ಪರಿಹಾರಕ್ಕಾಗಿ ಟ್ಯಾಂಕರ್ ನಿಲ್ಲಿಸಿ ಪ್ರತಿಭಟನೆ
ಸಿಎನ್‌ಜಿ ಸ್ಫೋಟದಿಂದ ಮೃತಪಟ್ಟವರ ಕುಟುಂಬ ಸದಸ್ಯರಿಗೆ ಪರಿಹಾರ ನೀಡಬೇಕು ಎಂದು ಒತ್ತಾಯಿಸಿ ಸಿಎನ್‌ಜಿ ಟ್ಯಾಂಕರ್ ಚಾಲಕರು ಟ್ಯಾಂಕರ್‌ಗಳನ್ನು ಇದ್ದಲ್ಲಿಯೇ ನಿಲ್ಲಿಸಿ 2 ದಿನ ಪ್ರತಿಭಟನೆ ನಡೆಸಿದರು. ₹ 40 ಲಕ್ಷ ಪರಿಹಾರ ನೀಡಬೇಕು ಎಂದು ಒತ್ತಾಯ ಮಾಡಲಾಗಿತ್ತು. ಕಡೆಗೆ ₹ 10 ಲಕ್ಷ ನೀಡಲು ಕಂಪನಿಯವರು ಒಪ್ಪಿಕೊಂಡ ನಂತರ ಪ್ರತಿಭಟನೆ ಕೈಬಿಡಲಾಗಿದೆ. ‘ಕಂಪನಿಯವರು ಆರಂಭದಲ್ಲಿ ಪರಿಹಾರ ನೀಡಲು ನಿರಾಕರಿಸಿದ್ದರು. ಆದರೆ ನಾವು ಚನ್ನಗಿರಿ ಹೊಳಲ್ಕೆರೆ ದಾವಣಗೆರೆ ಚಳ್ಳಕೆರೆಯಲ್ಲೇ ಟ್ಯಾಂಕರ್‌ನಿಂದ ಕೆಳಗಿಳಿದು ಪ್ರತಿಭಟನೆ ನಡೆಸಿದೆವು. ಹೋರಾಕ್ಕೆ ಮಣಿದ ಕಂಪನಿ ಪರಿಹಾರ ನೀಡಲು ಒಪ್ಪಿತು’ ಎಂದು ಚಾಲಕರೊಬ್ಬರು ತಿಳಿಸಿದರು.