ಶನಿವಾರ, 20 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹಿರಿಯೂರು | ಕನ್ಯಕಾ ಸಹಕಾರಿ ಸಂಘ: ₹ 76 ಲಕ್ಷ ನಿವ್ವಳ ಲಾಭ

Published 2 ಜುಲೈ 2024, 13:57 IST
Last Updated 2 ಜುಲೈ 2024, 13:57 IST
ಅಕ್ಷರ ಗಾತ್ರ

ಹಿರಿಯೂರು: ‘ನಗರದ ಕನ್ಯಕಾ ಸೌಹಾರ್ದ ಸಹಕಾರಿ ಸಂಘವು 2023– 24ನೇ ಸಾಲಿನಲ್ಲಿ ₹ 76 ಲಕ್ಷ ನಿವ್ವಳ ಲಾಭ ಗಳಿಸಿದ್ದು, ಷೇರುದಾರರಿಗೆ ಶೇ 24 ಲಾಭಾಂಶ ಘೋಷಿಸಲಾಗಿದೆ’ ಎಂದು ಸಂಘದ ಅಧ್ಯಕ್ಷ ಈ.ಆರ್. ರಮೇಶ್ ಬಾಬು ಹೇಳಿದರು.

ನಗರದ ಕನ್ನಿಕಾ ಮಹಲ್‌ನಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘2,415 ಷೇರು ಸದಸ್ಯರನ್ನು ಹೊಂದಿರುವ ಸಂಘದಲ್ಲಿ ₹ 28 ಕೋಟಿ ದುಡಿಯುವ ಬಂಡವಾಳವಿದ್ದು, ₹ 23 ಕೋಟಿ ಠೇವಣಿ ಸಂಗ್ರಹಿಸಲಾಗಿದೆ. ಗ್ರಾಹಕರು ಹಾಗೂ ಷೇರುದಾರರ ಹಿತ ರಕ್ಷಣೆ ಜೊತೆಗೆ ಇನ್ನಷ್ಟು ಲಾಭ ಗಳಿಸವಂತೆ ಕ್ರಮ ವಹಿಸಲಾಗುವುದು’ ಎಂದು ಅವರು ತಿಳಿಸಿದರು.

ಕಾರ್ಯಕ್ರಮದಲ್ಲಿ ದ್ವಿತೀಯ ಪಿಯು ಹಾಗೂ ಉನ್ನತ ಶಿಕ್ಷಣದಲ್ಲಿ ಹೆಚ್ಚು ಅಂಕ ಗಳಿಸಿದ ಸಂಘದ ಷೇರು ಸದಸ್ಯರ ಮಕ್ಕಳನ್ನು ಹಾಗೂ ರಾಜ್ಯ ಆರ್ಯವೈಶ್ಯ ಮಹಾಸಭಾ ವಿದ್ಯಾಸಂಸ್ಥೆಗಳ ಒಕ್ಕೂಟದ ಅಧ್ಯಕ್ಷ ಕೆ.ವಿ.ಅಮರೇಶ್ ಮತ್ತು ನಗರಸಭೆ ನಾಮ ನಿರ್ದೇಶಿತ ಸದಸ್ಯರಾದ ಸಂಘದ ಅಧ್ಯಕ್ಷ ಈ.ಆರ್. ರಮೇಶ್ ಬಾಬು ಅವರನ್ನು ಸನ್ಮಾನಿಸಲಾಯಿತು.

ಆರ್ಯವೈಶ್ಯ ಮಂಡಳಿ ಅಧ್ಯಕ್ಷ ಎಚ್.ಎಸ್.ನಾಗರಾಜಗುಪ್ತ, ಕನ್ಯಕಾ ಸಂಘದ ಉಪಾಧ್ಯಕ್ಷೆ ಎನ್.ಆರ್.ಜಯಲಕ್ಷ್ಮಿ, ನಿರ್ದೇಶಕರಾದ ಆರ್.ಅನಂತಕುಮಾರ್, ಬಿ.ಎನ್.ತಿಪ್ಪೇಸ್ವಾಮಿ, ಎಚ್.ವಿ.ಶ್ರೀನಿವಾಸಶೆಟ್ಟಿ, ಎಚ್.ಎಸ್.ಮಂಜುನಾಥ್, ಅರುಣ್ ಕುಮಾರ್, ಪಿ.ವಿ.ನಾಗರಾಜ್, ಎಸ್.ಹರ್ಷ, ಸಿ.ನವೀನ್, ಆಂಜನೇಯ ಅರಳಿಕಟ್ಟೆ, ಆರ್.ತಿಪ್ಪೇರುದ್ರಣ್ಣ, ಕೆ.ಕೃಷ್ಣಾನಾಯ್ಕ, ಜಿ.ಮಧುಸೂದನ್, ಟಿ.ಲತಾ, ಆರ್.ಪ್ರಕಾಶ್ ಕುಮಾರ್, ವಿ.ಜಗದೀಶ್, ವ್ಯವಸ್ಥಾಪಕ ಎಸ್.ರಾಮಕೃಷ್ಣ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT