ಮಂಗಳವಾರ, ಮೇ 17, 2022
24 °C

ಮಠ ರಕ್ತ ಸಂಬಂಧದಿಂದ ಮುಕ್ತ: ಶಿವಮೂರ್ತಿ ಮುರುಘಾ ಶರಣರ ಹೇಳಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿತ್ರದುರ್ಗ: ಮುರುಘಾ ಮಠವನ್ನು ರಕ್ತ ಸಂಬಂಧದಿಂದ ಮುಕ್ತಗೊಳಿಸಲು ನಿರ್ಣಯ ಕೈಗೊಳ್ಳಲಾಗಿದೆ. ಮಠದ ಘನತೆ ಮತ್ತು ಗೌರವ ಕಾಪಾಡುವ ಉದ್ದೇಶದಿಂದ ಹತ್ತು ಜನರು ರಾಜೀನಾಮೆ ಸಲ್ಲಿಸಿದ್ದಾರೆ ಎಂದು ಶಿವಮೂರ್ತಿ ಮುರುಘಾ ಶರಣರು ತಿಳಿಸಿದರು.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ನಾಲ್ಕು ತಿಂಗಳ ಹಿಂದೆ ಮಠಕ್ಕೆ ಸಂಬಂಧಿಸಿದಂತೆ ವದಂತಿಯೊಂದು ಹಬ್ಬಿತ್ತು. ಸಣ್ಣ ತಪ್ಪೊಂದು ದೊಡ್ಡ ಅಪರಾಧಕ್ಕೆ ಅವಕಾಶ ಆಗಬಾರದು ಎಂಬ ಉದ್ದೇಶದಿಂದ ಶಿಸ್ತುಕ್ರಮ ಜರುಗಿಸಲಾಗಿದೆ. ಮಠಕ್ಕೆ, ಶರಣರಿಗೆ ಸಾಮಾಜಿಕ ಬದ್ಧತೆ ಇದೆ. ಇದರ ಆಧಾರದ ಮೇರೆಗೆ ಮಠ ಕಟ್ಟಲಾಗುತ್ತಿದೆ’ ಎಂದು ಹೇಳಿದರು.

‘ಮಠದಲ್ಲಿ ಸಾವಿರಾರು ಜನರು ಕಾರ್ಯನಿರ್ವಹಿಸುತ್ತಿದ್ದಾರೆ. ಒಬ್ಬೊಬ್ಬರ ಸ್ವಭಾವ ಭಿನ್ನವಾಗಿರುತ್ತದೆ. ಇತಿ–ಮಿತಿ ಮೀರಿ ನಡೆದುಕೊಳ್ಳುವ ವ್ಯಕ್ತಿಗಳ ವಿರುದ್ಧ ಕ್ರಮ ಕೈಗೊಳ್ಳುವುದು ಅನಿವಾರ್ಯ. ಯಾವುದೇ ಒತ್ತಡಗಳಿಗೂ ಮಣಿಯುವುದಿಲ್ಲ’ ಎಂದು ಮಾಹಿತಿ ನೀಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು