ಬುಧವಾರ, ಅಕ್ಟೋಬರ್ 28, 2020
29 °C

ಕುಂಚಿಟಿಗರ ಅಭಿವೃದ್ಧಿ ನಿಗಮ ಘೋಷಿಸಲಿ: ಕುಂಚಿಟಿಗ ಮಠದ ಶಾಂತವೀರ ಸ್ವಾಮೀಜಿ ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೊಸದುರ್ಗ: ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಕುಂಚಿಟಿಗರ ಸಮಸ್ಯೆ ಅರಿತು ತಕ್ಷಣವೇ ಕುಂಚಿಟಿಗರ ಅಭಿವೃದ್ಧಿ ನಿಗಮ ಘೋಷಿಸಬೇಕು. ಕುಂಚಿಟಿಗರನ್ನು ಪ್ರವರ್ಗ–1ಕ್ಕೆ ಸೇರಿಸಬೇಕು. ಕೇಂದ್ರ ಹಿಂದುಳಿದ ವರ್ಗಗಳ ಪಟ್ಟಿಗೆ ಸೇರಿಸಲು ಶಿಫಾರಸು ಮಾಡಬೇಕು ಎಂದು ಕುಂಚಿಟಿಗ ಮಹಾಸಂಸ್ಥಾನ ಮಠದ ಶಾಂತವೀರ ಸ್ವಾಮೀಜಿ ಒತ್ತಾಯಿಸಿದರು.

ಮೈಸೂರಿನಲ್ಲಿರುವ ಡಿ.ಬನುಮಯ್ಯ ಅವರ ಸಮಾಧಿಗೆ ಈಚೆಗೆ ಭೇಟಿ ನೀಡಿದ ಸ್ವಾಮೀಜಿ, ಕುಂಚಿಟಿಗ ಸಮಾಜ ಹಾಗೂ ಡಿ.ಬನುಮಯ್ಯ ಅವರ ಸಮಾಧಿ ಮೇಲೆ ಅತಿಕ್ರಮಣ, ಅಪಪ್ರಚಾರ ಮಾಡಲು ಪ್ರಯತ್ನಿಸುತ್ತಿರುವುದು ಖಂಡನೀಯ ಎಂದು ಹೇಳಿದರು.

‘ಕುಂಚಿಟಿಗ ಜಾತಿಯನ್ನು ಒಡೆಯುವ ಹುನ್ನಾರ ನಡೆಯುತ್ತಿದೆ. ನಾವು ಇದನ್ನು ಸಹಿಸುವುದಿಲ್ಲ. ಸಮಾಜದ ಸಂಘಟನೆಗಾಗಿಯೇ ಸಂಗಮೇಶ್ವರ ಜಯಂತಿ, ಕುಂಚಿಟಿಗ ಸಮಾವೇಶ ಮಾಡುತ್ತಿದ್ದೇವೆ. ಕುಂಚಿಟಿಗರು ರೈತರು, ಶ್ರಮಿಕರು, ಸ್ವಾಭಿಮಾನಿಗಳು. ತಾವಾಯಿತು, ತಮ್ಮ ಕಾಯಕವಾಯಿತು ಎಂದು ಬದುಕುತ್ತಿದ್ದಾರೆ. ದೊಡ್ಡ, ದೊಡ್ಡ ಜಾತಿಯ ರಾಜಕಾರಣಿಗಳು, ಮಠಾಧೀಶರು ನಮ್ಮ ನೋವನ್ನು ಅರ್ಥಮಾಡಿಕೊಳ್ಳಬೇಕು ಎಂದು ಆಗ್ರಹಿಸಿದರು.

ಮೈಸೂರು ಕುಂಚಿಟಿಗ ಸಂಘದ ಅಧ್ಯಕ್ಷ ನಾಗರಾಜ, ಕುಂಚಿಟಿಗ ಸಂಘದ ಪದಾಧಿಕಾರಿಗಳು, ಡಿ.ಬನುಮಯ್ಯ ಅವರ ವಂಶಸ್ಥರು ಹಾಜರಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.