 IST
Last Updated 22 ಜೂನ್ 2024, 13:27 IST
ಅಕ್ಷರ ಗಾತ್ರ

ಹೊಳಲ್ಕೆರೆ: ಒಂದು ತಿಂಗಳಲ್ಲಿ ಒಳಾಂಗಣ ಕ್ರೀಡಾಂಗಣ ಬಳಕೆಗೆ ಸಿದ್ಧವಾಗಲಿದೆ ಎಂದು ಶಾಸಕ ಎಂ.ಚಂದ್ರಪ್ಪ ತಿಳಿಸಿದರು.

ಪಟ್ಟಣದಲ್ಲಿ ನಡೆಯುತ್ತಿರುವ ಕ್ರೀಡಾಂಗಣದ ರೂಫಿಂಗ್ ಕಾಮಗಾರಿಯನ್ನು ಶನಿವಾರ ವೀಕ್ಷಿಸಿ ಅವರು ಮಾತನಾಡಿದರು.

‘₹4 ಕೋಟಿ ವೆಚ್ಚದಲ್ಲಿ ಒಳಂಗಣ ಕ್ರೀಡಾಂಗಣ ನಿರ್ಮಾಣ ಆಗುತ್ತಿದ್ದು, ರೂಫಿಂಗ್ ಕಾಮಗಾರಿ ನಡೆಯುತ್ತಿದೆ. ಕ್ರೀಡಾಂಗಣ 200 ಅಡಿ ಉದ್ದ, 100 ಅಡಿ ಅಗಲವಿದ್ದು, ವಾಲಿಬಾಲ್, ಶೆಟಲ್ ಬ್ಯಾಡ್ಮಿಂಟನ್, ಟೇಬಲ್ ಟೆನಿಸ್, ಬಾಸ್ಕೆಟ್ ಬಾಲ್ ಆಡಲು ಅವಕಾಶ ಸಿಗಲಿದೆ. ಪ್ರೇಕ್ಷಕರ ಗ್ಯಾಲರಿ, ವೀಕ್ಷಕ ವಿವರಣೆಗಾರರ ಬಾಕ್ಸ್, ಮಹಿಳೆಯರು, ಪುರುಷರಿಗೆ ಪ್ರತ್ಯೇಕ ಶೌಚಾಲಯ, ಕ್ರೀಡಾಪಟುಗಳ ವಿರಾಮಕ್ಕೆ ಪ್ರತ್ಯೇಕ ವಿಭಾಗ ಇದೆ. ಜಿಲ್ಲೆಯಲ್ಲಿಯೇ ಇದು ಸುಸಜ್ಜಿತ ಕ್ರೀಡಾಂಗಣ ಆಗಲಿದೆ’ ಎಂದರು.

‘ಕ್ರೀಡಾಂಗಣದ ಹಿಂದೆ ₹2 ಕೋಟಿ ವೆಚ್ಚದಲ್ಲಿ ಈಜುಕೊಳ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ತಾಲ್ಲೂಕು ಕ್ರೀಡಾಂಗಣಕ್ಕೆ ₹7.5 ಕೋಟಿ ಅನುದಾನ ನೀಡಿದ್ದು, ಗ್ಯಾಲರಿ ಕಾಮಗಾರಿ ನಡೆಯುತ್ತಿದೆ. ಈಗ ಮತ್ತೆ ಕ್ರೀಡಾಂಗಣ ಅಭಿವೃದ್ಧಿಗೆ ₹20 ಕೋಟಿ ಅನುದಾನ ನೀಡುತ್ತಿದ್ದು, ಪ್ರೇಕ್ಷಕರ ಗ್ಯಾಲರಿಗೆ ರೂಫಿಂಗ್, ಕ್ರೀಡಾಂಗಣದಲ್ಲಿ ಸಿಂಥೆಟಿಕ್ ಟ್ರ್ಯಾಕ್ ನಿರ್ಮಿಸಲಾಗುವುದು. ಕಾಮಗಾರಿ ಮುಗಿದ ನಂತರ ಇದು ಸುಂದರ ಕ್ರೀಡಾಂಗಣವಾಗಿ ಹೊರಹೊಮ್ಮಲಿದೆ’ ಎಂದರು.

ಪುರಸಭೆ ಸದಸ್ಯ ಮುರುಗೇಶ್, ಡಿ.ಸಿ.ಮೋಹನ್, ಎಂಜಿನಿಯರ್ ಶಿವಕುಮಾರ್, ಮಹೇಶ್ ನಾಯ್ಕ ಇದ್ದರು.

ಹೊಳಲ್ಕೆರೆ ಪಟ್ಟಣ ತಾಲ್ಲೂಕು ಕೇಂದ್ರವಾದರೂ ಕ್ರೀಡಾಂಗಣ ಇರಲಿಲ್ಲ. ಈಗ ₹35 ಕೋಟಿ ವೆಚ್ಚದಲ್ಲಿ ಸುಂದರ ಕ್ರೀಡಾಂಗಣ ನಿರ್ಮಿಸಲಾಗುತ್ತಿದ್ದು ಕ್ರೀಡಾಪಟುಗಳಿಗೆ ವಿದ್ಯಾರ್ಥಿಗಳಿಗೆ ಅನುಕೂಲ ಆಗಲಿದೆ
–ಎಂ.ಚಂದ್ರಪ್ಪ ಶಾಸಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT